ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನನ್ನ ಅಣ್ಣನನ್ನು ನೋಡಲು ಉಪ್ಪಿನಂಗಡಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಸಾಯಂಕಾಲ 5.05 ಗಂಟೆಗೆ ಉಪ್ಪಿನಂಗಡಿಯಿಂದ ಹೊರಟ ಬಸ್ಸನ್ನು ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ. ಅಪಾಯದ ಸೂಚನೆ ದೊರೆತು ನಾನು ಮೂರು ಬಾರಿ ಚಾಲಕನಲ್ಲಿ ಜಾಗ ರೂಕವಾಗಿ ಚಲಾ ಯಿಸುವಂತೆ ಮನವಿ ಮಾಡಿದ್ದೆ. ಆದರೂ ಕ್ಯಾರೇ ಅನ್ನದ ಆತ ಹಿಂದಿನಿಂದ ಬರುತ್ತಿದ್ದ ವಾಹನದ ಜತೆ ಪೈಪೋಟಿಗಿಳಿದು 5.25ರ ವೇಳೆಗೆ ಅಪಘಾತ ನಡೆಸಿ ನನ್ನ ಪತ್ನಿಯ ಸಾವಿಗೆ ಕಾರಣನಾದ ಎಂದು ಅವರು ಹೇಳಿದ್ದಾರೆ.
Advertisement
ಪರಿಹಾರಧನ ನಿರಾಕರಣೆದಿವ್ಯಾ ಪ್ರಭು ಅವರ ರಾಮನಗರದ ಮನೆಗೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅಂತಿಮ ದರ್ಶನ ಪಡೆದು 15 ಸಾ. ರೂ. ಪರಿಹಾರ ವಿತರಿಸಲು ಮುಂದಾದರು. ಅದನ್ನು ಸ್ವೀಕರಿಸಲು ನಿರಾಕರಿಸಿದ ಮಹೇಶ್ ಪ್ರಭು, ಪತ್ನಿಯ ಸಾವಿಗೆ ಕಾರಣನಾದ ಚಾಲ ಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.