Advertisement

ನನ್ನ ಹೇಳಿಕೆಯನ್ನು ಉದ್ಧೇಶಪೂರ್ವಕವಾಗಿ ತಿರುಚಿದ್ದರ ಬಗ್ಗೆ ನನಗೆ ಆಶ್ಚರ್ಯವಿಲ್ಲ : ಮುಫ್ತಿ  

04:42 PM Sep 09, 2021 | Team Udayavani |

ನವ ದೆಹಲಿ : ನನ್ನ ಹೇಳಿಕೆಯನ್ನು ಉದ್ದೆಶಪೂರ್ವಕವಾಗಿ ತಿರುಚಲಾಗುತ್ತಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ  ಹೇಳಿದ್ದಾರೆ.

Advertisement

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು,  ಶರಿಯಾ ಬಗ್ಗೆ ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದರ ಬಗ್ಗೆ ನನಗೆ ಆಶ್ಚರ್ಯವಿಲ್ಲ. ಶರಿಯಾವನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಹೆಚ್ಚಿನ ದೇಶಗಳು ಅದರ ನೈಜ ಮೌಲ್ಯಗಳನ್ನು ಗ್ರಹಿಸುವಲ್ಲಿ ವಿಫಲವಾಗಿವೆ. ಮಹಿಳೆಯರ ಮೇಲೆ ನಿರ್ಬಂಧ ಹೇರಲಷ್ಟೇ ಅದನ್ನು ಅಡ್ಡ ತರಲಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ತೆರೆ ಮೇಲೆ ‘ದಾದಾ’ ದಿನಗಳು : ಸಿದ್ಧವಾಗಲಿದೆ ಗಂಗೂಲಿ ಬಯೋಪಿಕ್

ಮತೀಯ ಧ್ರುವೀಕರಣಕ್ಕೆ ಒಳಗಾಗಿ ಭಾರತ, ಇಸ್ಲಾಂ ಫೋಬಿಯಾ ಸುತ್ತುವರಿದ ಸಂದರ್ಭದಲ್ಲಿ ಅಫ್ಗಾನಿಸ್ತಾನ ಬಿಕ್ಕಟ್ಟು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಈ ಭಾವನೆಗಳನ್ನು ಮತ್ತಷ್ಟು ಉದ್ದೀಪಿಸುವ ಸಲುವಾಗಿಯೇ ನನ್ನ ಹೇಳಿಕೆಗಳನ್ನು ತಿರುಚಿ ಬರೆಯಲಾಗುತ್ತಿದೆ ಎಂದು ನನಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

ನಿಜವಾದ ಮದೀನಾ ಕಾನೂನು ಪುರುಷರು, ಮಹಿಳೆಯರು  ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಮಹಿಳೆಯರಿಗೆ ಆಸ್ತಿ, ಸಾಮಾಜಿಕ, ಕಾನೂನು ಹಾಗೂ ವಿವಾಹ ಹಕ್ಕುಗಳನ್ನು ನೀಡಲಾಗಿದೆ. ಮುಸ್ಲಿಮರಲ್ಲದವರಿಗೂ ಧಾರ್ಮಿಕ ಸ್ವಾತಂತ್ರ್ಯ ಮಾತ್ರವಲ್ಲದೇ, ಕಾನೂನಿನ ಹಕ್ಕುಗಳನ್ನು ನೀಡಲಾಗಿದೆ. ಇದು ಜಾತ್ಯತೀತತೆಯ ಮೂಲ ತತ್ವವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ನಿನ್ನೆ(ಬುಧವಾರ, ಸಪ್ಟೆಂಬರ್ 8) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ತಾಲಿಬಾನಿಗಳು ಸರಿಯಾದ ರೀತಿಯಲ್ಲಿ ಶರಿಯಾ ನೀತಿ ಅನುಸರಿಸಿದರೆ ಅವರು ಪೂರ್ತಿ ವಿಶ್ವಕ್ಕೇ ಉದಾಹರಣೆಯಾಗಬಲ್ಲರು ಎಂದು ಹೇಳಿದ್ದರು.

ತಾಲಿಬಾನಿಗಳು ಈ ಹಿಂದಿನಂತೆ ಮಾನವ ಹಕ್ಕು ಉಲ್ಲಂಘನೆ ಮಾಡಬಾರದು. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡಿ ನಿಜವಾದ ಶರಿಯಾ ನಿಯಮ ಪಾಲಿಸಬೇಕು. 1990ರಲ್ಲಿ ಮಾಡಿ ದಂತೆಯೇ ಮಾಡಿದರೆ ಅದು ಇಡೀ ವಿಶ್ವಕ್ಕೇ ಅಪಾಯ ಎಂದು ಹೇಳಿದ್ದರು.

ಇದನ್ನೂ ಓದಿ : ಪರವಾನಿಗೆ ಪಡೆದರೂ ಗಣಪತಿ ಪೆಂಡಾಲ್ ಕಿತ್ತ ವ್ಯವಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next