Advertisement

ನನ್ನ ಅಪ್ಪನಿಗೆ 27 ಹೆಂಡತಿಯರು, 150 ಮಕ್ಕಳು : ಮೆರ್ಲಿನ್

12:07 PM Jan 24, 2021 | Team Udayavani |

ಬ್ರಿಟಿಷ್ ಕೊಲಂಬಿಯಾ : ದೊಡ್ಡ ಕುಟುಂಬ ಅಂದರೇ, ನೀವು ಎಷ್ಟು ಮಂದಿ ಇರುವ ಕುಟುಂಬವನ್ನು ನೋಡಿದ್ದೀರಿ..?  ಹತ್ತು ಮಂದಿ..? 20 ಮಂದಿ..? ಅಥವಾ 50 ಮಂದಿ..? ಅಷ್ಟೇನಾ..? ನಾವೊಂದು ಕುಟುಂಬದ ಬಗ್ಗೆ ಹೇಳುತ್ತೇವೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

Advertisement

ಹತ್ತಿಪ್ಪತ್ತು ಮಂದಿ ಇರುವ ಕುಟುಂಬವನ್ನೇ ದೊಡ್ಡ ಕುಟುಂಬವೆಂದು ನೀವು ಭಾವಿಸಿದರೇ, ಅದನ್ನು ಸುಳ್ಳು ಮಾಡುವ ವಿಷಯೊಂದನ್ನು ನಾವು ನಿಮಗೆ ತಿಳಿಸುತ್ತೇವೆ. ಈ ಕುಟುಂಬದ ಬಗ್ಗೆ ಕೇಳಿ ನೀವು ಆಘಾತಕ್ಕೊಳಗಾಗಬಹುದು.

ಕೆನಡಾದ ವಿನ್ ಸ್ಟನ್ ಬ್ಲ್ಯಾಕ್ಮೋರ್ ಎಂಬ ವ್ಯಕ್ತಿ 27 ಮಂದಿ ಹೆಂಡಂದಿರು ಮತ್ತು 150 ಮಕ್ಕಳೊಂದಿಗೆ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ‘ಜೈ ಶ್ರೀರಾಮ್’ ಘೋಷಣೆಗೆ ನುಸ್ರತ್ ಖಂಡನೆ

ಹೌದು, ಬ್ಲ್ಯಾಕ್ಮೋರ್ ಅವರ ಮಗ ಮೆರ್ಲಿನ್ ತಮ್ಮ ಜನ್ಮದಿನದಂದು ಈ ದೊಡ್ಡ ಕುಟುಂಬದ ಬಗ್ಗೆ ಹೇಳಿಕೊಂಡಿರುವುದು ಈಗ ವೈರಲ್ ಆಗಿದೆ.

Advertisement

ಬ್ಲ್ಯಾಕ್ಮೋರ್ ನ 27 ಹೆಂಡಂದಿರಲ್ಲಿ ಕೇವಲ 22 ಮಂದಿಗೆ ಮಕ್ಕಳಿದ್ದಾರೆ. ಬ್ಲ್ಯಾಕ್ಮೋರ್ ಪುತ್ರರಲ್ಲಿ ಒಬ್ಬರಾದ ಮೆರ್ಲಿನ್ ಬ್ಲ್ಯಾಕ್ಮೋರ್ ಇತ್ತೀಚೆಗೆ ಟಿಕ್‌ ಟಾಕ್ ವೀಡಿಯೊವೊಂದರಲ್ಲಿ ಈ ತುಂಬು ಕುಟುಂಬದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೇ, 19 ವರ್ಷದ ಇಬ್ಬರು ಸಹೋದರರಾದ ವಾರೆನ್ ಮತ್ತು ಮುರ್ರೆ ಸಹ ತಮ್ಮ ತಂದೆಯ ಬಹುಪತ್ನಿತ್ವದ ಕುಟುಂಬದೊಂದಿಗೆ ವಾಸಿಸುವ ಅನುಭವದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : 150ಕ್ಕೂಹೆಚ್ಚು ಶಿಕ್ಷಕಿಯರಿಗೆ ಕ್ಯಾನ್ಸರ್‌ ತಪಾಸಣೆ

ಮೆರ್ಲಿನ್ ಮತ್ತು ಅವರ ಸಹೋದರರು ತಮ್ಮ ಕುಟುಂಬದ ಬಗ್ಗೆ ಮಾತನಾಡಲು ಏನು ಹಿಂಜರಿಯುವುದಿಲ್ಲ. ಆದರೇ, ಸದ್ಯಕ್ಕೆ ಅವರು ತಮ್ಮ ತುಂಬು ಕುಟುಂಬದಿಂದ ದೂರವಿದ್ದು ಅಮೆರಿಕದಲ್ಲಿ ವಾಸವಿದ್ದಾರೆ. ವೀಡಿಯೊದಲ್ಲಿ, ಏಳು ಒಡಹುಟ್ಟಿದವರನ್ನು ಹೊಂದಿರುವ ಮೆರ್ಲಿನ್, ‘ನಾನೂ ಕೂಡ ನಮ್ಮ ಕುಟುಂಬದ ಬಗ್ಗೆ ಮಾತಾಡಲು ಬಯಸಿದ್ದೆ. ಆದರೇ, ಅದರಿಂದ ನನಗೇನಾದರೂ ಆಗಬಹುದು ಎಂಬ ಭಯದಿಂದ ನಾನು ನಮ್ಮ ಕುಟುಂಬದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ, ನಾನೂ ಕೂಡ ನನ್ನ ಕುಟುಂಬದ ಬಗ್ಗೆ ಜಗತ್ತಿಗೆ ಹೇಳಿಕೊಳ್ಳಬಹುದು’ ಅಂದಿದ್ದಾರೆ.

ತಮ್ಮ ಕುಟುಂಬದ ಬಗ್ಗೆ ವಿವರಿಸಿದ ಮೆರ್ಲಿನ್, ಕುಟುಂಬದ ಎಲ್ಲ ಮಕ್ಕಳು ತಾಯಿಯನ್ನು ‘ಅಮ್ಮ’ ಮತ್ತು ಅವರ ಮಲತಾಯಿಗಳನ್ನು ‘ತಾಯಿ’ ಎಂದು ಕರೆಯುತ್ತಾರೆ. ನಮ್ಮ ನಡುವೆ ಯಾವುದೇ ಆಚರಣೆಗಳಲ್ಲಿ ಭಿನ್ನ ಅಭಿಪ್ರಾಯಗಳಿಲ್ಲ. ನಮ್ಮದು 150 ಸಹೋದರರ ದೊಡ್ಡ ಕುಟುಂಬವಾಗಿದ್ದರೂ, ತಮ್ಮ  ಒಡಹುಟ್ಟಿದವರು ಮತ್ತು ಆಪ್ತರು ಮಾತ್ರ ಜನ್ಮದಿನದಂದು ಹಾಜರಿದ್ದರು ಎಂದು ಹೇಳಿರುವುದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನೂ ಓದಿ : ಜ.27 ಕ್ಕೆ ಶ್ರೀಲಂಕಾ ತಲುಪಲಿದೆ ಭಾರತದ ಕೋವಿಡ್ ಲಸಿಕೆ

 

Advertisement

Udayavani is now on Telegram. Click here to join our channel and stay updated with the latest news.

Next