Advertisement

ಮೈಸೂರು: 38 ಸೋಂಕಿತರು

05:10 AM Jul 05, 2020 | Team Udayavani |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶನಿವಾರ 38 ಹೊಸ ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 400ರ ಗಡಿದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 411ಕ್ಕೇರಿಕೆಯಾಗಿದೆ. 21 ಮಂದಿ ಗುಣಮುಖವಾಗಿ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರ ಸಂಖ್ಯೆಯೂ 240ಕ್ಕೇರಿದೆ. 167 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ನಾಲ್ವರು ಸಾವನ್ನಪ್ಪಿದ್ದಾರೆ.  ಶನಿವಾರ ಸೋಂಕು ದೃಢಪಟ್ಟ 38 ಮಂದಿಯಲ್ಲಿ 13 ಮಂದಿಗೆ ತೀವ್ರ ಉಸಿರಾಟದ ತೊಂದರೆ, ಜ್ವರದ ಲಕ್ಷಣಗಳಿದ್ದರೆ, 15 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ಹರಡಿದೆ. ಜೊತೆಗೆ ನಾಲ್ವರು ಪೊಲೀಸ್‌ ಸಿಬ್ಬಂದಿಗೂ ಸೋಂಕು  ತಗುಲಿದ್ದು, ಗರ್ಭಿಣಿಯಲ್ಲೂ ಕೋವಿಡ್‌ 19 ಹರಡಿದೆ. ಒಬ್ಬರು ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿದ್ದರೆ, ನಾಲ್ವರು ಅಂತರ ಜಿಲ್ಲಾಪ್ರವಾಸ ಮಾಡಿದವರು.

ಕ್ವಾರಂಟೈನ್: ವಿವಿಧ ರಾಜ್ಯ ಮೈಸೂರಿಗೆ ವಾಪಸಾಗಿರುವ 3100 ಮಂದಿ ಕ್ವಾರಂಟೈನಲ್ಲಿದ್ದಾರೆ. ಅವರಲ್ಲಿ 56 ಮಂದಿ 7 ದಿನಗಳ ಫೆಸಿಲಿಟಿ ಕ್ವಾರಂಟೈನ್‌ನಲ್ಲೂ, 3,030 ಮಂದಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಹೊಸ  ಕಂಟೈನ್ಮೆಂಟ್‌: ಮೈಸೂರಿನ ಜ್ಯೋತಿನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಬ್ಲಾಕ್‌, ಜೆ.ಸಿ.ನಗರದ ಮೊದಲ ಹಂತ, ಸುಭಾಷ್‌ನಗರದ 3ನೇ ಹಂತ, ಹೆಬ್ಟಾಳು ಬಡಾವಣೆ ಸಂಕ್ರಾಂತಿ ವೃತ್ತದ 26ನೇ ಕ್ರಾಸ್‌, ಮೈಸೂರಿನ ಎನ್‌.ಆರ್‌. ಮೊಹಲ್ಲಾದ ಸೇಂಟ್‌ ಮೆರಿಸ್‌ ರಸ್ತೆ 8ನೇ ಕ್ರಾಸ್‌, ಮೈಸೂರಿನ ಹೆಬ್ಟಾಳು ಬಡಾವಣೆಯ 11ನೇ ಕ್ರಾಸ್‌, ಎರಡನೇ  ಸೆಕೆಂಡ್‌ ಸ್ಟ್ರೀಟ್‌, ಹೆಚ್‌.ಡಿ.ಕೋಟೆ ತಾಲೂಕಿನ ಸರಗೂರು ಹೋಬಳಿಯ ಪುರದಕಟ್ಟೆ ಹಾಗೂ ಹುಣಸೂರು ಪಟ್ಟಣದ  ಬಂಟ್ವಾಳ-ಮೈಸೂರು ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಅಡ್ಡರಸ್ತೆ ನಿಬಂìಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next