ಚಿಕ್ಕಮಗಳೂರು : ಅನುಮತಿ ಇಲ್ಲದೆ ದರ್ಗಾ ನವೀಕರಣಕ್ಕೆ ಮುಂದಾದ ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ನಗರದ ಕೋಟೆ ದರ್ಗಾದ ಬಳಿ ನಡೆದಿದೆ.
ಸ್ಥಳದಲ್ಲಿ ಎರಡೂ ಕೋಮಿನ ಜನರೂ ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. 1998ರಿಂದಲೂ ವಿವಾದದಲ್ಲಿರುವ ದರ್ಗಾದಲ್ಲಿ ಉರುಸ್ ಆಚರಣೆಗೆ ಅಷ್ಟೆ ಅವಕಾಶ ಮಾಡಿಕೊಡಲಾಗಿತ್ತು. ಅನುಮತಿ ಇಲ್ಲದೆ ದರ್ಗಾ ಬಳಿ ಶೆಡ್, ಶೌಚಾಲಯ ನಿರ್ಮಾಣ ಮಾಡಿದ ಆರೋಪ ಕೇಳಿಬಂದಿತ್ತು. ಸ್ಥಳದಲ್ಲಿ ಎಸ್ಪಿ, ಎಎಸ್ಪಿ, ನಗರಸಭೆ ಅಧ್ಯಕ್ಷ, ಸರ್ವೇ ಅಧಿಕಾರಿಗಳು ಮೊಕ್ಕಾಂ ಹೂಡಿದ್ಧಾರೆ. ಅಲ್ಲದೆ ಸ್ಥಳದಲ್ಲಿ ಡಿ.ಎ.ಆರ್. ಪೊಲೀಸ್ ತುಕಡಿ ಬೀಡುಬಿಟ್ಟಿದೆ. ಸ್ಥಳದಲ್ಲಿ ಜಮಾಯಿಸಿರುವ ಗುಂಪುಗಳನ್ನ ಚದುರಿಸುವ ವೇಳೆ, ಪೊಲೀಸರ ಜೊತೆ ಸ್ಥಳಿಯರು ವಾಗ್ವಾದಕ್ಕಿಳಿದ ಘಟನೆಯೂ ನಡೆದಿದೆ.
ಇದನ್ನೂ ಓದಿ:ಶಿಕಾರಿಪುರದ ಗಲಭೆ ಹಿಂದೆ ರಾಜಕೀಯ ವಾಸನೆ: ಗೃಹ ಸಚಿವ ಆರಗ ಜ್ಞಾನೇಂದ್ರ