Advertisement

ಮೈಸೂರು ಜಿಲ್ಲೆಯಲ್ಲಿ 204 ಹೊಸ ಕೋವಿಡ್ ಪ್ರಕರಣ ಪತ್ತೆ !5 ಮಂದಿ ಸಾವು

10:53 PM Jul 31, 2020 | sudhir |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಮುಂದುವೆರೆದಿದ್ದು ಶುಕ್ರವಾರ 05 ಮಂದಿ ಸೋಂಕಿತರು ಮೃತಪಟ್ಟರೆ, 204 ಮಂದಿಯಲ್ಲಿ ಸೋಂಕು ಹರಡಿರುವುದು ದೃಢಪಟ್ಟಿದೆ. ಇದರ ಜೊತೆಗೆ 302 ಮಂದಿ ಸೋಂಕಿತರು ಗುಣಮುಖರಾಗಿದ್ದು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ಮೈಸೂರಿನಲ್ಲಿಂದು 204 ಹೊಸ ಕೋವಿಡ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,217 ಕ್ಕೇರಿದೆ.

ಇಂದು 302 ಕೋವಿಡ್ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ಆಗಿದ್ದಾರೆ. ಇದುವರೆಗೂ 1,517 ಮಂದಿ ಕೋವಿದ್ ಸೋಂಕಿತರು ಗುಣಮುಖರಾಗಿದ್ದಾರೆ . ಜಿಲ್ಲೆಯಲ್ಲಿ ಸಧ್ಯಕ್ಕೆ 2558 ಸಕ್ರಿಯ ಪ್ರಕರಣಗಳಿವೆ.

ಇಂದು 05 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದುವು. ಜಿಲ್ಲೆಯಲ್ಲಿ ಇದುವರೆಗೆ 142 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next