Advertisement

Mutt Visit: ಸಿದ್ದನಕೊಳ್ಳ ಮಠಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ

12:40 AM Sep 03, 2024 | Team Udayavani |

ಅಮೀನಗಡ (ಬಾಗಲಕೋಟೆ ಜಿಲ್ಲೆ) : ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ, ನಿರಂತರ ದಾಸೋಹ ಮಠ ಎಂದೇ ಹೆಸರುವಾಸಿಯಾಗಿರುವ ಇಳಕಲ್ ತಾಲೂಕಿನ ಸಿದ್ದನಕೊಳ್ಳ ಮಠಕ್ಕೆ ಸೋಮವಾರ ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭೇಟಿ ನೀಡಿದರು.

Advertisement

ಬಳಿಕ ಸಿದ್ದನಕೊಳ್ಳ ಮಠದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರಲ್ಲದೇ, ಧರ್ಮಾಧಿಕಾರಿ ಡಾ.ಶಿವಕುಮಾರ್ ಸ್ವಾಮೀಜಿ  ಆಶೀರ್ವಾದ ಪಡೆದರು. ಸಿದ್ದನಕೊಳ್ಳ ಮಠವು ರಾಷ್ಟ್ರಕೂಟರು, ಚಾಲುಕ್ಯರ ಕಾಲದಿಂದಲೂ ಈ ಮಠ ಖ್ಯಾತಿ ಪಡೆದಿದ್ದು, ಸಿದ್ದಿ ಪುರುಷರ ನೆಚ್ಚಿನ ತಾಣವಾಗಿದೆ.

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಿದ್ದನಕೊಳ್ಳಕ್ಕೆ ಭೇಟಿ ಮಾಡಿದ ನಂತರ ಸಂಸದರಾಗಿ, ಕೇಂದ್ರ ಸಚಿವರಾದ ನಂತರ ಶ್ರಾವಣ ಮಾಸದ ಕೊನೆಯ ಸೋಮವಾರ ಅಮಾವಾಸ್ಯೆ ದಿನದಂದೇ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸುಕ್ಷೇತ್ರ ಸಿದ್ದನಕೊಳ್ಳಕ್ಕೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕರದಂಟು ಸವಿದ ನಳಿನ್‌:
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಸೋಮವಾರ ಸಿದ್ದನಕೊಳ್ಳಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಅಮೀನಗಡ ಪಟ್ಟಣದ ವಿಜಯಾ ಕರದಂಟು ಮಳಿಗೆ ಭೇಟಿ ನೀಡಿ‌ ಕರದಂಟು ಸವಿದರು. ಈ ವೇಳೆ ಕರದಂಟು ಉದ್ಯಮಿ ಸಂತೋಷ ಐಹೊಳ್ಳಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಸನ್ಮಾನ ಮಾಡಿ, ಕರದಂಟು ನೀಡಿ, ಕರದಂಟು ಬಗ್ಗೆ ಮಾಹಿತಿ ನೀಡಿದರು. ಕರದಂಟು ಉದ್ಯಮದ ಬಗ್ಗೆ ಮಾಹಿತಿ ಪಡೆದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಕರದಂಟು ಉದ್ಯಮಕ್ಕೆ ಶುಭಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next