Advertisement

ಕಲಾಮಂದಿರದಲ್ಲಿ ಪ್ರೇಕ್ಷಕರ ಕೊರತೆ ನಡುವೆಯೂ ಹರಿದ ಸಂಗೀತ ಸುಧೆ

04:28 PM Oct 13, 2021 | Team Udayavani |

ಮೈಸೂರು: ನಗರದ ಕಲಾ ಮಂದಿರ ವೇದಿಕೆಯಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಸುಧೆಗೆ ಪ್ರೇಕ್ಷಕರು ಮನಸೋತರು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರದಲ್ಲಿ ಆಯೋಜಿಸಿರುವ ಸಾಂಸ್ಕೃತಿ ಕಾರ್ಯಕ್ರಮದ ಕೊನೆ ದಿನ ವಿವಿಧ ಭಾಗದ ಕಲಾಸಂಸ್ಕೃತಿ ಪ್ರದರ್ಶನಗೊಂಡವು.

Advertisement

ಪ್ರೇಕ್ಷಕರ ಕೊರತೆಯ ನಡುವೆ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಮೊದಲಿಗೆ ಮೈಸೂರು ಸೌಮ್ಯ ಮತ್ತು ತಂಡದಿಂದ ಮಹಿಷ ಮರ್ಧಿನಿ ನೃತ್ಯರೂಪಕ ಪ್ರದರ್ಶಿಸುವ ಮೂಲಕ ನಾಡ ದೇವತೆ ಚಾಮುಂಡಿಶ್ವರಿ ಸ್ಮರಿಸುವ ಮೂಲಕ ಚಾಲನೆ ದೊರೆಯಿತು. ಬಳಿಕ ಶಿರಸಿ ನಿರ್ಮಲಾ ಹೆಗಡೆ ಯಕ್ಷಗೆಜ್ಜೆ ತಂಡದಿಂದ ಕಂಸವಧೆ ಯಕ್ಷಗಾನ ಕಥಾ ಪ್ರಸಂಗ ಬೆರಳೆಣಿಕೆಯಷ್ಟು ನೆರದಿದ್ದ ಪ್ರೇಕ್ಷಕರಲ್ಲಿ ಹುರುಪು ತುಂಬಿತು.

ಗಜಾನನ ಹೆಗಡೆ ಭಾಗವತಿಕೆಯಲ್ಲಿ ಕಂಸವಧೆ ಯಶಸ್ವಿಯಾಗಿ ನಡೆಯಿತು. ಮಹಿಳೆ ಕಲಾವಿದರು ಸಹ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಂಡು ಅಚ್ಚುಕಟ್ಟು ನಿರ್ವಹಿಸಿದರು. ಬೆಂಗಳೂರು ನಿಶ್ಚಿತ ಪ್ರಸಾದ್‌ ಮತ್ತು ತಂಡ ಹಾಡಿದ ಜಗದೋದ್ಧಾರನ ಆಡಿಸಿದಳೇ ಶೋಧಾ.. ದೇವರ ನಾಮ ಪ್ರೇಕ್ಷಕರ ಮನಸೊರೆಗೊಂಡಿತು. ನಂಜನಗೂಡಿನ ಹೊಸಹಳ್ಳಿ ಗಂಗಾಧರ್‌ ಮತ್ತು ತಂಡದಿಂದ ಸಂತ ಶಿಶುನಾಳ ಷರೀಫ‌ರ ತರವಲ್ಲ ತೆಗಿ ನಿನ್ನ ತಂಬೂರಿ ಸ್ವರ, ತಂಬೂರಿ ಮೀಟಿದವ ಹಾಡುಗಳ ಹೇಳುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಳೆ ತಂದರು.

ಇದನ್ನೂ ಓದಿ;– ಸಾಕಷ್ಟು ಅಧಿಕಾರಿಗಳಲ್ಲಿ ಆರ್‌ಎಸ್‌ಎಸ್ ಮೈಂಡಸೆಟ್ ಇದೆ : ಶೆಟ್ಟರ್

ಮೈಸೂರು ಜಿಲ್ಲೆಯ ಸೊಬಾನೆ ಕಲಾವಿದರು, ಮದುವೆ, ಮೈನೆರೆವ ಶಾಸ್ತ್ರ ಸೇರಿದಂತೆ ಹಲವು ಜನಪದ ಹಾಡುಗಳನ್ನು ಹಾಡುವ ಮೂಲಕ ಬಾಲ್ಯವನ್ನು ನೆನಪಿಸಿದರು. ಮೈಸೂರು ಗಾನಗಂಧರ್ವ ಕಲಾ ಬಳಗ ಟ್ರಸ್ಟ್‌ನಿಂದ ಸುಗಮ ಸಂಗೀತ, ಹುಬ್ಬಳಿ ಸುಜಯ್‌ ಶಾನ್‌ ಭಾಗ್‌ ಮತ್ತು ತಂಡದಿಂದ ನೃತ್ಯರೂಪಕ ಪ್ರದರ್ಶಿಸಿದರೆ, ಮೈಸೂರು ನಗರ ಮತ್ತು ಜಿÇÉಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಂಘದಿಂದ ವೈವಿಧ್ಯಮಯಗೀತೆ ಹಾಡಿದರು.

Advertisement

ಜಿಲ್ಲಾ ಜಾನಪದ ನೃತ್ಯ ಕಲಾವಿದರ ತಂಡ ಜಾನಪದ ನೃತ್ಯ, ಬೆಂಗಳೂರಿನ ಎಂ.ಎಸ್‌.ನಾಟ್ಯ ಕ್ಷೇತ್ರದಿಂದ ನೃತ್ಯರೂಪಕ, ಬೆಂಗಳೂರಿನ ಜೆ. ಅಕ್ಷಯ್‌ ಮತ್ತು ತಂಡದಿಂದ ಮ್ಯಾಂಡೋಲಿನ್‌ ವಾದನ ಮನಮೋಹಕವಾಗಿತ್ತು. ಬಳಿಕ ಬೆಂಗಳೂರಿನ ಅಭಿನಯ ರಂಗ ಕೇಂದ್ರ (ಕೆ.ಪಿ. ಅಶ್ವತ್ಥನಾರಾಯಣ) ಅವರಿಂದ ಮಾಚಿದೇವ ನಾಟಕ ಪ್ರದರ್ಶನಗೊಂಡಿತು. ಕಲಾ ಮಂದಿರದಲ್ಲಿ 2ನೇ ದಿನವೂ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು.

ಕಲಾವಿದರಿಗೆ ಒಂದೆಡೆ ಖಾಲಿ ಕುರ್ಚಿಗಳು ಎದುರಾದರೆ, ಕಾರ್ಯಕ್ರಮಕ್ಕೆ ಕಡಿಮೆ ಸಮಯ ನಿಗದಿಪಡಿಸಿದ್ದು, ಮತ್ತಷ್ಟು ಬೇಸರ ತರಿಸಿತು. ಒಂದು ಕಲಾಕ್ರಮಕ್ಕೆ 45 ನಿಮಿಷ ನಿಗದಿ ಪಡಿಸಿದ್ದರೂ, ಕಾರ್ಯಕ್ರಮ ನಿರ್ವಹಕರು ಕಡಿಮೆ ಸಮಯ ನೀಡುತ್ತಿದ್ದಕ್ಕೆ ಕೆಲ ಕಲಾವಿದರು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next