Advertisement

ಮೈಸೂರು-ಚಾಮರಾಜನಗರ: 60 ಸಾವಿರ ರೈತರ ಸಾಲಮನ್ನಾ

11:40 AM Jun 24, 2017 | Team Udayavani |

ಮೈಸೂರು: ಸತತ ನಾಲ್ಕು ವರ್ಷಗಳ ಭೀಕರ ಬರಗಾಲದಿಂದ ತತ್ತರಿಸಿದ್ದ ರಾಜ್ಯದ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯಸರ್ಕಾರ ಸಹಕಾರಿ ರಂಗದ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿದ್ದ ಸಾಲದ ಪೈಕಿ 50 ಸಾವಿರ ರೂ.ವರೆಗಿನ ಸಾಲಮನ್ನಾ ಘೋಷಣೆ ಮಾಡಿರುವುದರಿಂದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ 60674 ರೈತರಿಗೆ ಅನುಕೂಲವಾಗಲಿದೆ.

Advertisement

ಸರ್ಕಾರದ ಸಾಲಮನ್ನಾ ಘೋಷಣೆಯಿಂದಾಗಿ ಎಂಡಿಸಿಸಿ ಬ್ಯಾಂಕ್‌ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆಯಲ್ಲಿ 42290 ರೈತರ 176.74 ಕೋಟಿ ರೂ. ಹಾಗೂ ಚಾಮರಾಜ ನಗರ ಜಿಲ್ಲಾ ವ್ಯಾಪ್ತಿಗೆ ಬರುವ 18384 ರೈತರ 70.56 ಕೋಟಿ ರೂ. ಸೇರಿದಂತೆ ಒಟ್ಟಾರೆ ಎರಡೂ ಜಿಲ್ಲೆಗಳ 60674 ರೈತ ಸದಸ್ಯರಿಂದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ 469.10 ಕೋಟಿ ರೂ. ಹೊರಬಾಕಿ ಇದೆ. ಈ ಪೈಕಿ ಪ್ರತಿ ಸದಸ್ಯರಿಗೆ 50 ಸಾವಿರ ರೂ.ಗಳವರೆಗೆ ಸಾಲಮನ್ನಾ ಮಾಡಿದಲ್ಲಿ ಎರಡೂ ಜಿಲ್ಲೆಗಳ 60674 ರೈತರ 247.30 ಕೋಟಿ ಮನ್ನಾ ಆಗಲಿದೆ.

2017ರ ಮೇ 31ರ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಎಂಡಿಸಿಸಿ ಬ್ಯಾಂಕ್‌, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ 25 ಸಾವಿರದವರೆಗೆ ಸಾಲ ಪಡೆದಿರುವ 7410 ರೈತರಿಂದ 14.18 ಕೋಟಿ ಹೊರಬಾಕಿ ಇದೆ. ಅದೇ ರೀತಿ 25 ರಿಂದ 50 ಸಾವಿರ ರೂ.ಗಳವರೆಗೆ ಸಾಲಪಡೆದಿರುವ 11411 ರೈತರಿಂದ 45.21 ಕೋಟಿ, 50 ರಿಂದ 75 ಸಾವಿರ ರೂ.ವರೆಗೆ ಸಾಲಪಡೆದಿರುವ 7264 ರೈತರಿಂದ 46.53 ಕೋಟಿ, 75 ರಿಂದ 1 ಲಕ್ಷ ರೂ.ಗಳವರೆಗೆ ಸಾಲಪಡೆದಿರುವ 5899 ರೈತರಿಂದ 54.76 ಕೋಟಿ, 1 ಲಕ್ಷ ದಿಂದ 2 ಲಕ್ಷ ರೂ.ಗಳವರೆಗೆ ಸಾಲಪಡೆದಿರುವ 7618 ರೈತರಿಂದ 107.43 ಕೋಟಿ, 2 ರಿಂದ 3 ಲಕ್ಷ ರೂ.ವರೆಗೆ ಸಾಲಪಡೆದಿರುವ 2669 ರೈತರಿಂದ 69.42 ಕೋಟಿ ಹಾಗೂ 3 ಲಕ್ಷ ಮೇಲ್ಪಟ್ಟು ಸಾಲಪಡೆದಿರುವ 19 ರೈತರಿಂದ 0.90 ಲಕ್ಷ ಹೊರ ಬಾಕಿ ಬರಬೇಕಿದೆ.

ಈ ಪೈಕಿ ಸರ್ಕಾರ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿರುವುದರಿಂದ 25 ಸಾವಿರ ರೂ.ವರೆಗೆ ಸಾಲಪಡೆದಿರುವ 7410 ರೈತರ 14.18 ಕೋಟಿ, 25 ರಿಂದ 50 ಸಾವಿರ ರೂ.ಗಳವರೆಗೆ ಸಾಲಪಡೆದಿರುವ 11311 ರೈತರ 45.21 ಕೋಟಿ ಸೇರಿದಂತೆ ಒಟ್ಟಾರೆ 18821 ರೈತರ 59.39 ಕೋಟಿ ರೂ. ಸಾಲ ಸಂಪೂರ್ಣ ಮನ್ನಾ ಆಗಲಿದೆ. ಉಳಿದಂತೆ 50 ರಿಂದ 75 ಸಾವಿರ ರೂ.ವರೆಗಿನ ಸಾಲಪಡೆದಿರುವವವರ 36.32 ಕೋಟಿ, 75 ರಿಂದ 1 ಲಕ್ಷ ಸಾಲಪಡೆದಿರುವವರ 29.50 ಕೋಟಿ, 1 ರಿಂದ 2 ಲಕ್ಷದವರೆಗೆ ಸಾಲಪಡೆದಿರುವವರ 38.09 ಕೋಟಿ, 2 ರಿಂದ 3 ಲಕ್ಷಗಳವರೆಗೆ ಸಾಲ ಪಡೆದಿರುವವರ 13.35 ಕೋಟಿ ಹಾಗೂ 3 ಲಕ್ಷ ಮೇಲ್ಪ$ಟ್ಟು ಸಾಲಪಡೆದಿರುವವರ 10 ಲಕ್ಷ ರೂ. ಮನ್ನಾ ಆಗಲಿದೆ.

ಚಾಮರಾಜ ನಗರ ಜಿಲ್ಲೆಯಲ್ಲಿ 25 ಸಾವಿರದವರೆಗೆ ಸಾಲ ಪಡೆದಿರುವ 4612 ರೈತರಿಂದ 7.50 ಕೋಟಿ ಹೊರಬಾಕಿ ಇದೆ. 25 ರಿಂದ 50 ಸಾವಿರ ರೂ.ಗಳವರೆಗೆ ಸಾಲಪಡೆದಿರುವ 5626 ರೈತರಿಂದ 22.33 ಕೋಟಿ, 50 ರಿಂದ 75 ಸಾವಿರ ರೂ.ವರೆಗೆ ಸಾಲಪಡೆದಿರುವ 2957 ರೈತರಿಂದ 18.99 ಕೋಟಿ, 75 ರಿಂದ 1 ಲಕ್ಷ ರೂ.ಗಳವರೆಗೆ ಸಾಲಪಡೆದಿರುವ 2291 ರೈತರಿಂದ 20.28 ಕೋಟಿ, 1 ಲಕ್ಷ ದಿಂದ 2 ಲಕ್ಷ ರೂ.ಗಳವರೆಗೆ ಸಾಲಪಡೆದಿರುವ 2354 ರೈತರಿಂದ 13247 ಕೋಟಿ, 2 ರಿಂದ 3 ಲಕ್ಷ ರೂ.ವರೆಗೆ ಸಾಲಪಡೆದಿರುವ 544 ರೈತರಿಂದ 29.10 ಕೋಟಿ ರೂ. ಹೊರ ಬಾಕಿ ಇದ್ದು, ಚಾಮರಾಜ ನಗರ ಜಿಲ್ಲೆಯಲ್ಲಿ 3 ಲಕ್ಷ ರೂ. ಮೇಲ್ಪ$ಟ್ಟು ಯಾವುದೇ ರೈತರು ಸಾಲಪಡೆದಿಲ್ಲ.

Advertisement

ಈ ಪೈಕಿ 25 ಸಾವಿರ ರೂ.ವರೆಗೆ ಸಾಲಪಡೆದಿರುವ 4612 ರೈತರ 7.50 ಕೋಟಿ, 25 ರಿಂದ 50 ಸಾವಿರ ರೂ.ಗಳವರೆಗೆ ಸಾಲಪಡೆದಿರುವ 5626 ರೈತರ 22.33 ಕೋಟಿ ಸೇರಿದಂತೆ ಒಟ್ಟಾರೆ 10238 ರೈತರ 29.83 ಕೋಟಿ ರೂ. ಸಾಲ ಸಂಪೂರ್ಣ ಮನ್ನಾ ಆಗಲಿದೆ. ಉಳಿದಂತೆ 50 ರಿಂದ 75 ಸಾವಿರ ರೂ.ವರೆಗಿನ ಸಾಲಪಡೆದಿರುವವವರ 14.79 ಕೋಟಿ, 75 ರಿಂದ 1 ಲಕ್ಷ ಸಾಲಪಡೆದಿರುವವರ 11.46 ಕೋಟಿ, 1 ರಿಂದ 2 ಲಕ್ಷದವರೆಗೆ ಸಾಲಪಡೆದಿರುವವರ 11.77ಕೋಟಿ, 2 ರಿಂದ 3 ಲಕ್ಷಗಳವರೆಗೆ ಸಾಲಪಡೆದಿರುವವರ 2.72 ಕೋಟಿ ರೂ. ಸಾಲಮನ್ನಾ ಆಗಲಿದೆ.

ಸರ್ಕಾರದ ಸಾಲಮನ್ನಾ ಘೋಷಣೆಯಂತೆ ಸದ್ಯದ ಮಾಹಿತಿ ಪ್ರಕಾರ ಎರಡೂ ಜಿಲ್ಲೆಗಳ 60674 ರೈತ ಸದಸ್ಯರಿಗೆ 247.30 ಕೋಟಿ ಸಾಲಮನ್ನಾ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲಗಳ ನವೀಕರಣದ ಮಾಹಿತಿ ಎಲ್ಲ ಶಾಖೆಗಳಿಂದ ತಿಂಗಳಾಂತ್ಯಕ್ಕೆ ಬರಲಿದ್ದು, ಆಗ ಈ ಅಂಕಿ ಅಂಶ ವ್ಯತ್ಯಾಸವಾಗುವ ಸಾಧ್ಯತೆ ಇದೆ.
-ಬಿ.ನಾಗರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಂಡಿಸಿಸಿ ಬ್ಯಾಂಕ್‌

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next