Advertisement
ಕವನ, ವಾಚನ, ಕಲಾಸಕ್ತರಲ್ಲಿ ಅಚ್ಚರಿಯ ಮೂಡಿಸಿದ್ದು, ಕವಿ ಕಾವ್ಯ ಕುಂಚ ಗಾಯನ. ಅವಕಾಶ ಮಾಡಿಕೊಟ್ಟಲ್ಲಿಇತರೆ ಸಾಮಾನ್ಯರಂತೆ ಸಾಧನೆ ಮಾಡಬಲ್ಲರು ಎಂಬುದಕ್ಕೆ ವೇದಿಕೆಯಾಗಿದ್ದು ವಿಕಲಚೇತನರ ಉತ್ಸವ. ಐತಿಹಾಸಿಕ
ಹಂಪಿಯ ಗತವೈಭವವ ಮೆಲುಕು ಹಾಕುವ ಜೊತೆಗೆ ಈಗಿನ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದ ಹಂಪಿ
ಉತ್ಸವ-2017ರ ವಿವಿಧ ಸಾಂಸ್ಕೃತಿಕ ಕಾಯಕ್ರಮಗಳ ಒಟ್ಟಾರೆ ಚಿತ್ರಣ ಇದು. ಕನ್ನಡನಾಡಿನ ಪ್ರಮುಖ ಅರಸರಲ್ಲಿ ಒಬ್ಬರಾದ ಕೃಷ್ಣದೇವರಾಯ ಅಪ್ರತಿಮ ಶೂರ ಮಾತ್ರವಲ್ಲ ಕಲೆ, ಸಾಂಸ್ಕೃತಿಕ ಮಹಾನ್ ಪೋಷಕರು ಎಂಬುದು ಜನಜನಿತ.
ಕಾಯಕ್ರಮಕ್ಕೆ ಆತಿ ಹೆಚ್ಚಿನ ಪ್ರಾಧ್ಯಾನತೆ ನೀಡಿತ್ತು ಎಂಬುದಕ್ಕೆ 14 ವೇದಿಕೆಯಲ್ಲಿ ನಡೆದ ಬಹುತೇಕವು ಸಾಂಸ್ಕೃತಿಕ ಕಾಯಕ್ರಮ. ನೆಲದ ಸಾಂಸ್ಕೃತಿಕತೆಯ ಮೂಸೆಯಲ್ಲಿ ಮೂಡಿ ಬಂದು ಈ ಕ್ಷಣಕ್ಕೂ ಎಂತವರಲ್ಲೂ ಸಂಗೀತದ ಅಭಿರುಚಿಯ ಜಾಗೃತಿ ಮೂಡಿಸುವ ಜಾನಪದ ಹಾಡುಗಳಿಂದ ಹಿಡಿದು ಆಬ್ಬರದ ಸಂಗೀತದ ಮಧ್ಯೆದಲ್ಲಿ ಸಾಹಿತ್ಯವೇ ಕಾಣ ಸಿಗದ ಚಲನಚಿತ್ರಗಳ ಹಾಡುಗಳವರೆಗೆ ಸಾಂಸ್ಕೃತಿಕ ಕಾಯಕ್ರಮ ವೇದಿಕೆಯಾಗಿತ್ತು. ಕನ್ನಡ ಮತ್ತು ಹಿಂದಿಯಲ್ಲಿ ತನ್ನದೇ ಕಲಾಭಿಮಾನಿಗಳ ಹೊಂದಿರುವ ಕುನಾಲ… ಗಾಂಜಾವಾಲ, ಈಗಿನ ಯುವ
ಜನಾಂಗದ ಐಕಾನ್ ಟಿಪ್ಪು, ಹುಡುಗ- ಹುಡುಗಿಯರ ಹೃದಯದಲ್ಲಿ ಸಂಗೀತದ ಕಿಚ್ಚು- ಹುಚ್ಚೆಬ್ಬಿಸುವ ಗುರುಕಿರಣ್, ಸುಮಧುರ ಗೀತೆಗಳ ಮೂಲಕ ಮುದ ನೀಡುವ ಮನೋಮೂತಿ ಸಂಗೀತ ಸುಧೆ ಧಾರೆ ಹರಿಸಿದರು. ಹಂಪಿ
ಉತ್ಸವಕ್ಕೆ ಬಂದವರ ಉತ್ಸಾಹವನೂ ಮೂಡಿಗೊಳಿಸಿದರು.
Related Articles
ವಿದೇಶದಲ್ಲೂ ಮನೆ ಮಾತಾಗಿರುವ ಪ್ರತಿಭಾ ಪ್ರಹ್ಲಾದ್, ವೈಜಯಂತಿ ಕಾಶಿ ಇತರರರು ನೃತ್ಯದ ಮೂಲಕ ಲಕ್ಷಾಂತರ
ಜನರ ಮನ ಗೆದ್ದರು. ಸರೋದ್ ವಾದನದಲ್ಲಿ ತಮ್ಮದೇ ಖ್ಯಾತಿ ಹೊಂದಿರುವ ಮೈಸೂರಿನ ಪಂಡಿತ್ ರಾಜೀವ ತಾರಾನಾಥ್ ಕಚೇರಿ, ಸೂಫಿ ಹಾಡುಗಳ ಖ್ಯಾತಿಯ ಮುಂಬಯಿನ ಮೀರ್ ಮುಕ್ತಿಯಾರ್ ಆಲಿ, ಸುಗಮ ಸಂಗೀತದ ದಿಗ್ಗಜರಾದ ರತ್ನಮಾಲಾ ಪ್ರಕಾಶ್, ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂತಿ, ಸುನೀತಾ ಇತರರು ಸುಗಮ ಸಂಗೀತ ಸಂಜೆ ಸಂಗೀತದ ರಸದೌತಣ ಉಣಬಡಿಸಿತು. ಜಿ. ಚಂದ್ರಕಾಂತ್, ಕಲಾವತಿಯವರು ನಡೆಸಿಕೊಟ್ಟ ತ್ರಿಭಾಷಾ ವಚನ ಗಾಯನ ಜನರ ಮಂತ್ರಮುಗ್ಧನ್ನಾಗಿಸಿತು. ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಕನ್ನಡದ ವಚನಗಳು ಪ್ರಸ್ತುತಗೊಂಡವು.
Advertisement
ರಂಗಗೀತೆಯ ನಾಡಿನ ಮನೆ ಮಾತಾಗಿರುವ ಸುಭದ್ರಮ್ಮ ಮನ್ಸೂರ್ ಪ್ರಸ್ತುತಪಡಿಸಿದ ರಂಗಗೀತೆ ರಂಗಾಸಕ್ತರಮುದಗೊಳಿಸಿದವು. ತೈವಾನ್-ಅಮೇರಿಕಾದ ಟರ ಕ್ಯಾತ್ರಿನೆ ಪಾಂಡಿಯಾ ಮತ್ತು ಬಿಲ್ಲಿಚಾಂಗ್ ತಂಡದ ಫ್ಯೂಜನ್ ಡ್ಯಾನ್ಸ್ ಯುವಕರ ಹುಚ್ಚೆಬ್ಬಿಸಿತು.
ರಾ. ರವಿಬಾಬು ಕಾರ್ತಿಕ ಚಳಿಯಲ್ಲಿ ಶಾನ್ ಗಾಯನದ ವಿದ್ಯುತ್ ಸಂಚಾರ
ಹಂಪಿ: ದುನಿಯಾ ಮೆ ಲೋಗೋನ್ ನೆ ದಿಲ್ ಅಪ್ನೆ ಫಿರ್ ತಾಮಿಯೇ, ಆಯಾ ಹೂನ್ ಲೇಕರ್ ಮೈ ಫಿರ್ ಕಿತ್ನೆ ಹಂಗಾಮೆ! ಡಾನ್ ಚಲನಚಿತ್ರದ ಪ್ರಖ್ಯಾತ ಹಾಡನ್ನು ತಮ್ಮ ಸಿರಿಕಂಠದಲ್ಲಿ ಪ್ರಸ್ತುತಪಡಿಸುತ್ತಾ ಹಾವಭಾವಗಳೊಂದಿಗೆ ನೆರೆದಿದ್ದ ಸಂಗೀತ ಪ್ರೇಮಿಗಳಲ್ಲಿ ಖ್ಯಾತ ಬಾಲಿವುಡ್ ಹಾಗೂ ಬಹುಭಾಷಾ ಗಾಯಕ ಶಾನ್ ಕಾರ್ತಿಕದ ಚಳಿಯಲ್ಲಿ ಬೆಚ್ಚನೆಯ ಭಾವ ಮೂಡಿಸಿದರು. ಹಂಪಿ ಉತ್ಸವ-2017ರ ಅವತರಣಿಕೆಯಲ್ಲಿ ಗಾಯತ್ರಿ ಪೀಠದ ಭವ್ಯ ವೇದಿಕೆಯಲ್ಲಿ ವೈವಿಧ್ಯಮಯ ರಾಗ-ಭಾವಗಳ ಮಾಲಿಕ ಶಾನ್ ಶನಿವಾರ ನಡುರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಸೋಲೋ, ರೋಮ್ಯಾಂಟಿಕ್ ಹಾಗೂ ಯುಗಳ ಗೀತೆಗಳನ್ನು ಪ್ರಸ್ತುತಪಡಿಸಿದರು. ನೀನು ನಿಂತರೆ, ಕುಡಿ ನೋಟವೇ ಮುಂತಾದ ಕನ್ನಡ ಹಾಡುಗಳನ್ನೂ ಹಾಡಿದ ಶಾನ್ ಹೆಚ್ಚಾಗಿ ಹಿಂದಿ ಚಲನಚಿತ್ರ ಗೀತೆಗಳನ್ನೇ ಹಾಡಿದರು. ಜೊತೆಗೆ ತಮ್ಮ ವಿವಿಧ ರಾಗ-ಭಾವಗಳಿದ್ದ ಹಾಡುಗಳ ತುಣುಕುಗಳನ್ನು ಪೋಣಿಸಿದ ಗೀತ ಮಾಲೆಯನ್ನೂ ಚಳಿಯಲ್ಲಿ ಬೆವರುತ್ತಾ ಹಾಡಿ, ಕುಣಿದು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ರಂಜಿಸಿದರು. ಆಬ್ ಸೆ ತೆರೆ ನೈನಾ, ಬಚ್‌ನಾ ಹೈ ಹಸೀನೋ, ಬಿನ್ ಕುಚ್ ಕಹೇ-ಬಿನ್ ಕುಚ್ ಸುನೇ ಸೇರಿದಂತೆ ಹತ್ತಾರು ಹಿಂದಿ ಚಲನಚಿತ್ರಗಳ ಹಾಡುಗಳನ್ನು ಸಹ ಗಾಯಕಿ ಹಿಮಾಲಿ ಹಾಗೂ ವೃತ್ತಿಪರ ಹಿನ್ನೆಲೆ ಸಂಗೀತಗಾರ ರೊಂದಿಗೆ ಹಾಡಿದ ಶಾನ್ ನೆರೆದಿದ್ದ ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ತಮ್ಮ ಪವರ್‌ಫುಲ್ ಗಾನ ಲಹರಿಯಿಂದ ರಂಜಿಸಿದರು.