Advertisement

ಸರಕಾರಿ ಹುದ್ದೆಗಾಗಿ ಸಹಿಷ್ಣುಗಳ ಮುಖವಾಡ: ಸಚಿವ ಸತ್ಯಪಾಲ್‌ ಸಿಂಗ್‌ ಬಘೇಲ್‌

11:59 PM May 09, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಬೆರಳೆಣಿಕೆಯ ಮುಸ್ಲಿ ಮರು ಮಾತ್ರ ಸಹಿಷ್ಣುಗಳಾಗಿದ್ದಾರೆ. ಅವರೂ ಉಪ-ರಾಷ್ಟ್ರಪತಿ, ಕುಲಪತಿ, ರಾಜ್ಯಪಾಲರು ಗಳಂಥ ಸ್ಥಾನಕ್ಕಾಗಿ ಈ ರೀತಿ ಸಹಿಷ್ಣುಗಳ ಮುಖ ವಾಡ ತೊಟ್ಟಿರುತ್ತಾರೆ ಎಂದು ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಬಘೇಲ್‌ ಹೇಳಿಕೆ ನೀಡಿದ್ದು, ಇದೀಗ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಕೇಂದ್ರ ಕಾನೂನು ಖಾತೆ ಸಹಾಯಕ ಸಚಿವ ಬಘೇಲ್‌, ಆರ್‌ಎಸ್‌ಎಸ್‌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.

Advertisement

ಈ ವೇಳೆ ಸಮಾಜದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಕುರಿತು ಮಾತನಾಡುತ್ತಾ, ನಮ್ಮ ಸುತ್ತಲಿನ ಮುಸ್ಲಿಮರಲ್ಲಿ ಸಹಿಷ್ಣುಗಳ ಸಂಖ್ಯೆ ಕಡಿಮೆ. ಅದರಲ್ಲೂ ಬಹುತೇಕರು ಸರ್ಕಾರಿ ಹುದ್ದೆಗಳಿಗಾಗಿ, ಸ್ಥಾನಗಳಿಗಾಗಿ ಸಹಿಷ್ಣುಗಳಂತೆ ನಟಿಸುತ್ತಾರೆ. ಅವರ ನಿವೃತ್ತಿಯ ಬಳಿಕ ನಿಜವಾದ ಮನಸ್ಥಿತಿ ಹೊರಬಂದು, ಹೇಳಿಕೆಗಳು ಹೊರಬೀಳುತ್ತವೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next