Advertisement

ನನ್ನ ಮಕ್ಕಳು ಬಡತನದಲ್ಲಿ ಸಾಯಬಾರದು : 500 ಕೋಟಿ ಭೂಹಗರಣದ ಬಗ್ಗೆ ಲಾಲು

12:51 PM Apr 10, 2017 | Team Udayavani |

ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಮೇವು ಹಗರಣದಲ್ಲಿ ಜೈಲುಪಾಲಾಗಿ ಈಗ ಬೇಲ್‌ನಲ್ಲಿ ಹೊರಗಿದ್ದಾರೆ. ಅವರ ಇಬ್ಬರು ಪುತ್ರರೂ ನಿತೀಶ್‌ ಕುಮಾರ್‌ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆವರ ವಿರುದ್ಧ ಈಗ 500 ಕೋಟಿ ರೂ.ಗಳ ಭೂಹಗರಣವನ್ನು ಆರೋಪಿಸಲಾಗಿದೆ. ಈ ಬಗ್ಗೆ ಲಾಲು ಏನು ಹೇಳುತ್ತಾರೆ ಗೊತ್ತಾ : ಅವರಿಗೆ ಸ್ವಂತ ಉದ್ಯಮ ಮಾಡುವ ಹಕ್ಕಿದೆ; ನನ್ನ ಮಕ್ಕಳು ಹಸಿವಿನಿಂದ ಸಾಯುವುದನ್ನು ನಾನು ಬಯಸುವುದಿಲ್ಲ’.

Advertisement

ಆದರೆ ಹಾಗೇನೂ ಆಗುವ ಹಾಗೆ ಇಲ್ಲ. ಏಕೆಂದರೆ ಸಚಿವ ತೇಜ್‌ ಪ್ರತಾಪ್‌ ಮತ್ತು ತೇಜಸ್ವಿ ಯಾದವ್‌ ಪಟ್ನಾ ಹೊರವಲಯದಲ್ಲಿ 60 ಕೋಟಿ ರೂ. ಬೆಲೆಬಾಳುವ ಎರಡೆಕ್ರೆ ಜಮಿಮಿನನ ಮೂವರು ಒಡೆಯರಲ್ಲಿ ಇಬ್ಬರಾಗಿದ್ದಾರೆ. ಮೂರನೇ ಒಡತಿ ಸ್ವತಃ ಅವರ ತಾಯಿ, ರಾಬ್ರಿ ದೇವಿ. ಈ ಭೂಮಿಯಲ್ಲಿ ಇದೀಗ ಬಿಹಾರದ ಮತ್ತು ಲಾಲು ಪಕ್ಷದ ಓರ್ವ ಶಾಸಕರು ಬಿಹಾರದಲ್ಲೇ ಅತೀ ದೊಡ್ಡದೆನಿಸಲಿರುವ 500 ಕೋಟಿ ರೂ. ವೆಚ್ಚದ ಮಾಲ್‌ ಒಂದನ್ನು ನಿರ್ಮಿಸುತ್ತಿದ್ದಾರೆ. 

ಈ ಮಾಲ್‌ ಅರ್ಧ ಭಾಗದ ಒಡೆತನವು ಶಾಸಕನದ್ದಾಗಿರುತ್ತದೆ ಮತ್ತು ಉಳಿದರ್ಧ ಭಾಗಕ್ಕೆ ಲಾಲು ಸಚಿವ ಪುತ್ರ ದ್ವಯರು ಮತ್ತು ಅವರ ತಾಯಿ ರಾಬ್ರಿ ದೇವಿ ಒಡೆಯರಾಗಿರುತ್ತಾರೆ. ಈ ಯೋಜನೆಯ ಈಗಿನ ಅಂದಾಜು ವೆಚ್ಚ 500 ಕೋಟಿ ರೂ.ಗಳು ಎಂದು ಲಾಲು ಪ್ರಸಾದ್‌ ಯಾದವ್‌ ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಬಿಜೆಪಿಯ ಸುಶೀಲ್‌ ಕುಮಾರ್‌ ಯಾದವ್‌  ಅವರು ಕಳೆದ ವಾರ ಪತ್ರಿಕಾಗೋಷ್ಠಿ  ನಡೆಸಿ ಈ ಯೋಜನೆ ಬಗ್ಗೆ ಹೇಳಿದ್ದ ಮಾತುಗಳು ಇಷ್ಟು : 

ಈ ಯೋಜನೆಯ ಸ್ಥಳವನ್ನು ಲಾಲು ಕುಟುಂಬಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. 2008ರಲ್ಲಿ ಲಾಲು ಅವರು ಕೇಂದ್ರ ರೈಲ್ವೇ ಸಚಿವರಾಗಿದ್ದಾಗಿದಾ ಪುರಿ ಮತ್ತು ರಾಂಚಿಯಲ್ಲಿ ರೈಲ್ವೇ ಗಾಗಿ ಎರಡು ಹೊಟೇಲ್‌ಗ‌ಳನ್ನು ರೂಪಿಸಲು 15 ವರ್ಷಗಳ ಲೀಸ್‌ ಮೇಲೆ ಭೂಮಿ ನೀಡಲಾಗಿತ್ತು.ಆದರೆ ಇದಕ್ಕೆ ಮೊದಲು ಅವರು ಪಟ್ನಾದಲ್ಲಿನ ಎರಡು ಎಕರೆ ಭೂಮಿಯನ್ನು ಲಾಲು ಪಕ್ಷದ ಸಂಸದನಾಗಿದ್ದ ಪ್ರೇಮ್‌ ಗುಪ್ತಾ ಎಂಬವರ ಪತ್ನಿಯ ಒಡೆತನದ ಕಂಪೆನಿಯೊಂದಕ್ಕೆ ಮಾರಿದ್ದರು. 

Advertisement

ಎರಡು ವರ್ಷ ಹಿಂದೆ ಈ ಕಂಪೆನಿಯ ಹೆಸರನ್ನು  ಲಾರಾ (ಲಾ+ಲಾಲು, ರಾ + ರಾಬ್ರಿ ದೇವಿ) ಎಂದು ಬದಲಾಯಿಸಲಾಗಿ ಅದರ ಮೂವರು ನಿದೇರ್ಶಕರ ಸ್ಥಾನವನ್ನು  ಲಾಲು ಅವರು ಸಚಿವ ದ್ವಯ ಪುತ್ರರು ಮತ್ತು ತಾಯಿ ತುಂಬಿದರು. 

ಸಚಿವದ್ವಯ ಪುತ್ರರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಯಾದವ್‌ ಅವರ ಸಚಿವ ಸಂಪುಟ ವರ್ಷಂಪ್ರತಿ ಸಲ್ಲಿಸುವ ಆದಾಯ ಘೋಷಣೆಯ ಪ್ರಕಾರ ತಮ್ಮ ಆದಾಯ ವಿವರಗಳನ್ನು ನೀಡಿದ್ದರಾದರೂ ಅದರಲ್ಲಿ  ತಾವು ಲಾರಾ ಕಂಪೆನಿಯ ನಿರ್ದೇಶಕರಾಗಿರುವುದನ್ನು ಘೋಷಿಸಿಕೊಂಡಿಲ್ಲ.

ಹಾಗಾಗಿ ಲಾಲು ಪುತ್ರರ ಒಡೆತನದ ಕಂಪೆನಿಯ ಮೂಲಕ 500 ಕೋಟಿ ರೂ.ಗಳ ಬೇನಾಮಿ  ವ್ಯವಹಾರನಡೆದಿದೆ. ಈಚೆಗೆ ರಾಜ್ಯ ಸರಕಾದಿಂದ ಒಪ್ಪಿಗೆ ಪಡೆದು ನಡೆಯುತ್ತಿರುವ ತನಿಖೆಯಲ್ಲಿ ಲಾಲು ಸಚಿವ ಪುತ್ರ ದ್ವಯ ಮತ್ತು ತಾಯಿಯ ಒಡೆತನಕ್ಕೆ ಸೇರಿರುವ ಎರಡೆಕರೆ ಭೂಮಿಯೂ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next