Advertisement
ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಎಲ್ಲ ಸಂಗೀತ ಪ್ರಕಾರಗಳಿಗೂ ಆದ್ಯತೆ ನೀಡಲಾಗುತ್ತಿದೆ. ಅರಮನೆ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ವೈಭವ ನಡೆಯಲಿದೆ. ನಿತ್ಯ ರಾತ್ರಿ 9 ರಿಂದ 10 ಗಂಟೆಯ ಒಂದು ಕಾರ್ಯಕ್ರಮವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ಸೆ.23ರಂದು ಸಂಜೆ 6ರಿಂದ 7ರವರೆಗೆ ಬೆಂಗಳೂರಿನ ಭರತನಾಟ್ಯ ಕಲಾವಿದೆ ಯಾಮಿನಿ ಮುತ್ತಣ್ಣ ಅವರಿಂದ ಸಿದ್ಧಿ ನೃತ್ಯ ಯೋಗ ಸಂಗಮ. 7ರಿಂದ 8 ಮೈಸೂರಿನ ಗಾನಭಾರತಿ ಸಂಗೀತ ನೃತ್ಯಶಾಲೆಯವರಿಂದ ಬುದ್ಧಂ ಶರಣಂ ನೃತ್ಯರೂಪಕ. ರಾತ್ರಿ 8.30ರಿಂದ 10ರ ವರೆಗೆ ನವದೆಹಲಿಯ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಶುಭಾ ಮುದ್ಗಲ್‌ರಿಂದ ಹಿಂದೂಸ್ತಾನಿ ಗಾಯನ.
ಸೆ.24ರಂದು ಸಂಜೆ 6ರಿಂದ 7ರ ವರೆಗೆ ಮುಂಬೈನ ಖ್ಯಾತ ಒಡಿಸ್ಸಿ ನೃತ್ಯಗಾರ ರುಮಿಂದರ್ ಖುರಾನರಿಂದ ಒಡಿಸ್ಸಿ ನೃತ್ಯ. ರಾತ್ರಿ 7ರಿಂದ 8ರವರೆಗೆ ಮೈಸೂರಿನ ಖ್ಯಾತ ಸರೋದ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಸರೋದ್ ವಾದನ. ರಾತ್ರಿ 8 ರಿಂದ 10 ಅಮೃತಸರದ ಅಂತಾರಾಷ್ಟ್ರೀಯ ಖ್ಯಾತಿಯ ಸೂಫಿ ಗಾಯಕ ಲಕ್ವಿಂದರ್ ವಡಾಲಿ ಅವರಿಂದ ಸೂಫಿ ಸಂಗೀತ.
ಸೆ.25ರಂದು ಸಂಜೆ 6 ರಿಂದ 8 ಪೊಲೀಸ್ ಬ್ಯಾಂಡ್. ರಾತ್ರಿ 8 ರಿಂದ 8.30ರವರೆಗೆ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದವರಿಂದ ಮೋಹಿನಿ ಅಟ್ಟಂ ಮತ್ತು ಕುಚುಪುಡಿ. ರಾತ್ರಿ 8.30ರಿಂದ 10ರ ವರೆಗೆ ಬೆಂಗಳೂರಿನ ಹಿಂದೂಸ್ತಾನಿ ವಾದ್ಯಗಾರ ಪಂಡಿತ್ ಪ್ರಕಾಶ್ ಸೊಂಟಕ್ಕಿ ಅವರಿಂದ ಪ್ಯೂಜನ್ ಸಂಗೀತ.
ಸೆ.26ರಂದು ಸಂಜೆ 6 ರಿಂದ 7 ಬೆಂಗಳೂರಿನ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆ ಶಾಂತಲಾರಿಂದ ಪ್ರಕೃತಿ ನೃತ್ಯ ರೂಪಕ, ರಾತ್ರಿ 7ರಿಂದ 8 ಚೆನ್ನೈನ ವಿದ್ವಾನ್ ಟಿ.ಎಂ.ಕೃಷ್ಣರಿಂದ ಕರ್ನಾಟಕ ಸಂಗೀತ ಗಾಯನ.
ಸೆ.26ರಂದು ರಾತ್ರಿ 8 ರಿಂದ 10ರವರೆಗೆ ಬೆಂಗಳೂರಿನ ಧ್ವನಿ ಸುಗಮ ಸಂಗೀತ ಸಂಸ್ಥೆ ವತಿಯಿಂದ ಕನ್ನಡ ಡಿಂಡಿಮ ಸುಗಮ ಸಂಗೀತ ಕಾರ್ಯಕ್ರಮ.ಸೆ.27ರಂದು ಸಂಜೆ 6 ರಿಂದ 7 ಬೆಂಗಳೂರಿನ ಪಂ. ಆನೂರು ಅನಂತಕೃಷ್ಣರಿಂದ ತಾಳವಾದ್ಯ ಕಚೇರಿ, 7ರಿಂದ 8ರ ವರೆಗೆ ಡಾ.ವಸುಂಧರಾ ದೊರೆಸ್ವಾಮಿರಿಂದ ವಿದ್ಯುನ್ಮದನಿಕಾ ನೃತ್ಯ ರೂಪಕ, ರಾತ್ರಿ 8 ರಿಂದ 10ರವರೆಗೆ ಮುಂಬೈನ ಉಸ್ತಾದ್ ತಲತ್ ಅಜೀಜ್‌ರಿಂದ ಘಜಲ್ ಸಂಗೀತ. ಸೆ.28ರಂದು ಸಂಜೆ 6 ರಿಂದ 7ಪುಣೆಯ ವಿದ್ವಾನ್ ನಂದಿನಿ ರಾವ್ ಗುಜಾರ್‌ರಿಂದ ಕರ್ನಾಟಕ ಸಂಗೀತ ಗಾಯನ, ರಾತ್ರಿ 7ರಿಂದ 8 ಬೆಂಗಳೂರಿನ ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ಜಯತೀರ್ಥ ಮೇವುಂಡಿ ಹಾಗೂ ಖ್ಯಾತ ಪಿಟೀಲು ವಾದಕ ಪಂ.ಪ್ರವೀಣ್ ಗೋಡಿRಂಡಿ ಅವರಿಂದ ಹಿಂದೂಸ್ತಾನಿ ಗಾಯನ ಮತ್ತು ಕೊಳಲು ವಾದನ ಜುಗಲ್‌ಬಂದಿ. ರಾತ್ರಿ 8ರಿಂದ 9 ಬೆಂಗಳೂರಿನ ವಿದ್ವಾನ್ ಮಧು ನಟರಾಜ್‌ರಿಂದ ಕಥಕ್ ನೃತ್ಯ, ರಾತ್ರಿ 9ರಿಂದ 10ರವರೆಗೆ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಮಳವಳ್ಳಿ ಮಹದೇವಸ್ವಾಮಿರಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ. 9 ಗಂಟೆ ನಂತರ ಅರಮನೆ ದೀಪಾಲಂಕಾರ ಇರುತ್ತಿರಲಿಲ್ಲ. ಈ ಬಾರಿ ರಾತ್ರಿ 10 ಗಂಟೆವರೆಗೂ ಅರಮನೆ ದೀಪಾಲಂಕಾರ ಇರಲಿದೆ. ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಳೆದ ಬಾರಿ 50 ಲಕ್ಷ ರೂ. ಪ್ರಾಯೋಜಕತ್ವ ಸಿಕ್ಕಿತ್ತು. ಈ ಬಾರಿ 1 ಕೋಟಿ ರೂ. ಬರುವ ನಿರೀಕ್ಷೆ ಇದೆ.
-ರಂದೀಪ್ ಡಿ, ದಸರಾ ವಿಶೇಷಾಧಿಕಾರಿ