Advertisement

ಬದಲಾವಣೆಗೆ ಸಿದ್ದರಿರಬೇಕು: ಇಶಾಂತ್‌

12:09 PM May 20, 2020 | mahesh |

ಹೊಸದಿಲ್ಲಿ: ಚೆಂಡಿನ ಹೊಳಪಿಗಾಗಿ ಎಂಜಲು ಸವರುವುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿಷೇಧಿಸಿದರೆ ಹೊಸ ಪದ್ಧತಿಗೆ ವೇಗದ ಬೌಲರ್‌ಗಳು ಒಗ್ಗಿಕೊಳ್ಳುವುದು ಅನಿವಾರ್ಯ ಎಂದು ಭಾರತ ತಂಡದ ವೇಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ, ICC, ಇಶಾಂತ್‌ ಶರ್ಮಾ, Ishant Sharma, Cricket ಅಭಿಪ್ರಾಯಪಟ್ಟಿದ್ದಾರೆ.

Advertisement

ಭವಿಷ್ಯದಲ್ಲಿ ಎಲ್ಲ ಕ್ರೀಡೆಗಳಲ್ಲೂ ಕೆಲ ಬದಲಾವಣೆ ಬರುವ ಸಾಧ್ಯತೆ ಇದೆ ಒಂದೊಮ್ಮೆ ಇಂತಹ ನಿಯಮ ಜಾರಿಯಾದರೆ ಅದನ್ನು ಎಲ್ಲ ಕ್ರೀಡಾಪಡುಗಳು ಒಪ್ಪಲೇ ಬೇಕಾದ ಸ್ಥಿತಿ ಬರಬಹುದು. ಅದರಂತೆ ಕ್ರಿಕೆಟ್‌ನಲ್ಲಿ ಕೆಲವು ಬದಲಾವಣೆಗಳಾದರೆ ಅದನ್ನು ಅಳವಡಿಸಿಕೊಳ್ಳಲು ಆಟಗಾರರು ಮನಸ್ಸು ಮಾಡಬೇಕು ಎಂದು ಇಶಾಂತ್‌ ಹೇಳಿದ್ದಾರೆ.

ಎಂಜಲು ಸವರುವುದರಿಂದ ಬೌಲರ್‌ ಬಯಸಿದಂತೆ ಚೆಂಡು ಸ್ವಿಂಗ್‌ ಮಾಡಬಹುದು ಆದರೆ ಈ ಬಗ್ಗೆ ಚರ್ಚಿಸಲು ಇದು ಸಕಾಲವಲ್ಲ ಎಂದೆನಿಸುತ್ತದೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದರ ಕುರಿತು ಚಿಂತನೆ ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next