Advertisement
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‌ಬಿಎಂ-1913), ಸ್ಟೇಟ್ ಬ್ಯಾಂಕ್ ಆಫ್ ಬಿಕಾನಿರ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ತ್ರವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ- ಇವೇ ಆ ಐದು ಎಸ್‌ಬಿಐನ ಸಹವರ್ತಿಬ್ಯಾಂಕುಗಳು.
Related Articles
Advertisement
ಈಗ ಮೈಸೂರು ಬ್ಯಾಂಕಿನ 1056 ಶಾಖೆಗಳು ದೇಶಾದ್ಯಂತ ಕಾರ್ಯನಿರ್ವಸುತ್ತಿದ್ದು ಹೆಚ್ಚಿನ ಶಾಖೆಗಳು ನಮ್ಮ ರಾಜ್ಯದಲ್ಲಿಯೇ ಇವೆ. ಈ ಬ್ಯಾಂಕಿನಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆ 10,510. ಅದೇನೋ ನಮ್ಮ ರಾಜ್ಯದ ಜನರಿಗೆ ಮೈಸೂರು ಬ್ಯಾಂಕೆಂದರೆ ಮಹಾ ಪ್ರೀತಿ. ಇವತ್ತಿಗೂ ಮೈಸೂರು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಕುಟುಂಬದ ವಾತಾವರಣ. ಈವರೆಗೆ ಅಲ್ಲಿ ದೊರೆಕುತ್ತಿದ್ದದ್ದು ಅಚ್ಚ ಕನ್ನಡದ ಗ್ರಾಹಕ ಸೇವೆ. ಇನ್ನು ಮುಂದೆ ಅದು ಮರೀಚಿಕೆಯೇ? ಕಾದು ನೋಡಬೇಕು. ರಾಜ್ಯ ಸರ್ಕಾರದ ಟ್ರಜರಿ ಸೇವೆಯನ್ನು ನಿರ್ವಹಿಸುತ್ತಿರುವ ಈ ಬ್ಯಾಂಕಿನ ಗ್ರಾಹಕರಲ್ಲಿ ರೈತರು ಹಾಗೂ ಸರ್ಕಾರಿ ನೌಕರರು ಹೆಚ್ಚಿನ ಖಾತೆ ಹೊಂದಿದ್ದಾರೆ. ಜನರ ದೃಷ್ಟಿಯಲ್ಲಿ ಇದೊಂದು ಸರ್ಕಾರಿ ಬ್ಯಾಂಕು. ಇಲ್ಲಿ ಠೇವಣಿ ಇಟ್ಟರೆ ತಮ್ಮ ಹಣ ಸುರಕ್ಷಿ$ತವೆಂಬ ಭಾವನೆ ಬೇರೂರಿದೆ.
ಇಂಡಿಯಾ ಜೊತೆ ಹೆಜ್ಜೆಇನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಇತಿಹಾಸವೂ ರೋಚಕವಾಗಿದೆ. 1806ರಲ್ಲಿ ಸ್ಥಾಪಿತವಾದ ಬ್ಯಾಂಕ್ ಆಫ್ ಬೆಂಗಾಲ್, ಬ್ಯಾಂಕ್ ಆಫ್ ಬಾಂಬೆ, ಬ್ಯಾಂಕ್ ಆಫ್ ಮದ್ರಾಸ್ ಎಂಬ ಮೂರು ಪ್ರಸಿಡೆನ್ಸಿ ಬ್ಯಾಂಕುಗಳು ಪೆಪರ್ ಕರೆನ್ಸಿ ತಯಾರಿಸುತ್ತಿದ್ದವು. ಇದರ ಹಕ್ಕುಗಳನ್ನು ಆಗಿನ ಸರ್ಕಾರ ವಹಿಸಿಕೊಡಿದ್ದರಿಂದ ಈ ಮೂರು ಬ್ಯಾಂಕುಗಳು ಸೇರಿ 27 ಜನವರಿ 1921 ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೊಸ ಬ್ಯಾಂಕು ಆರಂಭಿಸಿದರು. 1 ಜುಲೈ 1955ರಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಿತು.2008 ರಲ್ಲಿ ಭಾರತ ಸರ್ಕಾರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸ್ವಾಮ್ಯತೆಯನ್ನು ಬಿಡಿಸಿ ತನ್ನ ಅಧೀನದಲ್ಲಿರಿಸಿಕೊಂಡಿದೆ. 1959 ರಿಂದ 1960 ರಲ್ಲಿ ಭಾರತ ಸರ್ಕಾರವು ಸ್ವಾತಂತ್ರ್ಯ ಪೂರ್ವದಲ್ಲಿ ರಾಜರ ಆಳ್ವಿ$Ìಕೆಯಲ್ಲಿದ್ದ ಏಳು ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹವರ್ತಿ ಬ್ಯಾಂಕುಗಳನ್ನಾಗಿಸಿತು. ಏಕೆ ಈ ವಿಲೀನ?
2008 ರಲ್ಲಿ ಸಹವರ್ತಿ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರವನ್ನು ವಿಲೀನ ಮಾಡಿಕೊಂಡ ಎಸ್‌ಬಿಐ 2010 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂದೋರನ್ನು ವಿಲೀನಗೊಳಿಸಿಕೊಂಡಿತು. ತಾನು ಪ್ರಪಂಚದ ಭೂಪಟದಲ್ಲಿ ಐವತ್ತು ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಇನ್ನುಳಿದ ಸಹವರ್ತಿ ಬ್ಯಾಂಕುಗಳನ್ನು ಲೀನಗೊಳಿಸಿಕೊಳ್ಳುತ್ತಿದೆ. ಆದರೆ ಆರ್ಥಿಕತಜ್ಞರ ಪ್ರಕಾರ ಎಸ್‌ಬಿಐ ಈ ನಿಲುವಿಗೆ ಕಾರಣ ದೊಡ್ಡದೊಡ್ಡ ಕಾರ್ಪೊàರೇಟ್‌ಗಳಿಗೆ ಸಾಲ ನೀಡಬೇಕಿದ್ದರೆ ಬ್ಯಾಂಕಿನ ಬಂಡವಾಳ ಸಾಕ್ಟರಬೇಕು. ಅದಿಲ್ಲದಿದ್ದರೆ ಮೂರ್‍ನಾಲ್ಕು ಬ್ಯಾಂಕುಗಳು ಸೇರಿ ಇಂತಹ ಕಾರ್ಪೊàರೇಟುಗಳಿಗೆ ಸಾಲ ಕೊಡಬೇಕು. ಅದಕ್ಕಾಗಿ ಈ ಎಲ್ಲಾ ಬ್ಯಾಂಕುಗಳನ್ನು ನುಂಗಿ ತನ್ನ ಅಸ್ತಿತ್ವವನ್ನು ಸ್ತರಿಸುತ್ತಿದೆ. ಅದಿಲ್ಲದಿದ್ದರೆ ನಷ್ಟದಲ್ಲಿರುವ ಬ್ಯಾಂಕುಗಳ ಬದಲಾಗಿ ಸದಾ ಲಾಭದಲ್ಲಿರುವ ಬ್ಯಾಂಕುಗಳನ್ನು ವಿಲೀನ ಗೊಳಿಸುವುದೇಕೆ? ಶ್ರೀಮತಿ ಇಂದಿರಾಗಾಂಧಿಯವರು ಮಾಡಿದ ಬ್ಯಾಂಕಿಂಗ್ ರಾಷ್ಟ್ರೀಕರಣದ ಆಶಯಗಳು ಹಿಂದೆಬಿದ್ದು ಕಾರ್ಪೊರೇಟೀಕರಣ ಮಾಡುತ್ತಿದ್ದಾರೆ ಎಂದು ಲೀನ ವಿರೋಧಿಸುತ್ತಿರುವ ನೌಕರ ಸಂಘಟನೆಗಳು ಮುಷ್ಕರಮಾಡಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಎಲ್ಲಾ ಸಹವರ್ತಿ ಬ್ಯಾಂಕುಗಳ ಕಾರ್ಯವೈಖರಿ, ಸಂಸ್ಕೃತಿ ಎಲ್ಲಾ ಒಂದೇ ತೆರನಾದದ್ದು. ಅಲ್ಲಿನ ನೌಕರರ ಸಂಬಳ ಸವಲತ್ತುಗಳು ಒಂದೇ ರೀತಿಯದ್ದು. ಆದರೆ ನೌಕರ ಸಂಘಟನೆಗಳ ಅಭಿಪ್ರಾಯದ ಪ್ರಕಾರ ಎಸ್‌ಬಿಐನದು ಬ್ರಿಟೀಷರು ಆರಂಭಿಸಿದ ಇಂಪೀರಿಯಲ್ ಬ್ಯಾಂಕು ಇದಾದ್ದರಿಂದ ಇದರ ಆಡಳಿತ ವರ್ಗದ ನಿಲವುಗಳು, ನಿಯಮಗಳು ಬ್ರಿಟಿಷರಂತೆ ಆಕ್ರಮಣಕಾರಿ, ಏಕಪಕ್ಷೀಯ ಹೇರಿಕೆಯ ನಿಲುವುಗಳು. ಪರಿಣಾಮ -ವಿಲೀನದಿಂದಾಗಿ ಶೇ47 ರಷ್ಟು ಆಡಳಿತಾತ್ಮಕ ಕಚೇರಿಗಳು, ಶಾಖೆಗಳು ಮುಚ್ಚಲ್ಪಡುತ್ತಿವೆ. ನೌಕರರ ಗಾತ್ರ ಕಡಿಮೆಮಾಡಲು ಸಹವರ್ತಿಬ್ಯಾಂಕುಗಳಲ್ಲಿ ಮಾತ್ರ ವಿಆರ್‌ಎಸ್ ಜಾರಿಗೆ ತರಲಾಗುತ್ತಿದೆ. ಹೆಚ್ಚಾದ ಸಿಬ್ಬಂದಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುವ ಅಪಾಯವಿದೆ. ಸಹ ಸಿಬ್ಬಂದಿಯಂತಹ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಣದ ವ್ಯವಹಾರ ನಡೆಯುವ ಇಂತಹ ಜಾಗದಲ್ಲಿ ಇದು ಅಪಾಯಕರ ಎಂಬುದು ಸಂಘಟನೆಗಳ ವಾದ. ಆಯಾ ರಾಜ್ಯಗಳ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಸಹವರ್ತಿ ಬ್ಯಾಂಕುಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿವೆ. ಅವುಗಳನ್ನು ಇರುವ ರೀತಿಯಲ್ಲಿಯೇ ಉಳಿಸಿಕೊಳ್ಳುವ ಸಾಂಸ್ಕೃತಿಕ ಜವಬಾœರಿ ಆಯಾ ರಾಜ್ಯ ಸರ್ಕಾರದ್ದಾಗಿದೆ. ಅದಕ್ಕಾಗಿ ರಾಜಕೀಯ ಪ್ರಭಾವದ ಮೂಲಕ ಈ ವಿಲೀನಕ್ಕೆ ರಾಜ್ಯಸರ್ಕಾರಗಳು ವಿರೋಧ ತೋರಬೇಕಿತ್ತು ಎಂಬ ಅಭಿಪ್ರಾಯವೂ ಇದೆ. – ರಾಮಸ್ವಾಮಿ ಕಳಸವಳ್ಳಿ