Advertisement

ಶೀಘ್ರವೇ ಬರಲಿದೆ ಕುಲಾಂತರಿ ಸಾಸಿವೆ

11:53 PM Oct 27, 2022 | Team Udayavani |

ಹೊಸದಿಲ್ಲಿ: ಹದಿನೈದು ವರ್ಷಗಳ ಸಂಶೋಧನೆ ಬಳಿಕ ಕುಲಾಂತರಿ ಸಾಸಿವೆಗೆ ದೇಶದಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಅಧಿಕವಾಗಿದೆ.

Advertisement

ಇದರ ಸಂಶೋಧನೆ ಮತ್ತು ಅಭಿವೃದ್ಧಿಯ ಹೊಣೆ ಹೊತ್ತಿದ್ದ ಜೆನೆಟಿಕ್‌ ಅಪ್ರೈಸಲ್‌ ಸಮಿತಿ ವಾಣಿಜ್ಯಿಕವಾಗಿ ಕುಲಾಂತರಿ ಸಾಸಿವೆಯನ್ನು ಬೆಳೆಯಬಹುದು ಎಂದು ಶಿಫಾರಸು ಮಾಡಿದೆ. ಈ ಸಮಿತಿಯು ಕೇಂದ್ರ ಪರಿಸರ ಇಲಾಖೆಯ ಅಡಿಯಲ್ಲೇ ಬರುವುದರಿಂದ ಕುಲಾಂತರಿ ಸಾಸಿವೆ ಬೆಳೆಯಲು ಒಪ್ಪಿಗೆ ಸಿಗುವ ಸಂಭವವಿದೆ.

ಭಾರತ ಪ್ರತೀ ವರ್ಷವೂ ಅಡುಗೆ ಎಣ್ಣೆಗಾಗಿ ವಿವಿಧ ದೇಶಗಳನ್ನು ಅವಲಂಬಿಸಿದೆ. ಶೇ.70ರಷ್ಟು ಅಡುಗೆ ಎಣ್ಣೆ ಅರ್ಜೆಂಟೀನಾ, ಬ್ರೆಜಿಲ್‌, ಇಂಡೋನೇಷ್ಯಾ,  ಮಲೇಷ್ಯಾ, ಉಕ್ರೇನ್‌ ಮತ್ತು ರಷ್ಯಾದಿಂದ ತರಿಸಿಕೊಳ್ಳುತ್ತಿದೆ. ಸದಾ ಒಂದಿಲ್ಲೊಂದು ಕಾರಣದಿಂದಾಗಿ ಈ ದೇಶಗಳಿಂದ ಪೂರೈಕೆಗೆ ಅಡ್ಡಿಯಾಗುತ್ತದೆ. ಇಂಥ ವೇಳೆಯಲ್ಲಿ ಅಡುಗೆ ಎಣ್ಣೆಯ ದರವೂ ಏರಿಕೆಯಾಗಿ ಹಣದುಬ್ಬರಕ್ಕೂ ಕಾರಣವಾಗುತ್ತಿದೆ. ಹೀಗಾಗಿ ದೇಶದಲ್ಲೇ ಸಾಸಿವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಈ ಸಂಶೋಧನೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸಂಶೋಧಕ ದೀಪಕ್‌ ಪೆಂಟಲ್‌, ಇದೊಂದು ಐತಿಹಾಸಿಕ ವಿದ್ಯಮಾನ ಎಂದು ಬಣ್ಣಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಾಸಿವೆ ಬೆಳೆಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಒಂದೆರಡು ವರ್ಷಗಳಲ್ಲಿ ವಾಣಿಜ್ಯಾತ್ಮಕವಾಗಿ ಸಾಸಿವೆ ಬೆಳೆಯಲು ಬೀಜಗಳನ್ನು ಪಡೆಯಬಹುದಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next