Advertisement
ಈ ವರ್ಷ ಭಕ್ತರ ಸಂಖ್ಯೆ ಹೆಚ್ಚುವ ಸಂಭವವಿರುವ ಕಾರಣ ದೇವಸ್ಥಾನದ ವತಿಯಿಂದ ಮುಂಜಾನೆ 4.30ಕ್ಕೆ ದೇವಸ್ಥಾನದ ಬಾಗಿಲನ್ನು ತೆರೆದು ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿತ್ತು.
Related Articles
Advertisement
ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆಯುವಲ್ಲಿ ಕೂಡಾ ಸಾಕಷ್ಟು ವ್ಯವಸ್ಥೆಯನ್ನು ಮಾಡಿದ್ದರಿಂದ ಊರಿನ ಭಕ್ತರೊಂದಿಗೆ ಪಾದಯಾತ್ರೆಯಲ್ಲಿ ಬಂದ ಸುಮಾರು 6-7 ಸಾವಿರ ಜನರು ಹಾಗೂ ಪರವೂರಿನಿಂದ ಬಂದಿದ್ದ ಪ್ರವಾಸಿ ಭಕ್ತರು ಸಹ ದೇವರ ದರ್ಶನವನ್ನು ಪಡೆಯಲು ಅನುಕೂಲವಾಗಿತ್ತು.
ಸಾವಿರಾರು ಜನರು ಸೇರಿದ್ದರು ಕೂಡಾ ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರತಿಯೊಂದು ಹಂತದಲ್ಲಿಯೂ ಕೂಡಾ ಪೊಲೀಸರು ಸಹಕರಿಸಿದರು.
ಪುರಾಣ ಪ್ರಸಿದ್ಧ ಶಿವ ಕ್ಷೇತ್ರವಾದ ನಗರದ ಚೋಳೇಶ್ಚರದಲ್ಲಿಯೂ ಸಹ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಪೂಜೆ ಸಲ್ಲಿಸಿದರು.
ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬರುವುದಕ್ಕೆ ಆರಂಭಿಸಿದ್ದು ಸರದಿಯ ಸಾಲು ಮುಂದುವರಿದೇ ಇತ್ತು.