Advertisement

ಅಂಡಮಾನ್‌ ಸಮುದ್ರದಲ್ಲಿ ಮ್ಯಾನ್ಮಾರ್‌ ವಿಮಾನ ಪತನ : 122 ಬಲಿ 

09:42 AM Jun 08, 2017 | Team Udayavani |

ಯಾಂಗಾನ್‌(ಮ್ಯಾನ್ಮಾರ್‌): ಬುಧವಾರ ದಿಢೀರ್‌ ರಾಡಾರ್‌ ಸಂಪರ್ಕ ಕಳೆದುಕೊಂಡಿದ್ದ ಮ್ಯಾನ್ಮಾರ್‌ ನ ಚೀನಿ ನಿರ್ಮಿತ ಯುದ್ಧ ವಿಮಾನ ಅಂಡಮಾನ್‌ ಸಮುದ್ರದಲ್ಲಿ ಪತನವಾಗಿದ್ದು, ಮ್ಯಾನ್ಮಾರ್‌ನ 35ಕ್ಕೂ ಅಧಿಕ ಯೋಧರು ಸೇರಿದಂತೆ 122 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

100ಕ್ಕೂ ಅಧಿಕ ಯೋಧರು ಮೈಯೆಕ್‌ನಿಂದ ಯಾಂಗಾನ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಪತನವಾಗಿದೆ,.ವಿಮಾನದ ಅವಶೇಷಗಳು ಕೆಲ  ಗಂಟೆಗಳ ನಂತರ  ಗುರುವಾರ ಬೆಳಗ್ಗೆ ಅಂಡಮಾನ್‌ ಸಮುದ್ರದಲ್ಲಿ ಪತ್ತೆಯಾಗಿದ್ದು, ವಿಮಾನದಲ್ಲಿನ ಅಷ್ಟೂ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕೆಲವರ ಶವಗಳೂ ಪತ್ತೆಯಾಗಿವೆ. 

9 ನೌಕಾಪಡೆಯ ಹಡಗುಗಳು ಮತ್ತು ವಾಯುಪಡೆಯ 3 ವಿಮಾನಗಳು ಶೋಧ ನಡೆಸುವ ವೇಳೆ ವಿಮಾನದ ಅವಶೇಷಗಳು ಪತ್ತೆಯಾಗಿವೆ. 

ವಿಮಾನದಲ್ಲಿ 35 ಯೋಧರು, ಅವರ ಕುಟುಂಬವರ್ಗ, 15 ಮಕ್ಕಳು ಸೇರಿ 108 ಮಂದಿ ಪ್ರಯಾಣಿಕರ ಜೊತೆಗೆ 14 ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಚೀನಿ ನಿರ್ಮಿತ ದೋಷಪೂರಿತ ವಿಮಾನ
ಈ ವಿಮಾನವನ್ನು ಮ್ಯಾನ್ಮಾರ್‌ನ ಹಿಂದಿನ ಸರಕಾರ ಚೀನಾದಿಂದ ಖರೀದಿಸಿತ್ತು. ಪಾಶ್ಚಿ ಮಾತ್ಯ ರಾಷ್ಟ್ರಗಳು ದೋಷಪೂರಿತ ಎಂಬ ಕಾರ ಣಕ್ಕೆ ಈ ವಿಮಾನ ಬಳಕೆಯನ್ನು ನಿಷೇಧಿಸಿತ್ತು. ಅದರಲ್ಲಿನ ಸುರಕ್ಷತಾ ವ್ಯವಸ್ಥೆ ಸಂಪೂರ್ಣ ದುರ್ಬಲ ಎಂದು ಅಲ್ಲಿನ ವಿಮಾನಯಾನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next