ಭಟ್ಕಳ: ತಾಲೂಕಿನ ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮೂವರು ಸೋಮವಾರ ಸಂಜೆ ಸಮುದ್ರ ಸ್ನಾನಕ್ಕೆಂದು ತೆರಳಿದ ಸಂದರ್ಭ ಅಲೆಯ ರಭಸಕ್ಕೆ ಇಬ್ಬರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಒಬ್ಬರು ಪಾರಾದ ಘಟನೆ ನಡೆದಿದೆ.
Advertisement
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪುನೀತ ಚೌಡಪ್ಪ (30) ಹಾಗೂ ರಾಘವೇಂದ್ರ ರಮೇಶ (17) ಸಮುದ್ರದಲ್ಲಿ ನಾಪತ್ತೆಯಾದವರು. ಇಬ್ಬರಲ್ಲಿ ಪುನೀತನ ಶವ ಮುಡೇìಶ್ವರ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದ್ದರೆ, ರಾಘವೇಂದ್ರ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಮುಡೇìಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.