Advertisement

ದೇಶದಲ್ಲಿರುವ ಮುಸ್ಲಿಮರಿಗೂ ಬದುಕುವ ಸಮಾನ ಹಕ್ಕಿದೆ: ಡಾ.ಜಿ.ಪರಮೇಶ್ವರ್

06:44 PM Oct 02, 2022 | Vishnudas Patil |

ಕೊರಟಗೆರೆ: ದೇಶದ ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ ಸಿಗಬೇಕು ಹಾಗೂ ಭಾರತದ ಪ್ರಜೆಗಳೆಲ್ಲರೂ ಭಾವೈಕ್ಯತೆಯಿಂದ ಬಾಳಬೇಕು.ಇದು ಮಹಾತ್ಮಗಾಂಧಿಯವರ ಕನಸಾಗಿದ್ದು, ಇದನ್ನು ಸಫಲಗೊಳಿಸಲು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮುಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

Advertisement

ಇದನ್ನೂ ಓದಿ : ಕೊರಟಗೆರೆ : ಮಾಜಿ ಸೈನಿಕ ಗಿರಿಯಪ್ಪ ಅನಾರೋಗ್ಯದಿಂದ ನಿಧನ

ಪಟ್ಟಣದ ಮಕ್‌ಬುಲ್ ವೃತ್ತ ಮತ್ತು ಮಟನ್ ಮಾರ್ಕೆಟ್ ವೃತ್ತದಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ನೂತನ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಗರ ಘಟಕ ಕಚೇರಿಯನ್ನು ಉದ್ಘಾಟನೆ ಮಾಡಿ ಹಾಗೂ ಇಬ್ಬರು ಮಹಾನ್ ನಾಯಕರ ಜಯಂತಿಯನ್ನು ಆಚರಿಸಿ ಮಾತನಾಡಿ ಮಹಾತ್ಮ ಗಾಂಧಿಜೀಯವರು ಭಾರತವು ಬ್ರಿಟಿಷ್ ರ ಆಡಳಿತ ಇದ್ದ ಕಾಲದಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮೇಲೆ ಬಿಳಿಯರ ದಬ್ಬಾಳಿಕೆ ವಿರುದ್ದ ಹೋರಾಟ ನಡೆಸಿದರು, ನಂತರ ಭಾರತದ ಸ್ವಾತಂತ್ರ್ಯಕ್ಕಾಗಿ ಹಲವು ವರ್ಷಗಳ ಕಾಲ ಶಾಂತಿಯುತ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ತದನಂತರ ಜಿನ್ನಾ ರವರ ಹಠದಿಂದ ಪಾಕಿಸ್ಥಾನ ರೂಪಗೊಂಡರೂ ನಮ್ಮ ದೇಶದಲ್ಲಿರುವ ಮುಸ್ಲಿಮರೂ ಭಾರತೀಯರೆ, ಅವರಿಗೂ ಇಲ್ಲಿ ಬದುಕುವ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿಕೊಂಡು ಬಂದಿದ್ದರು, ವಿಶ್ವದಲ್ಲಿ ಅತಿಹೆಚ್ಚು ಮುಸ್ಲಿಮರು ವಾಸಿಸುತ್ತಿರುವುದು ಭಾರತದಲ್ಲಿ ಅವರು ಇಲ್ಲಿಯೇ, ಹುಟ್ಟುತ್ತಾರೆ, ಬಾಳುತ್ತಾರೆ, ಮಣ್ಣಾಗುತ್ತಾರೆ, ಇವರು ಸಹ ಭಾರತೀಯರೆ ಎಂದರು.

ವಿಶ್ವದಲ್ಲೇ ವೈವಿಧ್ಯಮಯವಾಗಿರುವ ಭಾರತದಲ್ಲಿ ಎಲ್ಲಾ ಧರ್ಮದವರು ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ, ಹಲವು ವರ್ಷಗಳವರೆಗೂ ಮುಂದುವರೆದ ಜಾತ್ಯತೀತಕ್ಕೆ, ಈಗ ಕುತ್ತುಬಂದಿದ್ದು ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ದೇಶದಲ್ಲಿ ಅಶಾಂತಿ ಮತ್ತಷ್ಟು ಮೂಡುತ್ತದೆ, ಇದನ್ನು ಮನಗೊಂಡ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ಗಾಂಧಿ ರವರು ಎಲ್ಲಾ ಭಾರತೀಯರನ್ನು ಭಾವೈಕ್ಯತೆಯಾಗಿ ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮಿರದರೆಗೂ 5570 ಕಿ.ಮೀ. ಪಾದಯಾತ್ರೆಯನ್ನು ಮಾಡುತ್ತಿದ್ದಾರೆ, ಇದನ್ನು ವಿರೋಧ ಪಕ್ಷದವರು ಯಾವ ರೀತಿಯಲ್ಲಾದರೂ ಟೀಕಿಸಲಿ ಆದರೆ ದೇಶಕ್ಕೆ ಬೇಕಾಗಿರುವುದು ಜನರು ಶಾಂತಿ ನೆಮ್ಮದಿ ಬದುಕುವುದು ಎಂದರು.

ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ 5 ವರ್ಷಗಳಿಂದ ಸಾಕಷ್ಟು ಅಭಿವೃಧ್ದಿ ಕೆಲಸಗಳನ್ನು ಮಾಡಿದ್ದೇನೆ, ನಿಮ್ಮೆಲ್ಲರ ಆಶೀರ್ವಾದಿಂದ ಕೆಲವು ತಿಂಗಳುಗಳ ಕಾಲ ರಾಜ್ಯ ದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ನೂರಾರು ಕೋಟಿ ರೂಗಳ ಅನುದಾನ ನೀಡಿದ್ದೆನೆ, ಕೋವಿಡ್ ಸಮಯದಲ್ಲಿ ಜನರ ಮತ್ತು ನೊಂದವರ ಕಷ್ಟಕ್ಕೆ ಸ್ಪಂದಿಸಲಾಗಿದೆ, ಅಲ್ಪಸಂಖ್ಯಾತರು ಸೇರಿದಂತೆ ಕ್ಷೇತ್ರದ ಎಲ್ಲಾ ಧರ್ಮದ ಮತ್ತು ಜಾತಿಯ ಜನರೊಂದಿಗೆ ಭಾವೈಕ್ಯತೆಯಿಂದ ಕೆಲಸ ನಿರ್ವಹಿಸಿದ್ದೆನೆ, ಮುಂಬರುವ 2023 ರ ಚುನಾಣೆಯಲ್ಲೂ ಸಹ ಕ್ಷೇತ್ರದ ಜನರು ಮತ್ತೊಮ್ಮೆ ನನಗೆ ಆಶ್ರೀರ್ವಾದ ಮಾಡುತ್ತಾರೆ ಎಂದರು.

Advertisement

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಮ್ರಾನ್ ಹುಸೇನ್, ಇಕ್ಬಾಲ್‌ಅಹಮದ್, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಜುಬೇರ್, ತಾಲೂಕು ಅಲ್ಪಸಂಖ್ಯಾತ ಘಟಕೆ ಅಧ್ಯಕ್ಷ ಮುಬಾರಕ್‌ಪಾಷ, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಮುನ್ನಾಬಾಯ್, ಪ.ಪಂ.ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ನಂದೀಶ್, ನಾಗರಾಜು, ಮಾಜಿ ಪ.ಪಂ.ಸದಸ್ಯ ಸ್ಯೆಯದ್ ಸೈಪುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಂಖಡರುಗಳಾದ ಹುಸೇನ್ ಸಾಬ್, ಮಕ್ತಿಯಾರ್, ಜಮೀರ್ ಅಹಮದ್, ಫರೂಖ್, ಅಮಾನುಲ್ಲಾ, ಮುನ್ನಾಫ್, ರ‍್ಧಾರ್ ಹುಸೇನ್, ಸಾದಿಕ್‌ಪಾಷ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next