ಭೇರ್ಯ: ಕನ್ನಡ ಚಿತ್ರರಂಗದ ದಿಗ್ಗಜೆ, ವಜ್ರೆàಶ್ವರಿ ಸಂಸ್ಥೆಯ ಸಂಸ್ಥಾಪಕಿ ಹಾಗೂ ವರನಟ ಡಾ.ರಾಜ್‌ಕುಮಾರ್ ಧರ್ಮ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ನಿಧನದ ಹಿನ್ನೆಲೆ ಹುಟ್ಟೂರು ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ ಮಡುಗಟ್ಟಿದ ನಿರವಮೌನ ಆವರಿಸಿತು.
1939 ಡಿಸೆಂಬರ್ 6 ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಜನಿಸಿದ ಪಾರ್ವತಮ್ಮ ತಮ್ಮ 13ನೇ ವಯಸ್ಸಿನಲ್ಲಿ ರಾಜ್‌ಕುಮಾರ್ ಅವರ ಜತೆ ಮದುವೆ ಮಾಡಲಾಯಿತು ಎಂದು ವರ ಬಾಲ್ಯದ ಗೆಳತಿ ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಬಾಲ್ಯದ ಗೆಳತಿಯ ಕಂಬನಿ: ಸಾಲಿಗ್ರಾಮದಲ್ಲಿ ಪಾರ್ವತಮ್ಮರ ಸ್ವಂತ ಮನೆ ಇರಲಿಲ್ಲ, ಬಾಡಿಗೆ ಮನೆಯಲ್ಲಿದ್ದರು, ನಂತರ ಸ್ವಂತ ಮನೆಗೆ ಬಂದ ಪಾರ್ವತಮ್ಮ ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದರು ಎಂದು ಪಾರ್ವತಮ್ಮರ ಬಾಲ್ಯದ ಗೆಳತಿ ಜಾನಕಮ್ಮ ಉದಯವಾಣಿಗೆ ತಿಳಿಸಿದರು.
ನಮ್ಮ ಮನೆಯ ಮುಂದೆಯೇ ಪ್ರತಿದಿನ ಶಾಲೆಗೆ ಹೋಗುತ್ತಿದ್ದರು, ಪಾರ್ವತಮ್ಮ ನಾನು ನಮ್ಮ ಸಂಬಂಧಿಕರೊಬ್ಬರ ಬಳಿ ಸಂಗೀತ ಕಲಿಯುತ್ತಿದ್ದವು, ಒಮ್ಮೊಮ್ಮೆ ನಮ್ಮ ಮನೆಯಲ್ಲಿ ಜತೆಯಲ್ಲಿ ಮಲಗುತ್ತಿದ್ದವು. ನನ್ನ ಮೊದಲ ಮಗನ ಬಾಣಂತಿಯಾಗಿದ್ದೆ ಅಂದು ಡಾ.ರಾಜ್ ನಮ್ಮೂರಿನ ಬಸ್ ನಿಲ್ದಾಣದಲ್ಲಿ ಕುಳಿತು ಕೊಂಡು ನಿನ್ನ ಗೆಳತಿ ನೋಡಿ ಕೊಂಡು ಬಾ ಎಂದು ನಮ್ಮ ಮನೆಗೆ ಕಳುಹಿಸಿದ್ದರು ಎಂದು ಬಾವುಕರಾದರು.
80ರ ದಶಕದಿಂದ ಚಿತ್ರೋದ್ಯಮವನ್ನು ಆಳಿದ ಪಾರ್ವತಮ್ಮರಿಗೆ ಗೆಳತಿಯರ ಬಗ್ಗೆ ಅಪಾರ ಪ್ರೀತಿ ಇತ್ತು. ಅಲ್ಲದೆ 1990ರಲ್ಲಿ ಸಾಲಿಗ್ರಾಮಕ್ಕೆ ನಂಜುಂಡಿ ಕಲ್ಯಾಣ ಶತದಿನೋತ್ಸವ ಸಮಾರಂಭಕ್ಕೆ ಆಗಮಿಸಿದ ಅವರು ನನ್ನನ್ನು ಅವರ ಮನೆಗೆ ಕರೆಸಿ ಯೋಗ ಕ್ಷೇಮ ವಿಚಾರಿಸಿದರು.
ಕಾದಂಬರಿ ಪ್ರಿಯೆ: ಪಾರ್ವತಮ್ಮ ತಮ್ಮ ಬಾಲ್ಯದಿಂದಲೂ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದರು,ಅದರಲ್ಲೂ ಹೆಚ್ಚು ಕಾದಂಬರಿಗಳನ್ನೇ ಓದುತ್ತಿದ್ದರು. ನನ್ನ ಸ್ನೇಹಿತೆ ಈಡೀ ಚಿತ್ರೋದ್ಯಮದ ದಿಗ್ಗಜೆಯಾಗಿದ್ದಳು ಎಂಬ ಹೆಮ್ಮೆ ನನಗೆ ಆದಿನಗಳಿಂದಲೂ ಇದೆ.
ಒಳ್ಳೆಯ ಕಾದಂಬರಿ ಮತ್ತು ಸಾಂಸರಿಕ ಚಿತ್ರಗಳಿಗೆ ಹೆಚ್ಚು ಮನ್ನಣೆ ಕೊಡುತ್ತಿದ್ದ ಪಾರ್ವವತಮ್ಮ, ಸಿನಿಮಾಗಳಲ್ಲಿ ಅಶ್ಲೀಲ ಚಿತ್ರಕ್ಕೆ ಮತ್ತು ಪದಗಳಿಗೆ ಅವಕಾಶವನ್ನೇ ಕೊಟ್ಟಿಲ್ಲ ಪ್ರತಿಯೊಂದು ಕುಟುಂಬ ನೋಡ ಬೇಕೆನ್ನುವ ಸಿನಿಮಾವನ್ನೇ ಮಾಡುತ್ತಿದ್ದರು ಎಂದು ಉದಯವಾಣಿಯೊಂದಿದೆ ಹಂಚಿ ಕೊಂಡರು.
* ರೋಜಾ ಮಹೇಶ್