Advertisement
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತ ಬೇಟೆಗೆ ಇಳಿದಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ 4 ದಿನಗಳ ಕಾಲ ಮೈಸೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರು ಸಚಿವರು, ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ.
Related Articles
ಪ್ರತಿ ಕ್ಷೇತ್ರದಲ್ಲಿ ಪ್ರಬಲ ಜಾತಿಗಳ ಮತಗಳನ್ನು ಸೆಳೆಯಲು ಮುಂದಾಗಿರುವ ಸಿಎಂ, ಆಯಾ ಜಾತಿಯ ಮುಖಂಡರನ್ನು ಕರೆದು ಆಪ್ತತೆಯಿಂದ ಮಾತನಾಡಿಸಿ, ಅವರಿಗೆ ಆಯಾ ಜಾತಿಯ ಮತಗಳನ್ನು ಹೆಚ್ಚಾಗಿ ತರಲು ಸ್ಥಳೀಯ ಮಟ್ಟದ ಉಸ್ತುವಾರಿ ವಹಿಸುತ್ತಿದ್ದಾರೆ. ಹಾಗೆಯೇ ಈ ಮುಖಂಡರು ಬೂತ್ ಮಟ್ಟದಲ್ಲಿರುವ ತಮ್ಮ ಜಾತಿಯ ಪ್ರಮುಖರನ್ನು ಸಂಪರ್ಕಿಸಿ ಪಕ್ಷಕ್ಕೆ ಆದಷ್ಟೂ ಹೆಚ್ಚು ಮತವನ್ನು ಕೊಡಿಸುವಂತೆ ಓಲೈಸುವಲ್ಲಿ ನಿರತರಾಗಿದ್ದಾರೆ. ಜತೆಗೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾಕ ಮತಗಳು ವಿಭಾಗ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದು ಚಾಮರಾಜನಗರ ಕ್ಷೇತ್ರದ ಜವಾಬ್ದಾರಿಯನ್ನು ಮಹದೇವಪ್ಪ ಹೆಗಲಿಗೆ ಹಾಕಿದ್ದು, ಪುತ್ರ ಯತೀಂದ್ರಗೆ ವರುಣಾ, ಎಚ್.ಡಿ.ಕೋಟೆ, ನಂಜನಗೂಡು ಭಾಗದ ಜವಾಬ್ದಾರಿ ವಹಿಸಿದ್ದರೆ, ಮೈಸೂರು ಗ್ರಾಮಾಂತರ ಭಾಗದ ಜವಾಬ್ದಾರಿಯನ್ನು ಸಚಿವ ಕೆ.ವೆಂಕಟೇಶ್‌ಗೆ ನೀಡಿ ಲಕ್ಷ್ಮಣ್ ಪರ ಸ್ಥಳೀಯರನ್ನು ಒಗ್ಗೂಡಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
Advertisement
– ಸತೀಶ್ ದೇಪುರ