Advertisement
ನಗರದ ಸೃಜನಾ ರಂಗಮಂದಿರದಲ್ಲಿ ಭಾರತರತ್ನ ಪಂ|ಭೀಮಸೇನ ಜೋಶಿ ಜನ್ಮಶತಮಾನೋತ್ಸವ ಪ್ರಯುಕ್ತ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಹುಬ್ಬಳ್ಳಿ ಕ್ಷಮತಾ ಸಂಸ್ಥೆಗಳು ಹಮ್ಮಿಕೊಂಡಿರುವ 11 ದಿನಗಳ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಇದೀಗ ಸಂಗೀತ ಥೆರಪಿ ಸಹ ಶುರುವಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕು ಎಂದರು.
Related Articles
Advertisement
ಇದೇ ಸಂದರ್ಭದಲ್ಲಿ ಭೀಮಫಲಾಸ್ ಸಂಗೀತ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನವದೆಹಲಿಯ ಪಂ|ರಾಜೇಂದ್ರ ಪ್ರಸನ್ನ ಬಾನ್ಸುರಿ ವಾದನ ಪ್ರಸ್ತುತಪಡಿಸಿದರೆ, ಮಧ್ಯಾಹ್ನ ಪಂ| ಜಯತೀರ್ಥ ಮೇವುಂಡಿ ಗಾಯನ, ಪುಣೆಯ ರಾಮದಾಸ ಫಳಸುಲೆ ತಬಲಾ ಸೋಲೊ, ಸಂಜೆ ಪುಣೆಯ ನಿಷಾದ ಬಾಕ್ರೆ, ವಿದುಷಿ ಅನುರಾಧಾ ಕುಬೇರ ಗಾಯನ ಪ್ರಸ್ತುತಪಡಿಸಿದರು. ಎಲ್‌ಐಸಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಂ.ಮನೋಹರ, ಡಾ|ರಮಾಕಾಂತ ಜೋಶಿ, ಸಮೀರ ಜೋಶಿ, ಅನಂತ ಹರಿಹರ ಇನ್ನಿತರರಿದ್ದರು. ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ ಸ್ವಾಗತಿಸಿದರು.
ನಮ್ಮದರ ಮೇಲೆ ನಮಗೆ ವಿಶ್ವಾಸ ಕಡಿಮೆ. ಭಗವದ್ಗೀತೆ ಇಂಗ್ಲಿಷ್‌ನಲ್ಲಿ ಬರೋವರೆಗೆ ಬಹಳ ಜನ ನಂಬಿರಲಿಲ್ಲ. ಈಗ ಭಗವದ್ಗೀತೆ ಬಗ್ಗೆ ಜಾಗೃತಿ ಆಗುತ್ತಿರುವುದು ಒಳ್ಳೆಯದು. ಅದರಲ್ಲೂ ಪಠ್ಯದಲ್ಲಿ ಭಗವದ್ಗೀತೆ ತರುವ ವಿಚಾರ ನಡೆದಿದ್ದು, ಈ ಬಗ್ಗೆ ಜಾತ್ಯತೀತರನ್ನು ಬಿಟ್ಟು ಉಳಿದವರೆಲ್ಲರೂ ಒಪ್ಪುತ್ತಿದ್ದಾರೆ. ಜಾತ್ಯತೀತತೆ ಅನ್ನೋದು ಒಂದು ವಿಚಿತ್ರ. ಅದೊಂದು ಧರ್ಮಾತೀತತೆ ಎಂದು ತಿಳಿದಿದ್ದಾರೆ. ಧರ್ಮದ ಆಧಾರದ ಮೇಲೆ ಜೀವನ ನಡೆಯಬೇಕು. ರಾಜಕೀಯದಲ್ಲಿಯೂ ಧರ್ಮ ಬೇಕು. ಧರ್ಮ ರಹಿತ ಜೀವನ, ರಾಜಕೀಯ ಶೂನ್ಯವಾಗುತ್ತದೆ. ಧರ್ಮ ಇಲ್ಲದೇ ಹೋದಲ್ಲಿ ಎರಡೂ ಶೂನ್ಯ ಆಗಿ ಬಿಡುತ್ತವೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ