Advertisement
ಕೆಲ ದಿನಗಳ ಹಿಂದೆ ಅರ್ಜುನ್ ಜನ್ಯ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಈ ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯನ್ನು ಕೆಲವು ಯುಟ್ಯೂಬ್ ಹಾಗೂ ವೆಬ್ ಸೈಟ್‍ಗಳು ವಿಡಂಭನೆ ಮಾಡಿದ್ದವು. ಅರ್ಜುನ್ ಜನ್ಯ ಹಾಗೂ ಅವರ ಕುಟುಂಬದ ಬಗ್ಗೆ ತಪ್ಪು ಮಾಹಿತಿ ಬಿತ್ತರಿಸಿದ್ದವು. ಇವುಗಳನ್ನು ಗಮನಿಸಿರುವ ಜನ್ಯ, ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶುಕ್ರವಾರ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
Related Articles
Advertisement
ಜನರಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಈ ಕೆಲವು ಯೂಟ್ಯೂಬ್ ಚಾನಲ್‌ಗಳು ನೀಡಿದ ಮಾಹಿತಿಗಳು ಅಪ್ಪಟ ಸುಳ್ಳು. ನಾನು ಆರೋಗ್ಯವಾಗಿದ್ದೇನೆ. ನನಗೆ ಕೋವಿಡ್ ಬಂದು ಗುಣಮುಖನಾಗಿ ವೈದ್ಯರ ಸಲಹೆಯಂತೆ ಈಗ ಮನೆಯಲ್ಲಿಯೇ ಹತ್ತು ದಿನದ ಐಸೋಲೇಶನ್‌ನಲ್ಲಿದ್ದೇನೆ. ಇದರಲ್ಲಿ ಈಗಾಗಲೇ ಆರು ದಿನಗಳು ಪೂರ್ಣಗೊಂಡಿವೆ, ಇನ್ನು ಉಳಿದ ನಾಲ್ಕೈದು ದಿನಗಳು ಕಳೆದ ನಂತರ ನನ್ನ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತೇನೆ. ಮತ್ತೊಮ್ಮೆ ಈ ರೀತಿಯ ಹೀನ ಕಾರ್ಯಗಳನ್ನು ಮಾಡುತ್ತಿರುವ ಯೂಟ್ಯೂಬ್ ಚಾನಲ್‌ಗಳನ್ನು ವಿನಂತಿಸಿಕೊಳ್ಳುತ್ತಿದ್ದೇನೆ.
ಇನ್ನು ಮುಂದಾದರೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ. ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲ ಸಾಕ್ಷಿಗಳನ್ನು ಸೈಬರ್ ಪೊಲೀಸ್‌ಗೆ ನೀಡಿದ್ದೇನೆ. ದಯವಿಟ್ಟು ನೀವು ಮಾಡಿದ ವಿಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.