Advertisement

ಮಸ್ಕಿ: ಎಲಿಗಾರ ಬಡಾವಣೆ ಗಣಪತಿ ಅದ್ಧೂರಿ ವಿಸರ್ಜನೆ

12:53 PM Sep 18, 2018 | |

ಮಸ್ಕಿ: ಪಟ್ಟಣದ ಎಲಿಗಾರ ಬಡಾವಣೆಯ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಕಳೆದೆರೆಡೂ ವರ್ಷಗಳಿಂದ ದೊಡ್ಡ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಗಣೇಶ ವಿಸರ್ಜನೆಯ ಕಾರ್ಯಕ್ರಮಕ್ಕೆ ಗಚ್ಚಿನಮಠದ ವರರುದ್ರ ಮುನಿ ಶಿವಾಚಾರ್ಯ ಶ್ರೀಗಳು ಚಾಲನೆ ನೀಡಿದರು. ಕಸಾಪ ಘಟಕದ ಅಧ್ಯಕ್ಷ ಘನಮಠದಯ್ಯ ಸಾಲಿಮಠ ನಿರೂಪಿಸಿದರು.

Advertisement

ಗಜಾನನ ಮಂಡಳಿಯಿಂದ ಏರ್ಪಡಿಸಿದಸ ವಿವಿಧ ಬಗೆಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಎಲಿಗಾರ ಬಡಾವಣೆಯ ಗಜಾನನ ಯುವಕ ಮಂಡಳಿ ಸ್ಥಾಪಿಸಿದ್ದ ಗಣೇಶ ಮೂರ್ತಿಗೆ ಬಹುತೇಕ ಮಹಿಳೆಯರು ಸೇರಿದಂತೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಂಡುಬಂತು.

ಯುವಕರು ವಿಸರ್ಜನೆ ಕಾರ್ಯಕ್ರಮದ ಉದ್ದಕ್ಕೂ ವಿವಿಧ ಗಣೇಶನ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಗಣೇಶನ ಮೂರ್ತಿ ವಿಸರ್ಜಿಸಿದರು. ಶರಣಯ್ಯ ಪೆಂಟರ್‌, ಬಸವರಾಜ ದಿನ್ನಿ, ಅಮರೇಶ ಎಲಿಗಾರ, ಘನಮಠದಯ್ಯ ಸಾಲಿಮಠ, ಅಶೋಕ ಮುರಾರಿ, ಸಂತೋಷ ಮಾಟೂರ, ಸುಶಾಂತ ಮಾಳಗಿ, ಅಭಿಲಾಷ ಇಲ್ಲೂರ, ಬಸವರಾಜ ದಿನ್ನಿಮಠ, ವಿಜಯಕುಮಾರ, ಕಾರ್ತಿಕ್‌ ಬಿದನೂರಮಠ, ಮಂಜುನಾಥ ಮಾಟೂರ, ನಾಗರಾಜ ಸಾಲಿಮಠ, ಶಂಭು, ಸಂದೀಪ ದಿನ್ನಿ, ನವೀನ ಕುಮಾರ ದಿನ್ನಿ, ಚೇತನ ನಾಗಲಿಕರ ಇತರರು ಇದ್ದರು. 

ಪುರಸಭೆ ಸದಸ್ಯರಿಗೆ ಸನ್ಮಾನ ಲಿಂಗಸುಗೂರು: ದೇಶದಿಂದ ಬ್ರಿಟಿಷರನ್ನು ಹೋಡಿಸಲು ಲೋಕಮಾನ್ಯ ತಿಲಕರು,
ಹೋರಾಟಗಾರರು ಗಣೇಶ ಹಬ್ಬದ ಮುಖಾಂತರ ಜನರನ್ನು ಸಂಘಟಿಸಿ ಸಾಮಾಜಿಕ ಕ್ರಾಂತಿ ಮಾಡಿದರು
ಎಂದು ಪಿಎಸೈ ದಾದಾವಲಿ ಹೇಳಿದರು.

ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘ ಗಣೇಶ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಪುರಸಭೆ ನೂತನ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಕಾಪಾಡಲು ಅನೇಕ ತಂತ್ರಗಳನ್ನು ಅನುಸರಿಸಿದ್ದರು. ಅದರಲ್ಲೂ ಮುಖ್ಯವಾಗಿ ಗಣೇಶ ಹಬ್ಬ ಆಚರಿಸುವ ಸಲುವಾಗಿ ಎಲ್ಲ ಭಾರತೀಯರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರು. ಇದರಿಂದ ಬ್ರಿಟಿಷರ ವಿರುದ್ಧ ಹೋರಾಡಲು ಮತ್ತಷ್ಟು ಸಂಘಟನೆಗೆ ಕಾರಣವಾಯಿತು. ಸ್ವಾತಂತ್ರ್ಯಾ ಹೋರಾಟದಲ್ಲಿ ಗಣೇಶ ಹಬ್ಬ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.

Advertisement

ವರ್ತಕ ಬಸವರಾಜ ಐದನಾಳ, ಅಮರಣ್ಣ ಸಕ್ರಿ, ಸಂಘದ ಅಧ್ಯಕ್ಷ ಶಿವರಾಜ ಕೆಂಭಾವಿ, ವಾಮದೇವಯ್ಯ, ಸಿ.ಸಿ.ಕರಡಕಲ್‌, ಶಿವಪ್ರಕಾಶ, ಶಶಿಕಾಂತ ಗಸ್ತಿ, ಮನೋಹರರೆಡ್ಡಿ, ಪ್ರತಾಪರೆಡ್ಡಿ, ರಾಜಪ್ಪ ರೆಡ್ಡಿ, ವಿಜಯಕುಮಾರ ಸರದಾರ, ಮೌನೇಶ, ಅಶೋಕ ದಿಗ್ಗಾವಿ, ಪ್ರಭು ಗಸ್ತಿ ಇನ್ನಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next