Advertisement

ನನ್ನ ಪ್ರೀತಿಯ ಸೀರೆ

12:30 AM Jan 18, 2019 | |

ಮೊನ್ನೆ ಸಮಾರಂಭವೊಂದರಲ್ಲಿ ಗೆಳತಿ ಸಿಕ್ಕಿದ್ದಳು. ಸೀರೆ ಉಟ್ಟುಕೊಂಡಿದ್ದಳು. ಆಕೆ ಸೀರೆ ಉಡೋದೇ ಕಡಿಮೆ. ಡ್ರೆಸ್‌ನಲ್ಲೇ ನೋಡಿದ್ದ ಅವಳನ್ನು ಸೀರೆಯಲ್ಲಿ  ನೋಡಿ ತುಂಬಾ ಸಂತೋಷವಾಯಿತು. ಮುದ್ದಾಗಿ ಬೇರೆ ಕಾಣಿಸುತ್ತಿದ್ದಳು. ಅವಳುಟ್ಟ ಸೀರೆ-ರವಿಕೆಯೂ ಡಿಫ‌ರೆಂಟ್‌ ಆಗಿ ತುಂಬಾ ಚೆನ್ನಾಗಿತ್ತು. ಕೆನೆಬಣ್ಣದ ಪ್ಲೆ„ನ್‌ ಸೀರೆಗೆ ಡಾರ್ಕ್‌ ನೀಲಿ ಡಿಸೈನರ್‌ ಬ್ಲೌಸ್‌ ಅದ್ಭುತವಾಗಿ ಕಾಣಿಸುತ್ತಿತ್ತು! 

Advertisement

ಸೀರೆಯ ಮೇಲೆ ಹೆಣ್ಮಕ್ಕಳಿಗೆ ಇರುವ ಪ್ರೀತಿ, ವ್ಯಾಮೋಹ ಎಲ್ಲರಿಗೂ ಗೊತ್ತಿರುವ ವಿಷಯವೇ. ಸೀರೆಗೂ ನಾರಿಗೂ ಬಿಡದ ನಂಟು. ಸೀರೆ, ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ. ಮೊದಲೆಲ್ಲ  ಹೆಣ್ಮಕ್ಕಳು ಸೀರೆ ಕೊಳ್ಳೋದು ಎಂದರೆ ಮನೆಯಲ್ಲಿ ಮದುವೆ ಅಥವಾ ಹಬ್ಬಗಳು ಬಂದಾಗ ಮಾತ್ರವಿತ್ತು. ಅದೂ ಅತ್ಯಂತ ಅನಿವಾರ್ಯವಿದ್ದಾಗಲಷ್ಟೆ. ಹಿಂದಿನ ಆ ಪದ್ಧತಿ ಈಗಿಲ್ಲ. ಇಂದಿನ ಮಹಿಳೆಯರ ಸೀರೆ ಖರೀದಿ ಹಬ್ಬ-ಹರಿದಿನಗಳನ್ನು ಹೊರತುಪಡಿಸಿಯೂ ಸಾಗುತ್ತದೆ. ಯಾಕೆಂದರೆ, ಅವರು ಹೊರಗಡೆ ಹೋಗಿ ದುಡಿಯುವುದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ತಮಗೆ ಬೇಕಾದುದನ್ನು ಕೊಂಡುಕೊಳ್ಳುವುದರಿಂದ ವೈವಿಧ್ಯಮಯ ಸೀರೆಗಳ ಸಂಗ್ರಹ ಅವರಲ್ಲಿರುತ್ತದೆ.

ನಮ್ಮ ಮನೆಯವರು, “ನಿನ್ನಲ್ಲಿ ಇಷ್ಟೊಂದು ಸೀರೆಗಳಿವೆಯಲ್ಲ , ಇವನ್ನೆಲ್ಲ ಉಡೋದು ಯಾವಾಗ’ ಅಂತ ಕೇಳುತ್ತಾರೆ.
ಹೌದು, ಇಂದಿನ ಆಧುನಿಕ ಉಡುಗೆಗಳ ಭರಾಟೆಯ ನಡುವೆ ಹೆಣ್ಣುಮಕ್ಕಳಿಗೆ ಸೀರೆಯ ಮೇಲೆ ಆಸಕ್ತಿ ಕಡಿಮೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ನನ್ನ ಪ್ರಕಾರ ಈ ಮಾತು ಹೆಣ್ಮಕ್ಕಳಿಗೆ ಸೀರೆ ಉಟ್ಟು ಕೆಲಸ ಮಾಡೋಕೆ, ಗಾಡಿ ಓಡೊÕàಕೆ ಕಷ್ಟ ಆಗುತ್ತೆ ಅಂತ ಅವರು ಜೀನ್ಸ್‌, ಲೆಗ್ಗಿನ್‌, ಕುರ್ತಾ, ಟೀ ಶರ್ಟ್‌ನಂತಹ ಕಂಫ‌ìಟೇಬಲ್‌ ಡ್ರೆಸ್‌ಗೆ ಮೊರೆ ಹೋಗಿದುದಕ್ಕೆ ಇರಬಹುದೇನೋ. ಅಂದರೆ, ಇದರರ್ಥ ಸೀರೆ ಬಗ್ಗೆ ಮಹಿಳೆಯರಿಗೆ ಆಸಕ್ತಿ ಇಲ್ಲ  ಅಂತಲ್ಲ. ಇಂದಿನ ಫ್ಯಾಷನ್‌ ಟ್ರೆಂಡ್‌ ಏನೇ ಇರಲಿ. ಎಷ್ಟೇ ಮಾಡರ್ನ್ ಡ್ರೆಸ್‌ಗಳು ಮಾರುಕಟ್ಟೆಗೆ ಬಂದರೂ ಸೀರೆ ಮಾತ್ರ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ. ಮಹಿಳೆಯರ ಅಭಿರುಚಿಗೆ ತಕ್ಕಂತೆ ಬದಲಾಗುತ್ತ, ವಿಭಿನ್ನ ರೀತಿಯ ಡಿಸೈನರ್‌ ಬ್ಲೌಸ್‌ಗಳಿಂದ, ಸೀರೆಯ ಆಕರ್ಷಕ ಸೆರಗಿನಿಂದ ಹೆಂಗಳೆಯರ ಅಚ್ಚುಮೆಚ್ಚಿನ ಉಡುಪಾಗಿದೆ. ಜೀನ್ಸ್‌ ತೊಡುವ ಯುವತಿಯರೂ ಸಮಾರಂಭಗಳಿಗೆ ಸೀರೆಯನ್ನೇ ಆಯ್ಕೆ ಮಾಡಿ ಉಟ್ಟು ಸಪ್ರೈìಸ್‌ ಕೊಡೋದನ್ನು ನಾವೀಗ ನೋಡುತ್ತೇವೆ. ಹೆಣ್ಮಕ್ಕಳೀಗ ಬದಲಾವಣೆಗಳಿಗೂ ಹೊಂದಿಕೊಳ್ಳುತ್ತ, ಸಾಂಪ್ರದಾಯಿಕತೆಯನ್ನೂ ಬಿಡದೆ ಹೊಸತನದತ್ತ ಹೆಜ್ಜೆ ಇರಿಸುತ್ತಿದ್ದಾರೆ. ಹಾಗೆ ನೋಡಿದರೆ, ಸೀರೆ ಯಾವತ್ತಿಗೂ “ಔಟ್‌ ಆಫ್ ಫ್ಯಾಷನ್‌’ ಆಗಿಯೇ ಇಲ್ಲ !

ಮದುವೆಯಿರಲಿ, ಪಾರ್ಟಿಯಿರಲಿ,  ಸ್ಯಾರಿ ಚ್ಯಾಲೆಂಜ್‌ಯಿರಲಿ, ಕಾಲೇಜು ಡೇಗಳಿರಲಿ ಹದಿಹರೆಯದ ಯುವತಿಯರ ಪ್ರಥಮ ಆದ್ಯತೆ ಎಂದರೆ ಸೀರೆ. “ನಾಳೆ ನೀನು ಮದುವೆಗೆ ಯಾವ ಡ್ರೆಸ್‌ ಹಾಕೋತಿಯಾ?’ ಎಂದು ಭಾರತೀಯ ಯಾವ ಹೆಣ್ಣುಮಗಳನ್ನೂ ಕೇಳಿದರೂ ಅವಳಿಂದ ಬರುವ ಬರುವ ತತ್‌ಕ್ಷಣ ಉತ್ತರ- ಸೀರೆ. “ನೀನು ಮದುವೆಗೆ ಸೀರೆಯನ್ನೇ ಉಡಬೇಕು’ ಅಂತ ಅವಳಿಗೆ ಯಾರೂ ಹೇಳಬೇಕಾಗಿಲ್ಲ. ವಿಶೇಷ ಸಮಾರಂಭಕ್ಕೆಲ್ಲ ಸೀರೆಯೇ ಸರಿಯಾದ ಉಡುಗೆ ಎಂಬುದನ್ನು ಅವಳು ಒಪ್ಪಿಕೊಂಡಿದ್ದಾಳೆ-ತಿಳಿದುಕೊಂಡಿದ್ದಾಳೆ! 

ಅಷ್ಟಕ್ಕೂ ಸೀರೆ ಅಂದರೆ ಅದು ಬರೀ ದಿರಿಸಲ್ಲ. ಭಾವ-ಬಂಧನದ ಬೆಸುಗೆ. ಸೀರೆ ಹೆಣ್ಮಕ್ಕಳ ಆಸಕ್ತಿ-ಅಭಿರುಚಿಯ ಸಂಕೇತ. ಜತೆಗೆ ಅವರ ವ್ಯಕ್ತಿತ್ವದ ಪ್ರತೀಕವೂ ಹೌದು. ಹಿಂದಿನಿಂದಲೂ ನಮ್ಮಲ್ಲಿ ಹೆಣ್ಮಕ್ಳು ಸೀರೆ ಉಡೋ ವಾಡಿಕೆ ಇದೆ. ವೇದಗಳ ಕಾಲದಲ್ಲಿಯೂ ಮಹಿಳೆಯರು ಸೀರೆ ಉಟ್ಟುಕೊಳ್ಳುತ್ತಿದ್ದರು ಎಂಬುದನ್ನೂ ನಾವು ಓದಿ ತಿಳಿದಿದ್ದೇವೆ.

Advertisement

ನನ್ನಮ್ಮ , “”ನಮ್ಮ ಅಜ್ಜಿ , ಮುತ್ತಜ್ಜಿಯರೆಲ್ಲ ಮನೆಯಲ್ಲೂ , ತೋಟ-ಗದ್ದೆಯಲ್ಲಿ ಕೃಷಿ ಕೆಲಸ ಮಾಡುವಾಗಲೂ ಸೀರೆಯನ್ನೇ ಉಡುತ್ತಿದ್ದರು, ನಾವೂ ಅದನ್ನೇ ಮುಂದುವರಿಸಿದ್ದೆವು. ಸೀರೆ ಉಟ್ಟು ಕೆಲಸ ಮಾಡೋದು ಕಷ್ಟ  ಅಂತ ನಮಗದು ಅನಿಸುತ್ತಲೇ ಇರಲಿಲ್ಲ. ಈಗ ನೀವು ನೋಡಿದರೆ ಟೈಮ್‌ ಇಲ್ಲ, ಪುರುಸೊತ್ತು ಇಲ್ಲ, ಕೆಲ್ಸಾ ಮಾಡೋಕೆ ಕಷ್ಟ ಅಂತ ಸಾವಿರ ನೆಪ ಹೇಳ್ತೀರಾ” ಎನ್ನುತ್ತ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅಮ್ಮನ ಈ ಮಾತಿನ ಹಿಂದೆ ಅಡಗಿರುವ ಉದ್ದೇಶವೆಂದರೆ, ನಾವೀಗ ಇಂತಹ ನಾನಾ ನೆಪಗಳನ್ನು ಹೊರತುಪಡಿಸಿ ಸೀರೆ ತೊಡುವುದನ್ನು ರೂಢಿಸಿಕೊಳ್ಳಬೇಕು ಎಂಬುದು.

ಮೊನ್ನೆ ದೀಪಾವಳಿ ಹಬ್ಬಕ್ಕೆ ಸೀರೆ ಕೊಳ್ಳಲು ಹೋದಾಗ‌ ಅಂಗಡಿಯವನು ಬರೇ ಪ್ಲೆ„ನ್‌ ಸೀರೆಗಳನ್ನು ತೋರಿಸಿದ. ಬಣ್ಣ ಬಣ್ಣದ ಸೀರೆಗಳು! ಆದರೆ, ಅದರೊಂದಿಗಿದ್ದ ಬ್ಲೌಸ್‌ಸಿàರೆಯ ಬಣ್ಣಕ್ಕೆ ತದ್ವಿರುದ್ಧ ಆಗಿತ್ತು. ಅವ ಹೇಳಿದ, “ಇದು ಈಗಿನ ಹೊಸ ಟ್ರೆಂಡ್‌ ಮೇಡಂ’ ಎಂದು.

ಹೌದು, ಈಗ ಮ್ಯಾಚಿಂಗ್‌ಗೆ ಡಿಮ್ಯಾಂಡ್‌ ಇಲ್ಲ. ಸೀರೆಯ ಬಣ್ಣಕ್ಕೂ ಬ್ಲೌಸ್‌ನ ಬಣ್ಣಕ್ಕೂ ಸಂಬಂಧವೇ ಇಲ್ಲ. ಎಲ್ಲ ಬಣ್ಣದ ಸೀರೆಗೂ ಡಿಸೈನರ್‌ ಬ್ಲೌಸ್‌ ಹೊಂದಿಕೆಯಾಗುತ್ತದೆ. ಹಾಗಾಗಿ, ಪ್ರತಿಯೊಂದು ಸೀರೆಗೂ ಬ್ಲೌಸ್‌ ಹೊಲಿಸಿಕೊಳ್ಳುವ ಆವಶ್ಯಕತೆ ಇರುವುದಿಲ್ಲ. ಖರ್ಚೂ ಕಡಿಮೆ. ಜತೆಗೆ, ಈ ಕಾಂಟ್ರಾಸ್ಟ್‌  ಬ್ಲೌಸ್‌ಗಳು ಸಾಮಾನ್ಯ ಸೀರೆಯಿಂದ ಹಿಡಿದು ರೇಷ್ಮೆ ಸೀರೆ, ಕಾಂಜೀವರಂ ಸೀರೆಯೂ ಸೇರಿದಂತೆ ಯಾವುದೇ ಶೈಲಿಯ ಸೀರೆಗೂ ಹೊಂದಿಕೆಯಾಗುತ್ತದೆ. ಅಲ್ಲದೆ ಜರಿ ಬಾರ್ಡರ್‌ ಸೀರೆಯನ್ನು ಇಷ್ಟಪಡದವರಿಗೂ ಸಮಾರಂಭಗಳಲ್ಲಿ ಮಿಂಚಲು ಇಂತಹ ಸೀರೆ ಸಾಂಪ್ರದಾಯಿಕವಾಗಿ ಕಾಣಿಸುತ್ತದೆ. ಸರಳ-ಹಗುರವಾಗಿರುವ ಇದು ಹದಿಹರೆಯದ ಹುಡುಗಿಯರಿಗೂ ಹೇಳಿ ಮಾಡಿಸಿದ ಸೀರೆ.

ರವಿಕೆ ಹೀಗಿರಲಿ…
.ಸಾಮಾನ್ಯವಾಗಿ ಎಲ್ಲ ಸೀರೆಗಳಿಗೂ ಅರ್ಧ ಕೈ ಬ್ಲೌಸ್‌ ಚೆನ್ನಾಗಿ ಕಾಣಿಸುತ್ತದೆ. ಅದು ಸಾಮಾನ್ಯ ಫ್ಯಾಷನ್‌. ಪ್ಲೆ„ನ್‌ ಸೀರೆಗಳಿಗೆ ಕಾಂಟ್ರಾಸ್ಟ್‌ ಬ್ಲೌಸ್‌ ಬರುವುದರಿಂದ ಸ್ವಲ್ಪ ಡಿಫ‌ರೆಂಟ್‌ ಆಗಿದ್ದರೆ ಆಕರ್ಷಕವಾಗಿ ಕಾಣಿಸುತ್ತದೆ. ಬ್ಲೌಸ್‌ನ ತೋಳು ಮೊಣಕೈವರೆಗೆ ಇಲ್ಲವೆ ಫ‌ುಲ್‌ಕೈ ತೋಳು ಮಾಡಿದರೆ ಆಕರ್ಷಕ ಲುಕ್‌ ನೀಡುತ್ತದೆ.

.ರವಿಕೆಯ ಬೆನ್ನಿನ ಭಾಗಕ್ಕೆ ಸೀರೆಯ ಬಾರ್ಡರ್‌ ಇಲ್ಲವೇ ಜರಿ ಅಥವಾ ಜರಿಯ ಲೇಸ್‌, ಗೋಲ್ಡನ್‌ ಲೇಸ್‌, ಸಿಲ್ವರ್‌ ಲೇಸ್‌, ಬಾರ್ಡರ್‌ ಇರುವ ಪಟ್ಟಿಗಳನ್ನೂ ಫಿಕ್ಸ್‌ ಮಾಡಬಹುದು. ಮಿರರ್‌, ಸ್ಟೋನ್‌ಗಳನ್ನು ಇರಿಸಿ ಹೊಲಿದರೆ ಅಂದ ಇನ್ನೂ ಹೆಚ್ಚುತ್ತದೆ. ರೌಂಡ್‌ ನೆಕ್‌, ಸ್ಕ್ವೇರ್‌ ನೆಕ್‌ನ ಬದಲು ಸ್ವಲ್ಪ ಸ್ಟೈಲಿಸ್‌ ರೀತಿಯಲ್ಲಿ, ಅಂದರೆ ರೌಂಡ್‌ ನೆಕ್‌ ಸ್ಟೈಲ್‌ಗೆೆ ಸುತ್ತಲು ಜರಿಯ ಲೇಸ್‌ ಇಟ್ಟು  ತುದಿಯಲ್ಲಿ ಹ್ಯಾಂಗಿಗ್‌ ಇಲ್ಲವೆ ಬಟನ್‌ ಇರಿಸಿ ಹೊಲಿದರೆ ಮತ್ತೂ ಸ್ಟೈಲಿಸ್‌ ಲುಕ್‌ ನೀಡುತ್ತದೆ.

.ನೀಲಿ ಬಣ್ಣದ ಸೀರೆಗಳಿಗೆ ಕಡುಗೆಂಪು, ಡಾರ್ಕ್‌ ಪಿಂಕ್‌, ಕೇಸರಿ ಬಣ್ಣದ ಬ್ಲೌಸ್‌ಗಳು ಒಪ್ಪುತ್ತವೆ. ಗುಲಾಬಿ ಅಥವಾ ತಿಳಿಗೆಂಪು ಸೀರೆಗೆ ನೇರಳೆ, ಹಸಿರು, ಕಡು ನೀಲಿ ಬಣ್ಣದ ಡಿಸೈನರ್‌ ಬ್ಲೌಸ್‌ಗಳು ಆಕರ್ಷಕವಾಗಿ ಕಾಣಿಸುತ್ತದೆ. 

.ಕೇಸರಿ ಬಣ್ಣದ ಸೀರೆಗೆ ಕಡುನೀಲಿ, ಕಡು ಗುಲಾಬಿ, ಕಪ್ಪು , ಹಸಿರು, ನೇರಳೆ, ಕ್ರೀಮ್‌, ಪ್ಯಾರಟ್‌ ಗ್ರೀನ್‌ ಬ್ಲೌಸ್‌ಗಳು ಹೊಂದಿಕೆಯಾಗುತ್ತವೆ. ಹಸಿರು ಸೀರೆಗಳಿಗೆ ಕೆಂಪು, ಗಾಢ ಗುಲಾಬಿ, ಕಡು ನೀಲಿ, ನೇರಳೆ ಬಣ್ಣದ ಬ್ಲೌಸ್‌ ಚೆನ್ನಾಗಿ ಹೊಂದಿಕೆಯಾಗುತ್ತದೆ.

ಸ್ವಾತಿ ಎನ್ 

Advertisement

Udayavani is now on Telegram. Click here to join our channel and stay updated with the latest news.

Next