Advertisement
ಶಿವಯೋಗಿ ಮಂದಿರದಲ್ಲಿ ಭಾನುವಾರ ಜಯದೇವ ಮಹಾಸ್ವಾಮೀಜಿಗಳ 64ನೇ ಸ್ಮರಣೋತ್ಸವ ಜಯದೇವಶ್ರೀ, ಶೂನ್ಯಪೀಠ ಪ್ರಶಸ್ತಿ ಪ್ರದಾನ ಮತ್ತು ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯದೇವ ಸ್ವಾಮೀಜಿವರು ಶರಣ ಮತ್ತು ಮುರುಘಾ ಸಂಸ್ಕೃತಿಯನ್ನ ಒಟ್ಟಿಗೆ ತೆಗೆದುಕೊಂಡ ಹೋದವರು. ಅವರೊಬ್ಬ ಅನರ್ಘ್ಯ ರತ್ನ ಎಂದು ಬಣ್ಣಿಸಿದರು.
Related Articles
Advertisement
ಮಠವನ್ನು ಸಮಾಜದ ಬಳಿಗೆ ತೆಗೆದುಕೊಂಡು ಹೋದಂತಹ ಮಹಾನ್ ದಾರ್ಶನಿಕರು. ಅಂತಹ ವಿಶಿಷ್ಟ ತೋರಿದಂತಹ ಜಯದೇವ ಸ್ವಾಮೀಜಿಯವರು ಅಧ್ಯಾತ್ಮಿಕ ಲೋಕದಲ್ಲಿದ್ದುಕೊಂಡು ವಿದ್ಯಾಕ್ಷೇತ್ರದತ್ತ ಗಮನ ಹರಿಸಿದ ಫಲವಾಗಿ ರಾಜ್ಯಾದ್ಯಂತ ಉಚಿತ ಪ್ರಸಾದ ನಿಲಯಗಳು ಸ್ಥಾಪನೆಗೆ ಕಾರಣವಾಯಿತು ಎಂದು ತಿಳಿಸಿದರು.
ಬಸವಾದಿ ಶರಣರ ಬದುಕಿನಲ್ಲಿ ನಿಂದನೆ ಸಾಮಾನ್ಯ ಎನ್ನುವಂತಿತ್ತು. ಮಹಾನ್ ದಾರ್ಶನಿಕ ಬಸವಣ್ಣನವರು ನಿಂದನೆಯ ನಡುವೆಯೇ ಮೇಲೆದ್ದು ಬಂದವರು. ಅದೇ ರೀತಿ ಜಯದೇವ ಸ್ವಾಮೀಜಿಯವರು ನಿಂದನೆಯೇ ಮಧ್ಯೆಯೇ ಮೇಲೆದ್ದು ಬಂದವರು ಎಂದು ತಿಳಿಸಿದರು.
ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿ, ನಾಡಿನ ಎಲ್ಲ ಮಠಗಳು ವಚನ ಸಾಹಿತ್ಯದ ಸಂಶೋಧನೆಗೆ ಹೆಚ್ಚಿನ ಗಮನ ನೀಡಬೇಕು. ಪ್ರತಿಯೊಬ್ಬರು ವಚನ ಕೇಳುತ್ತಾರೆ. ಆದರೆ, ಅದರಲ್ಲಿನ ತತ್ವಗಳ ಪಾಲನೆಗೆ ಮುಂದಾಗದೆ ಇರುವುದು, ಅದರ ಅರ್ಥದಂತೆ ಜೀವನ ಸಾಗಿಸದೇ ಇರುವುದು ಕಂಡು ಬರುತ್ತಿದೆ ಎಂದು ತಿಳಿಸಿದರು.
ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದೀಲ್ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ವಚನಗಳನ್ನು ಹೆಚ್ಚಾಗಿ ಸೇರ್ಪಡೆ ಮಾಡಬೇಕು ಎಂದು ಪ್ರತಿಪಾದಿಸಿದರು.