Advertisement

ಮುತ್ತುಲಕ್ಷ್ಮೀ ಮತ್ತೆ ಆರಂಭ

12:03 PM May 29, 2017 | Team Udayavani |

ಪೂಜಾಗಾಂಧಿ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣ ಸಿನಿಮಾಗಳೇ ಹೊರತು ಬೇರೇನಲ್ಲ. ಈಗಾಗಲೇ ಅವರ ನಿರ್ಮಾಣದಲ್ಲಿ ಜೆ.ಡಿ.ಚಕ್ರವರ್ತಿ ನಿರ್ದೇಶನದಲ್ಲಿ ಮೂರು ಸಿನಿಮಾಗಳು ಲಾಂಚ್‌ ಆಗಿ ಶೂಟಿಂಗ್‌ನಲ್ಲಿವೆ. ಈಗ “ದಂಡುಪಾಳ್ಯ’ ಚಿತ್ರದ ಮುಂದುವರಿದ ಭಾಗ “2′ ಬಿಡುಗಡೆಯಾಗಲಿದೆ. ಜೊತೆಗೆ “3′ ಕೂಡಾ ರೆಡಿಯಾಗಿದೆ.

Advertisement

ಇಲ್ಲಿ ಪೂಜಾಗಾಂಧಿಯ ಲಕ್ಷ್ಮೀಯ ಪಾತ್ರ ಮುಂದುವರೆಯುತ್ತಲೇ ಹೋಗಿದೆ. ಇದು ಬಿಡುಗಡೆಯ ಖುಷಿಯಾದರೆ ನಿಂತು ಹೋದ ಚಿತ್ರವೊಂದು ಆರಂಭವಾಗುತ್ತಿದೆ. ಅದು “ಮುತ್ತುಲಕ್ಷ್ಮೀ’. ಮೂರು ವರ್ಷಗಳ ಹಿಂದೆ ಪೂಜಾಗಾಂಧಿ ಮುಖ್ಯಭೂಮಿಕೆಯಲ್ಲಿದ್ದ “ಮುತ್ತುಲಕ್ಷ್ಮೀ’ ಎಂಬ ಚಿತ್ರವೊಂದು ಆರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ನಿಂತು ಹೋಗಿತ್ತು.

ಈಗ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮತ್ತೆ ಆರಂಭವಾಗುತ್ತಿದೆ. “ಮುತ್ತುಲಕ್ಷ್ಮೀ’ ಮತ್ತೆ ಆರಂಭವಾಗುತ್ತಿರುವುದನ್ನು ಸ್ವತಃ ಪೂಜಾಗಾಂಧಿ ಒಪ್ಪಿಕೊಳ್ಳುತ್ತಾರೆ. “ಸದ್ಯದಲ್ಲೇ “ಮುತ್ತುಲಕ್ಷ್ಮೀ’ ಆರಂಭವಾಗಲಿದ್ದು, ಮತ್ತೂಮ್ಮೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎನ್ನುವುದು ಪೂಜಾ ಮಾತು. 

Advertisement

Udayavani is now on Telegram. Click here to join our channel and stay updated with the latest news.

Next