Advertisement

ಮುಜಫ‌ರಪುರ: ದಟ್ಟ ಮಂಜು ; 9 ವಾಹನಗಳು ಪರಸ್ಪರ ಢಿಕ್ಕಿ; 1 ಸಾವು

06:38 AM Jan 04, 2019 | Team Udayavani |

ಪಟ್ನಾ : ಬಿಹಾರದ ಮುಜಫ‌ರಪುರ ದಲ್ಲಿ ದಟ್ಟ ಮಂಜು ಕವಿದುಕೊಂಡ ಕಾರಣ ಗೋಚರತೆ ತುಂಬ ಕಡಿಮೆ ಇದ್ದ ಸ್ಥಿತಿಯಲ್ಲಿ ಸುಮಾರು 9 ಮೋಟಾರು ವಾಹನಗಳು ಪರಸ್ಪರ ಗುದ್ದಿಕೊಂಡ ಸರಣಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ಇತರ ಕನಿಷ್ಠ 15 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಇಂದು ಶುಕ್ರವಾರ ಬೆಳಗ್ಗೆ ಮುಜಫ‌ರಪುರದ 28ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಟ್ಯಾಂಕರ್‌ ಸಹಿತ ಕನಿಷ್ಠ 9 ಮೋಟಾರು ವಾಹನಗಳು ಪರಸ್ಪರ ಗುದ್ದಿಕೊಂಡು ತೀವ್ರವಾಗಿ ಹಾನಿಗೀಡಾದವು. ಇದರ ತೀವ್ರತೆಯಲ್ಲಿ ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. 

ಅವಘಡ ನಡೆದೊಡನೆಯೇ ಸ್ಥಳೀಯರು ಮತ್ತು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಬಂದು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next