Advertisement

ಕ್ಯಾಮೆರಾ ಕಣ್ಣು ನಮ್ಮ ಮ್ಯಾಲೆ!

03:50 AM Mar 28, 2017 | |

ಒಂದರಿಂದ ಐದನೇ ತರಗತಿಯವರೆಗೆ, ಮಣೆಯ ಮೇಲೆ ಕುಳಿತು ಪಾಠ ಕೇಳುವಾಗ ನಮ್ಮನ್ನು ನೋಡಲು ಕೇವಲ ಎರಡು ಕಣ್ಣುಗಳಿದ್ದವು. ಅಂದರೆ ಆಗ ನಮಗೆ ಇದ್ದದ್ದು ಒಬ್ಬರೇ ಮೇಡಂ. ಆಮೇಲೆ ಐದರಿಂದ ಹತ್ತರವರೆಗೆ ಹಲವಾರು ಕಣ್ಣುಗಳು ತಮ್ಮ ಕಣ್ಣವಾರೆಯಲ್ಲಿ ನಮಗೆ ಕಲಿಸಿದವು. ಪಿ.ಯು.ಸಿ ಗೆ ನಾ ಸೇರಿದ್ದು ತಾಲೂಕಿನ ಪ್ರತಿಷ್ಠಿತ ಕಾಲೇಜಿಗೆ. ಅವತ್ತು ಕಾಲೇಜು ಶುರುವಾದ ದಿನ, ಕಲರ್‌ ಕಲರ್‌ ಹುಡ್ಗಿàರು ಜೊತೆಗೆ ಅವರ ಪೇರೆಂಟ್ಸ…. ಹೊಸ ಹೊಸ ಬೈಕ್‌ನಲ್ಲಿ ಬರುತ್ತಿದ್ದ ಹುಡುಗರು! ಯಪ್ಪಾ, ಬೇಡ ಕಥೆ. ನನಗೆ ಮತ್ತು ನಮ್ಮ ಬಸ್ಸು ರೂಟ… ನ ಕೆಲವು ಹುಡುಗರಿಗೆ ತಲೆ ಕೆಟ್ಟು ಹೋಯ್ತು.  

Advertisement

ಚೆನ್ನಾಗಿರೋ ಹುಡುಗಿಯರನ್ನು ಕದ್ದು ಕದ್ದು ನೋಡುತ್ತಾ ಒಮ್ಮೆ ತಲೆಯನ್ನು ಸ್ವಲ್ಪ ಮೇಲೆತ್ತಿದೆ. ಆಗ ನನಗೆ ಗಡ ಗಡ ಶುರುವಾಯ್ತು. ಯಾಕಂದರೆ ಎದುರಿಗಿತ್ತು ಸಿ.ಸಿ ಕ್ಯಾಮರಾ. ಕಾಲೇಜಿನ ವರಾಂಡದಲ್ಲೆಲ್ಲಾ ಹಾಗೇ ಒಮ್ಮೆ ಕಣ್ಣಾಡಿಸಿದೆ. ಎಲ್ಲಾ ಕಡೆ ಸಿ.ಸಿ ಕ್ಯಾಮರಾ ಆಗ್ಲೆ! ಸ್ವಲ್ಪ ಹುಷಾರಾದೆ. ಯಾಕೆ ಬೇಕು? ಕಾಣದ ಕಣ್ಣುಗಳೆಲ್ಲಾ ನೋಡುತ್ತವೆ. ಮನುಷ್ಯರ ಮುಂದೆ ಮರ್ಯಾದೆ ಕಳೆದುಕೊಳ್ಳುವುದಲ್ಲದೆ, ಈ ಸಿ.ಸಿ ಕಣ್ಣುಗಳ ಹತ್ತಿರಾನು ಮರ್ಯಾದೆ ಕಳೆದುಕೊಳ್ಳುವುದು ಬೇಡವೆಂದು ಸುಮ್ಮನಾದೆ.  

ಮಾರನೆಯ ದಿನ ತರಗತಿ ಶುರುವಾಯಿತು. ಪುಣ್ಯಕ್ಕೆ ಕ್ಲಾಸ್‌ರೂಮ…ನಲ್ಲಿ ಸಿ ಸಿ ಕ್ಯಾಮರಾಗಳು ಇರಲ್ಲಿಲ್ಲ. ನಮ್ಮ ಸ್ನೇಹಿತರಲ್ಲಿ ಕೆಲವರಿಗೆ ಪ್ರೇಯಸಿಯರು ಇದ್ದರು. ಅವರೆಲ್ಲಾ ಕ್ಲಾಸ್‌ರೂಮ…ನಲ್ಲೆ ನೆಮ್ಮದಿಯಿಂದ ಮಾತಾಡಿಕೊಳ್ಳುತ್ತಿದ್ದರು. ಯಾಕೆಂದರೆ ಹೊರಗಡೆ ಹೋದ್ರೆ ಕಾಣದ ಕಣ್ಣುಗಳಿವೆ ಎಂಬ ಹೆದರಿಕೆ.  

ಆಮೇಲೆ ಶುರುವಾಯ್ತು ನೋಡಿ ನಮ್ಮ ಡಿಗ್ರಿ ಜೀವನ. ನಾನು ಸೇರಿದ್ದು ರಾಜ್ಯದಲ್ಲಿರುವ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಕ್ಕೆ. ಆ ಕಾಲೇಜಿನಲ್ಲಿ ತುಂಬಾ ಶಿಸ್ತು. ಅಲ್ಲೂ ಎಲ್ಲೆಲ್ಲೂ ಕೃತಕ ಕಣ್ಣುಗಳ ದರ್ಬಾರು, ಅಕಸ್ಮಾತ್‌ ಏನಾದರೂ ತಪ್ಪು ಮಾಡಿ ಸಿಕ್ಕಿ ಬಿದ್ದರೆ ಕಾಲೇಜಿನ ನಿಯಮಗಳಿಗೆ ವಿರುದ್ಧವಾಗಿ ಅಶಿಸ್ತಿನಿಂದ ನಡೆದುಕೊಂಡಿರುವ ಕೆಳಕಂಡ ವಿದ್ಯಾರ್ಥಿಯನ್ನು ಇಷ್ಟು ದಿನ ಸಸ್ಪೆಂಡ್‌ ಮಾಡಲಾಗಿದೆ ಎಂದು ನೋಟಿಸ್‌ ಬೋರ್ಡ್‌ನಲ್ಲಿ ಅನೌನ್ಸ್‌ ಮಾಡಲಾಗುತ್ತಿತ್ತು. ಇದು ಗೊತ್ತಾದ ತಕ್ಷಣ ಅಲ್ಲಿಯೂ ನಾನು ಗಪ್‌ಚುಪ್ಪಾಗಿ ಉಳಿದುಬಿಟ್ಟೆ ಎಂದು ವಿವರಿಸಿ ಹೇಳಬೇಕಿಲ್ಲ ತಾನೇ? 

ಚೇತನ್‌ ಡಿ, ಉಜಿರೆ  

Advertisement
Advertisement

Udayavani is now on Telegram. Click here to join our channel and stay updated with the latest news.

Next