ಮೈಸೂರು: ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕುಗರಿಷ್ಠ ಮಟ್ಟ ದಾಟಿದ್ದು, ಕೋವಿಡ್ ಟೆಸ್ಟ್‌ಗಳನ್ನು ಮಿತಿ ಇಲ್ಲದಮಾಡುತ್ತಿರುವುದರಿಂದ ಪಾಸಿಟಿವ್ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕು ಗರಿಷ್ಠ ಮಟ್ಟ ದಾಟಿರುವುದು ನಿಜ. ಬಾಕಿ ಉಳಿದಿದ್ದಕೊರೊನಾ ಪರೀಕ್ಷಾ ವರದಿಯನ್ನು ಕಳೆದ ಮೂರು ದಿನಗಳಲ್ಲಿ ನೀಡಲಾಗಿದೆ. ಹಾಗಾಗಿ ಮೂರು ದಿನಗಳಿಂದ ಹೆಚ್ಚಿನ ಮಟ್ಟದ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೆ, ಇಂದಿನಿಂದ ಆಯಾ ದಿನಗಳ ಪಾಸಿಟಿವ್ ವರದಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಮೊದಲು ಐದು ಸಾವಿರ ಟೆಸ್ಟ್‌ಗಳುನಡೆಯುತ್ತಿದ್ದವು. ಈಗ ಹತ್ತು ಸಾವಿರದಷ್ಟು ಟೆಸ್ಟ್‌ಗಳುನಡೆಯುತ್ತಿವೆ. ಸಾರ್ವಜನಿಕರಿಗೆ ಟೆಸ್ಟ್ ಮಾಡಲು ಯಾವುದೇ ಮಿತಿ ಹಾಕಿಲ್ಲ ಎಂದು ಹೇಳಿದರು.
ಕಮಿಟಿ ರಚನೆ: ಶಾಲೆಗಳಿಗೆ ರಜೆ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಆದೇಶ ಆಗಿದೆ. ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಕಮಿಟಿರಚಿಸಲಾಗಿದೆ. ಈ ಕಮಿಟಿ ಶಾಲೆಯಲ್ಲಿ ಕಂಡು ಬರುವ ಕೇಸ್‌ಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆಈ ಕಮಿಟಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಅಧಿಕಾರಿಗಳು ಇರುತ್ತಾರೆ. ಈ ಹಿಂದೆ ಜಿಲ್ಲೆಯ ಶಾಲೆಗಳಿಗೆ ರಜೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ಆದರೆ, ಈಗ ಆ ಬಗ್ಗೆ ಕಮಿಟಿ ನಿರ್ಧಾರ ಮಾಡುತ್ತದೆ ಎಂದು ವಿವರಿಸಿದರು.
ಕೋವಿಡ್ ಸಲಹೆಗೆ ಇ-ಸಂಜೀವಿನಿ ಸಂಪರ್ಕಿಸಿ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹೆಚ್ಚಾಗಿ ಹರಡುತ್ತಿರುವ ಕಾರಣದಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ ಸಂಖ್ಯೆಯನ್ನು ನಿಯಂತ್ರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇ-ಸಂಜೀವಿನಿ ಒಪಿಡಿಆ್ಯಪ್ ಬಿಡುಗಡೆ ಮಾಡಿದೆ. ಕೋವಿಡ್ 19 ಸೋಂಕಿಗೆ ಒಳಗಾಗಿರುವ ರೋಗಿಗಳು ಐಸೋಲೇಷನ್ ನಲ್ಲಿ ಇರುವ ಕಾರಣ ಪ್ರಾಥಮಿಕ ಸಂಪರ್ಕ ಹಾಗೂ ಸಾರ್ವಜನಿಕರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸೋಂಕಿತರು ಇ-ಸಂಜೀವಿನಿ ಆಪ್ ಬಳಸಿಕೊಂಡು ಉಚಿತವಾಗಿ ತಜ್ಞ ವೈದ್ಯರ ಸಲಹೆಯನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಆಸ್ಪತ್ರೆಗೆ ಭೇಟಿ ನೀಡದೆ ಉಚಿತವಾಗಿ ಪಡೆಯಬಹುದು. ಸಾರ್ವಜನಿಕರು ಆಂಡ್ರಾಯ್ಡ ಫೋನ್ ಮೂಲಕ ಪ್ಲೆಸ್ಟೋರ್ ನಲ್ಲಿ https://play.google.com/store/apps/details?id=in.hied.esanjeevaniopd ವೆಬ್‌ಸೈಟ್ ಮೂಲಕ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.