Advertisement
1. ಲಾಭದ ಗುರಿ ಹಾಕಿಕೊಳ್ಳದಿರುವುದುಬಂಡವಾಳ ಹೂಡಿಕೆ ಮಾಡುವುದೇ ಲಾಭಕ್ಕೋಸ್ಕರ. ಹೀಗಾಗಿ ನಿರ್ದಿಷ್ಟ ಮೊತ್ತದಷ್ಟು ಲಾಭದ ಗುರಿಯನ್ನು ಹೂಡಿಕೆದಾರ ಹಾಕಿಕೊಂಡಿರಬೇಕು. ನಮ್ಮ ಆರ್ಥಿಕ ಶಕ್ತಿಗೆ ತಕ್ಕಂತೆ, ಹೆಚ್ಚು ಪ್ರಯೋಜನಗಳನ್ನು ಒದಗಿಸುವ ಯೋಜನೆಗಳನ್ನು ಹುಡುಕಿ, ಪರಾಮರ್ಶಿಸಿ, ಬಳಿಕವೇ ಬಂಡವಾಳ ಹೂಡಬೇಕು.
ಮ್ಯೂಚುವಲ್ ಫಂಡ್ಸ್‌ನಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಷ್ಟೂ ಹೆಚ್ಚು ಲಾಭ ದೊರೆಯುತ್ತದೆ. ಕಡೇ ಪಕ್ಷ 5 ರಿಂದ 7 ವರ್ಷಗಳ ಅವಧಿಗಾದರೂ ಹೂಡಿಕೆ ಮಾಡುವುದು ಉತ್ತಮ. ದೀರ್ಘಾವಧಿಯ ಕಾಲ ಬಂಡವಾಳ ಹೂಡಿಕೆ ಮಾಡುವುದರಿಂದ, ಒಳಹೊರಗು ತಿಳಿಯುವುದರ ಜೊತೆಗೆ, ಮಾರುಕಟ್ಟೆಯಲ್ಲಿ ನಿಯಂತ್ರಣ ಸಾಧಿಸಬಹುದಾಗಿದೆ. 3. ಎನ್‌ಎವಿಗೆ ಹೋಲಿಸಿಕೊಂಡು ಬಂಡವಾಳ ಹೂಡಿಕೆ
“ದಿ ಚೀಪರ್, ದಿ ಬೆಟರ್’ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಮ್ಯೂಚುವಲ್ ಫಂಡ್ಸ್ ವಿಷಯದಲ್ಲಿ ಹಾಗನ್ನಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಹೊಸ ಹೂಡಿಕೆದಾರರು ಈ ತಪ್ಪನ್ನು ಮಾಡುತ್ತಾರೆ. ಅವರು ಮ್ಯೂಚುವಲ್ ಫಂಡ್‌ನ ನಿವ್ವಳ ಆಸ್ತಿ ಮೌಲ್ಯ(NAV- Net Asset Value)ಕ್ಕೆ ತಕ್ಕಂತೆ ಬಂಡವಾಳ ಹಾಕುತ್ತಾರೆ. ಅದು ತಪ್ಪು. ಮ್ಯೂಚುವಲ್ ಫಂಡ್ಸ್‌ಗಳನ್ನು ಯೂನಿಟ್ ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಪ್ರತಿ ಯುನಿಟ್‌ನ ಬೆಲೆಯೇ NAV- Net Asset Value. ಪ್ರತಿ ಯೂನಿಟ್‌ನ ಬೆಲೆ ಎಷ್ಟಿದೆ ಎಂಬುದನ್ನು ಹೂಡಿಕೆದಾರರು ತಿಳಿದಿರಬೇಕು. ಹೂಡಿಕೆಗಳ ಬೆಲೆ ನಿರ್ಧರಿತವಾಗುವುದು, ಭದ್ರತಾ ಠೇವಣಿ, ಅವುಗಳ ವ್ಯವಸ್ಥಿತ ಬಳಕೆ ಹಾಗೂ ಕೈಗೊಳ್ಳುವ ನಿರ್ಧಾರಗಳ ಮೇಲೆ.
Related Articles
ವಿವಿಧ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಿಗೆ ಸಿಗುತ್ತದೆ ಎನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಈ ರೀತಿ ಹೂಡಿಕೆ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಯೇ ಹೆಚ್ಚು. ಕೆಲ ಯೋಜನೆಗಳು ನಮ್ಮ ಹೂಡಿಕೆಗೆ ತಕ್ಕಂತೆ ಲಾಭ ತಂದುಕೊಡದೇ ಇರಬಹುದು. ಅಲ್ಲದೆ, ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದಾಗ ವಿವಿಧ ದಿನಾಂಕಗಳಲ್ಲಿ ಹಣ ಕಡಿತಗೊಳ್ಳುವ ಕಾರಣ ಹೂಡಿಕೆದಾರನ ಖಾತೆಯೂ ಖಾಲಿಯಾಗುತ್ತದೆ. ಅದೇ ರೀತಿ, ಎಲ್ಲ ಹಣವನ್ನೂ ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡುವುದೂ ಆರೋಗ್ಯಕರವಲ್ಲ.
Advertisement
5. ನಷ್ಟದ ಸಾಧ್ಯತೆ ಕುರಿತು ನಿರ್ಲಕ್ಷ್ಯಮ್ಯೂಚುವಲ್ ಫಂಡ್ಸ್ ಹೂಡಿಕೆ ಏರಿಳಿತಗಳ ಗೂಳಿ ಆಟವಿದ್ದಂತೆ. ಕೆಲವು ಸಾರಿ ಮೂಲ ಬಂಡವಾಳವೇ ಕೈತಪ್ಪಿ ಹೋಗುವ ಅಪಾಯವೂ ಇರುತ್ತದೆ. ಇಂಥ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸಬಾರದು. ನಷ್ಟವಾಗುವ ಸಾಧ್ಯತೆಗಳಿದ್ದರೆ ಅದನ್ನು ಖಾತರಿ ಪಡಿಸಿಕೊಂಡು ಈಕ್ವಿಟಿ ಫಂಡ್ಸ್ ಅಥವಾ ಇನ್ನಿತರ ಯೋಜನೆಗಳಿಂದ ಹೂಡಿಕೆ ವಾಪಸ್ ಪಡೆಯುವ ಬಗ್ಗೆ ಚಿಂತನೆ ನಡೆಸಬಹುದು. ಇಲ್ಲವೇ, ಸದ್ಯಕ್ಕೆ ನಷ್ಟ ಅನುಭವಿಸಿದರೂ ಸಹ, ಮುಂದಿನ ಆರು ತಿಂಗಳಿಗೆ ತೊಂದರೆಯಿಲ್ಲದೆ ಸಾಗುವಂತೆ ನಿಮ್ಮ ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ. – ಮಲ್ಲಪ್ಪ ಪಾರೆಗಾಂವ