ಮುಂಬಯಿ: ನ್ಯಾಯಾಲಯದ ತೀರ್ಪುಗಳ ಮೇರೆಗೆ ಶಿಕ್ಷೆ ಅನುಭವಿಸಲು ಜೈಲು ಸೇರಿದ ಬಂಧಿಗಳಿಗೆ ಜೈಲು ಎಂಬುವುದು ಶಿಕ್ಷೆಯ ತಾಣ ಎಂದಾಗಬಾರದು. ಅವರ ಮನ ಪರಿವರ್ತ ನೆಯ ಶಿಕ್ಷೆಯ ಜಾಗವಾಗಬೇಕೆಂದು ನಮ್ಮ ಧ್ಯೇಯವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈದಿಗಳೊಂ ದಿಗೆ ಅನಾರಿಕರಾಗಿ ವರ್ತಿಸದಂತೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಸದಾ ಜಾಗೃತರಾಗಬೇಕಾಗಿದೆ. ಕೈದಿಗಳ ಜೊತೆ ಪೊಲೀಸ್ ಸಿಬ್ಬಂದಿಗಳು ಮಾನವೀಯ ನೆಲೆಯಲ್ಲಿ ವರ್ತಿಸಬೇಕಾಗಿದೆ. ಜೈಲಿನಲ್ಲಿ ಕೈದಿಗಳಿಗೆ ಶಿಕ್ಷೆಯಾಗಬಾರದು. ಅವರನ್ನು ಪ್ರೀತಿ, ಗೌರವದಿಂದ ಕಂಡು ಮನ:ಪರಿವರ್ತಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹಿರಿಯ ಪೊಲೀಸ್ ಕರ್ನಾಟಕ ರಾಜ್ಯ ಎಡಿಜಿಪಿ ಎನ್.ಎಸ್ ಮೇಘರಿಖ್ ಐಪಿಎಸ್ ಹೇಳಿದರು.
ನಾಡಹಬ್ಬದ ಪ್ರಯುಕ್ತ ಅ. 14 ರಂದು ಸಂಜೆ ಮಾಟುಂಗಾ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ನಡೆದ “ರಂಗಭೂಮಿಯಿಂದ ಸಮಾಜ ಸುಧಾರಣೆ’ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಿಂದ ಕೈದಿಗಳಿಗೆ ತಾವು ಕೈದಿ ಎಂಬ ಭಾವನೆ ದೂರಗೊಂಡು ಸಮಾಜದಲ್ಲಿ ಅವರಿಗೂ ಗೌರವ, ಪ್ರೀತಿ ಲಭಿಸುತ್ತದೆ ಎಂದರು.
ನಾಗ್ಪುರ ಜಿಲ್ಲಾ ಐಜಿಪಿ ಕೆ. ಎಂ. ಎಂ. ಪ್ರಸನ್ನ ಐಪಿಎಸ್, ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಗೋಪಾಲ್ ಹೊಸೂರು, ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ, ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷೆ ಕಮಲಾ ಕಾಂತರಾಜ್ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
ಕೆ. ಎಂ. ಎಂ. ಪ್ರಸನ್ನ ಮಾತನಾಡಿ, ನಾಗರಿಕತೆ ಪ್ರಾರಂಭವಾದ ದಿನದಿಂದ ಅಪರಾಧ ಶುರುವಾಗಿದೆ. ನಾಗರಿಕತೆ ಬೆಳೆದಂತೆ ಅಪರಾಧಿ ವಿಧಾನಗಳು ಅಂತೆಯೇ ಶಿಕ್ಷೆಯ ಕ್ರಮಗಳೂ ಬದಲಾವ ಣೆಗೊಂಡಿದೆ. ಅಪರಾಧಿಗಳು ವಿವೇಚನೆ ಇಲ್ಲದೆ ಎಸಗಿದ ಅಪರಾಧ ಎಂದು ತಿಳಿದುಕೊಂಡಾಗ ಜೈಲುಗಳು ಪರಿವರ್ತನೆಯ ಸ್ಥಳವಾಗಿ ಗುರುತಿಸಿಕೊಳ್ಳು ತ್ತಿದೆ ಹಾಗೂ ರಂಗಭೂಮಿಯಿಂದ ಈ ಪ್ರಕ್ರಿಯೆ ಪ್ರಾರಂಭವಾದುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ನುಡಿದರು.
ಕೈದಿಗಳ ಮೇಲಿರುವ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಡೆಸಿರುವ ಇಂತಹ ಪ್ರಯೋಗ ಸ್ತುತ್ಯಾರ್ಹ. ಈ ಯೋಜನೆಯು ಹೆಚ್ಚು ಫಲಕಾರಿಯಾಗಿದೆ. ಬಹುಮುಖ ಚಟುವಟಿಕೆಗಳಲ್ಲಿ ಭಾಗಿಯಾದರೆ ಮಾನಸಿಕ ತೃಮುಲ ಕಡಿಮೆಯಾಗುತ್ತಾ ವ್ಯಕ್ತಿಯೇ ತನ್ನ ಸಮಸ್ಯೆಗಳಿಂದ ಹೊರ ಬರುತ್ತಾನೆ. ಕಟ್ಟಿಮನಿ ಅವರು ಮಾಡುತ್ತಿರುವ ಈ ಅದ್ಭುತ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ಜೈಲಿನಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆ ಸಂಕಲ್ಪ ಯೋಜನೆಯ ಯಶಸ್ವಿಯಾಗುತ್ತಿದೆ ಎಂದು ಗೋಪಾಲ ಹೊಸೂರು ಅವರು ತಿಳಿಸಿದರು.
ಕಪ್ಪಣ್ಣ ಮಾತನಾಡಿ, ಕಾರಾಗೃಹದಲ್ಲಿರುವ ಬಂಧಿಗಳಿಗೆ ನಟನೆಯ, ತರಬೇತಿ ನೀಡಿ ಅವರನ್ನು ಪರಿವರ್ತನೆಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಅದ್ಭುತ ಚಳವಳಿಗೆ ಕರ್ನಾಟಕ ಸರಕಾರದ ಸಹಕಾರ ಅನುಪಮ. ಉತ್ತಮ ನಾಯಕರು ರಂಗಭೂಮಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ, ಉತ್ತಮ ಗುಣ ಮಟ್ಟವನ್ನು ಕಾಯ್ದಿರಿಸಿರುವ ಸಂಕಲ್ಪ ಎಂಬ ಯೋಜನೆಯ ಬಗ್ಗೆ ಸರಕಾರವು ಆಸಕ್ತಿ ವಹಿಸಿರುವುದು ಸಂತಸ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೇ ಪ್ರಥಮವಾದುದು ಎಂದರು.
ಕಾರ್ಯಕ್ರಮದ ಅಂಗವಾಗಿ ರಂಗ ತರಬೇತಿಯಿಂದ “ಸಮಾಜ ಸುಧಾರಣೆ’ ದಾಖಲೆಚಿತ್ರ ಪ್ರದರ್ಶಿಸಲ್ಪಟ್ಟಿತು. ರಾತ್ರಿ ಹುಲುಗಪ್ಪ ಕಟ್ಟಿàಮ ಪರಿಕಲ್ಪನೆ ಮತ್ತು ಪ್ರಧಾನ ನಿರ್ದೇಶನ ಹಾಗೂ ಪಿ. ಎಸ್. ರಾಘವೇಂದ್ರ ಹೆಗ್ಗೊàಡು ನಿರ್ದೇಶನದಲ್ಲಿ ಮೈಸೂರು ಸೆರೆಮನೆಯಲ್ಲಿರುವ ಸೆರೆಯಾಳು ಕಲಾವಿದರು “ಸಂಗ್ಯಾ ಬಾಳಾÂ’ ಜಾನಪದ ನಾಟಕ ಪ್ರದರ್ಶಿಸಿದರು. ಮೈಸೂರು ಅಸೋಸಿಯೇಶನ್‌ನ ಕೆ. ಮಂಜುನಾಥ್, ವ್ಯವಸ್ಥಾಪಕ ಬಿ.ಕೆ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು. ಪ್ರಸಿದ್ಧ ಗಾಯಕಿಯರುಗಳಾದ ಡಾ| ಶ್ಯಾಮಲಾ ಪ್ರಕಾಶ್ ಮತ್ತು ಶ್ಯಾಮಲಾ ರಾಧೇಶ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಡಾ| ಬಿ. ಆರ್. ಮಂಜುನಾಥ್ ಸ್ವಾಗತಿಸಿ ಪ್ರಸ್ತಾವನೆಗೈದರು. ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್