Advertisement
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.12ರಂದು ಬೆಳಗ್ಗೆ 9:00 ಗಂಟೆಗೆ ದುರದುಂಡೀಶ್ವರ ಮಠದನೀಲಕಂಠ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ನಿಜಗುಣ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಅಂದು ಸಂಜೆ 6:30 ಗಂಟೆಗೆ ಜಿÇÉಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಹುಬ್ಬಳ್ಳಿ ಮೂರುಸಾವಿರಮಠದ ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗೆ ಗುರುವಂದನೆ ನಡೆಯಲಿದೆ. ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಡಿಸಿ ನಿತೀಶ ಪಾಟೀಲ, ವೀರೇಶ ಅಂಚಟಗೇರಿ ಅವರನ್ನು ಸನ್ಮಾನಿಸಲಾಗುವುದು ಎಂದರು.
Related Articles
Advertisement
ಇದನ್ನೂ ಓದಿ :ವ್ಯಾಲಂಟೈನ್ಸ್ ಡೇ ಗೆ ಹುಡುಗಿಯರ ಕಾಟ ತಪ್ಪಿಸಲು 5 ದಿನ ರಜೆ ಕೊಡಿ ಸರ್.. ರಜಾರ್ಜಿ ವೈರಲ್
ಫೆ.16ರಂದು ಬೆಳಗ್ಗೆ 4:00 ಗಂಟೆಗೆ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಲಿಂಗದೀಕ್ಷೆ ನಡೆಯಲಿದೆ. ಅಂದು ಸಂಜೆ 4:00 ಗಂಟೆಗೆ ಚಿತ್ರದುರ್ಗ ಡಾ|ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ನೆರವೇರಲಿದ್ದು, ನಾಡಿನ ವಿವಿಧ ಮಠಾಧೀಶರು ಪಾಳ್ಗೊಳ್ಳುವರು. ಈ ಪುಣ್ಯ ಕಾರ್ಯದಲ್ಲಿ ಸಕಲ ಸದ್ಭಕ್ತರು ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕೆಂದು ಕೋರಿದರು.
ನಾಗರಾಜ ಪಟ್ಟಣಶೆಟ್ಟಿ. ಡಿ.ಬಿ. ಲಕಮನಹಳ್ಳಿ, ಬಸಯ್ಯ ಗಣಾಚಾರಿ. ಸಿ.ಎಸ್. ಪಾಟೀಲ, ವಿರೂಪಾಕ್ಷಪ್ಪ ಕಟಗಿ, ಷಣ್ಮುಖಪ್ಪ ಅಗಡಿ, ಎಸ್.ಎಸ್. ಲಕ್ಷ್ಮೇಶ್ವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.