Advertisement
ಫೆ. 17 ರಂದು ಬೆಳಗ್ಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್ ಮುಂಬಯಿ ಜಂಟಿ ಆಯೋಜನೆಯಲ್ಲಿ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಆಯೋಜಿಸಿದ್ದ ಮೈಸೂರು ಅಸೋಸಿಯೇಶನ್ ಬಂಗಾರ ಹಬ್ಬ ದತ್ತಿ ಉಪನ್ಯಾಸದ ಎರಡನೆ ದಿನ ನಾನು ಮತ್ತು ನನ್ನ ಸಿನಿಮಾ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ತಾವು ನಿರ್ದೇಶಿಸಿದ ಕಾಡಿನ ಬೆಂಕಿಯಿಂದ ಹಿಡಿದು ಅಮೇರಿಕಾ ಅಮೇರಿಕಾ ಹಾಗೂ ಇತ್ತೀಚೆಗಿನ ಇಷ್ಟಕಾಮ್ಯದವರೆಗೆ ತಮ್ಮ ವಿವಿಧ ತರದ, ಸಿಹಿ- ಕಹಿ ಅನುಭವಗಳನ್ನು, ಸೋಲು ಗೆಲುವಿನ ದಾರಿಯನ್ನು ಸವೆಸಿದ ರೀತಿಯನ್ನು ತೆರೆದಿಟ್ಟರು.
ಮೈಸೂರು ಅಸೋಸಿಯೇಶನ್‌ನ ಜಾಗತಿಕ ಮಟ್ಟದ ಕಥಾ ಸ್ಪರ್ಧೆಯ ತೀರ್ಪುಗಾರರು ಹಾಗೂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರು ಅವರು ಕಥೆಗಾರರು ಇನ್ನಷ್ಟು ಮಾಗಬೇಕು. ಮಾಸ್ತಿಯವರನ್ನು ಅನುಸರಿಸಿದರೆ ಸಾಲದು. ಅವರ ಮಟ್ಟಕ್ಕೆ ಏರುವ ಪ್ರಯತ್ನ ಮಾಡಬೇಕು. ಅದಕ್ಕೆ ಸತತ ಓದು ಅಗತ್ಯ ಎಂದು ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದರು.
Related Articles
ಬಹುಮುಖ ಪ್ರತಿಭೆಯ ನಾಗತಿಹಳ್ಳಿ ಚಂದ್ರಶೇಖರ ಅವರು ಸಿನೆಮಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದವರು. ಮೂಲತ: ಸಾಹಿತಿಯಾಗಿ ಸಿನೆಮಾ ಕ್ಷೇತ್ರಕ್ಕೆ ತಮ್ಮದೇ ಆದ ಮಹತ್ವದ ಯೋಗದಾನ ನೀಡಿದ್ದಾರೆ ಎಂದು ನಾಗತಿಹಳ್ಳಿ ಅವರನ್ನು ಅಭಿನಂದಿಸಿದರು.
Advertisement
ಇದೇ ಸಂದರ್ಭದಲ್ಲಿ ಬೇಂದ್ರೆ ಕಾವ್ಯಕೂಟ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂಎ ವಿದ್ಯಾರ್ಥಿನಿ ಅನಿತಾ ಪೂಜಾರಿ ತಾಕೋಡೆ ಅವರನ್ನು ಗೌರವಿಸಲಾಯಿತು ಪದ್ಮನಾಭ ಅವರು ಸ್ವಾಗತ ಗೀತೆ ಹಾಡಿದರು. ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷರಾದ ಕೆ. ಕಮಲಾ ಅವರು ವಂದಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ಅಸೋಸಿಯೇಶನ್ ಆಯೋಜಿಸಿದ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಮುಸ್ತಾಫ ಕೆ. ಎಚ್ ಮಂಗಳೂರು ಪ್ರಥಮ, ದಿವ್ಯಾ ಕಾರಂತ ಬೆಂಗಳೂರು ದ್ವಿತೀಯ, ಹುಳಗೋಳ ನಾಗಪತಿ ಹೆಗಡೆ, ಅಂಕೋಲಾ ತೃತೀಯ, ಪ್ರವೀಣ್ ಕುಮಾರ್ ಜಿ. ಬೆಂಗಳೂರು ಹಾಗೂ ಎಸ್. ಜಿ. ಶಿವಶಂಕರ್ ಮೈಸೂರು ಅವರು ಪ್ರೋತ್ಸಾಹ ಬಹುಮಾನವನ್ನು ಪಡೆದುಕೊಂಡರು. ಖ್ಯಾತ ಸಾಹಿತಿ ಸುನಂದಾ ಕಡಮೆ ಹುಬ್ಬಳ್ಳಿ ಹಾಗೂ ಡಾ| ವ್ಯಾಸರಾವ್ ನಿಂಜೂರು ಮುಂಬಯಿ ಇವರು ತೀರ್ಪುಗಾರರಾಗಿ ಸಹಕರಿಸಿದ್ದರು. ನಾರಾಯಣ ನವಿಲೇಕರ್ ಅವರು ಕಥಾ ಸ್ಪರ್ಧೆಯ ವಿಜೇತರನ್ನು ಪರಿಚಯಿಸಿ ಯಾದಿಯನ್ನು ಓದಿದರು. ವಿಜೇತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.