Advertisement

ಹಾರಾಡುತ್ತಿದ್ದ ವಿಮಾನಕ್ಕೆ ನುಗ್ಗಿದ ಗುಂಡು, ಪ್ರಯಾಣಿಕನಿಗೆ ಗಾಯ

06:58 PM Oct 02, 2022 | Team Udayavani |

ನೈಪಿಡಾವ್‌: ನೆಲದಿಂದ ಹಾರಿಸಲಾದ ಗುಂಡು ಹಾರಾಡುತ್ತಿದ್ದ ಮಯೆನ್ಮಾರ್‌ ನ್ಯಾಷನಲ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನದ ಹೊಳಹೊಕ್ಕು ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ಭಾನುವಾರ ವರದಿಯಾಗಿದೆ. ಕೂಡಲೇ ವಿಮಾನವನ್ನು ಲೊಯಿಕಾವ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಿದ್ದಾರೆ.

Advertisement

ಗಾಯಗೊಂಡಿದ್ದ ಪ್ರಯಾಣಿಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾಯಾ ರಾಜ್ಯದ ಬಂಡುಕೋರರ ಗುಂಪು ಈ ಕೃತ್ಯ ಎಸಗಿರಬಹುದು ಎಂದು ಮ್ಯಾನ್ಮಾರ್‌ ಸರ್ಕಾರ ಆರೋಪಿಸಿದೆ. ಆದರೆ ಈ ಆರೋಪವನ್ನು ಬಂಡುಕೋರರ ಗುಂಪು ತಳ್ಳಿಹಾಕಿದೆ.

ಘಟನೆ ನಡೆದಾಗ ವಿಮಾನವು ಸುಮಾರು 3,500 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು. ಲೊಯಿಕಾವ್‌ ವಿಮಾನ ನಿಲ್ದಾಣದಿಂದ 4 ಮೈಲುಗಳಷ್ಟು ದೂರದಲ್ಲಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next