ಬ್ಯಾಂಕಾಕ್: ಮಯನ್ಮಾರ್‌ನಲ್ಲಿ ರಾಷ್ಟ್ರೀಯ ವಿಜಯ ದಿವಸದ ಪ್ರಯುಕ್ತ ಕೈದಿಗಳ ಕ್ಷಮಾಧಾನದ ಭಾಗವಾಗಿ ಜೈಲಿನಲ್ಲಿದ್ದ ಆಸ್ಟ್ರೇಲಿಯಾ, ಜಪಾನ್, ಬ್ರಿಟನ್ ಮತ್ತು ಅಮೆರಿಕದ ಖ್ಯಾತನಾಮ ವ್ಯಕ್ತಿಗಳನ್ನು ಬಿಡುಗಡೆಗೊಳಿಸುವುದಾಗಿ ಮಯನ್ಮಾರ್ ಮಿಲಿಟರಿ ಸರ್ಕಾರ ಗುರುವಾರ ಘೋಷಿಸಿದೆ.
ಆಸ್ಟ್ರೇಲಿಯಾದ ಆರ್ಥಿಕ ತಜ್ಞ ಸೀನ್ ಟರ್ನೆಲ್, ಜಪಾನ್‌ನ ಸಿನಿಮಾ ನಿರ್ಮಾತ ಟೊರು ಕುಬೊಟಾ, ಬ್ರಿಟನ್‌ನ ಮಾಜಿ ರಾಜತಾಂತ್ರಿಕ ವಿಕ್ಕಿ ಬೌಮ್ಯಾನ್ ಮತ್ತು ಅಮೆರಿಕದ ಕ್ವಾ ಹತಾಯ್ ಒ ಹಾಗೂ ಮಯನ್ಮಾರ್‌ನ 11 ಸೆಲೆಬ್ರೆಟಿಗಳು ಸೇರಿ ಒಟ್ಟು 5,774 ಕೈದಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಮಯನ್ಮಾರ್ ಮಿಲಿಟರಿ ಸರ್ಕಾರದಿಂದ ವಿದೇಶಿ ಪ್ರಜೆಗಳ ಬಂಧನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.