ಬ್ಯಾಂಕಾಕ್ : ಮ್ಯಾನ್ಮಾರ್‌ನ ಪ್ರಜಾಪ್ರಭುತ್ವವಾದಿ ನಾಯಕಿ ಆ್ಯಂಗ್ ಸ್ಯಾನ್ ಸೂ ಕಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗಲಿಲ್ಲ.
ಅವರ ಪರ ವಕೀಲರು, ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
ಸ್ಯೂ ಕಿ ವಿರುದ್ಧ ದೇಶದ ಹಿತಾಸಕ್ತಿಗೆ ಮಾರಕವಾಗುವ ಮಾಹಿತಿ ಹರಡಿಸಿದ ಮತ್ತು 2020ರಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸಿದ, ಭದ್ರತಾ ಸಿಬ್ಬಂದಿಗೆ ಆಮದು ನಿಯಮ ಉಲ್ಲಂಘಿಸಿ ವಿದೇಶದಿಂದ ವಾಕಿಟಾಕಿ ಖರೀದಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.
ಅವರನ್ನು ಫೆ.1ರಂದು ಸೇನೆ ವಶಕ್ಕೆ ತೆಗೆದುಕೊಂಡಿತ್ತು.
ಇದನ್ನೂ ಓದಿ :ಸಹಕಾರಿ ಬ್ಯಾಂಕ್‌ನಲ್ಲಿ 300 ಕೋಟಿ ರೂ. ಅವ್ಯವಹಾರ ಪ್ರಕರಣ : ನಾಲ್ವರ ಬಂಧನ