Advertisement
ತಾಲೂಕುಗಳಲ್ಲಿ ಈಗಲೂ ಕೆಲವು ಹೋಟೆಲ್‌ಗಳು ಕಡಿಮೆ ದರದಲ್ಲಿಉತ್ತಮ ತಿಂಡಿ, ಊಟ ಒದಗಿಸುತ್ತಾ, ಹಳ್ಳಿ ಜನರ ಹಸಿವು ನೀಗಿಸುತ್ತಿವೆ. ಕೆಲವರಿಗೆ ಈ ಹೋಟೆಲ್ ಗಳಲ್ಲಿ ತಿಂದ್ರೇನೇ ಸಮಾಧಾನ. ಅಂತಹ ಹೋಟೆಲೊಂದು ಚಿಕ್ಕನಾಯಕನಹಳ್ಳಿಯಲ್ಲಿದೆ. ಹೇಳ್ಳೋಕೆ ತಾಲೂಕು ಕೇಂದ್ರವಾದ್ರೂ ನೋಡೋಕೆ ಹಳ್ಳಿಯಂತೆ ಇರುವ ಚಿಕ್ಕನಾಯಕನಹಳ್ಳಿಯಲ್ಲಿ “ಮೂರ್ತಿ ಹೋಟೆಲ್’ ಹೆಸರುವಾಸಿ. ನೋಡೋಕೆ ಮನೆಯಂತೆ ಕಾಣುವ ಈ ಹೋಟೆಲ್‌ಗೆ ಯಾವುದೇ ನಾಮಫಲಕವಿಲ್ಲ. ಮಾಲೀಕನ ಹೆಸರೇ ಈ ಹೋಟೆಲಿನ ಐಡೆಂಟಿಟಿಕಾರ್ಡು.
ಸೇರಿಕೊಂಡರು. ಆದರೆ, ಬರುತ್ತಿದ್ದ ಕೂಲಿ ಹಣ ಮನೆಗೆ ಸಾಕಾಗುತ್ತಿರಲಿಲ್ಲ. 12ನೇ ವಯಸ್ಸಿಗೆ ತಂದೆ, ತಾಯಿ ತೀರಿಕೊಂಡ ನಂತರ, ಮನೆಯನ್ನು ತೊರೆದ ಮೂರ್ತಿ ರಾಮನಗರದ ಲಿಂಗಾಯತರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಅಡುಗೆ ಮಾಡುವುದನ್ನು ಚೆನ್ನಾಗಿ ಕಲಿತು ನಂತರ ಹೊಸದುರ್ಗ ತಾಲೂಕಿನ ಚೌಳುಕಟ್ಟೆಯಲ್ಲಿ ತಮ್ಮ ಸ್ನೇಹಿತರ ಸಹಕಾರದೊಂದಿಗೆ ಹೋಟೆಲ್ ಆರಂಭಿಸಿದ್ದರು. ಹೋಟೆಲ್ ಚೆನ್ನಾಗಿ ನಡೆಯಿತು. ಇಲ್ಲಿ ಬಂದ ಲಾಭದಲ್ಲಿ ತಾತನ ಸಾಲವನ್ನುತೀರಿಸಿದರು. ಆದರೆ, ಸ್ನೇಹಿತನೇ ಮಾಡಿದ ಮೋಸದಿಂದ ಅಲ್ಲಿಂದ ಹೋಟೆಲ್ ಖಾಲಿ ಮಾಡಿ ತಿಪಟೂರಿನ ಕೆ.ಜಿ.ಹಳ್ಳಿಯ ಭಾವಿ ಬಳಿ ಹೊಸದೊಂದು ಹೋಟೆಲ್ ಆರಂಭಿಸಿದ್ದರು. ಇಲ್ಲಿಯೂ ಹೋಟೆಲ್ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಯಾವುದೋ ಕುಂಟು ನೆಪ ಇಟ್ಟುಕೊಂಡು ಸ್ಥಳೀಯರೇ ಗಲಾಟೆ ಮಾಡಿ, ಅಲ್ಲಿಯೂ ತೆರವು ಮಾಡಿಸಿದರು. ನಂತರ ಸ್ವಸ್ಥಳ ಚಿಕ್ಕನಾಯಕನಹಳ್ಳಿಗೆ ಬಂದ ಮೂರ್ತಿ, ತನ್ನ ಪತ್ನಿ ದೊಡ್ಡಮ್ಮ ಅವರ ಸಹಕಾರದೊಂದಿಗೆ 1963ರಲ್ಲಿ ವೆಂಕಟೇಶ್ವರ ಕಾμ ಕ್ಲಬ್ ಎಂಬ ಹೆಸರಿನೊಂದಿಗೆ ಹೋಟೆಲ್ ಆರಂಭಿಸಿದ್ರು. ಹೋಟೆಲ್ ಕೆಲಸದಲ್ಲಿ ಮೂರ್ತಿಯವರಿಗೆ ಐವರು ಪುತ್ರಿಯರೂ ಸಾಥ್ ನೀಡುತ್ತಿದ್ದರು. ಈಗ ಮೂರ್ತಿ ಅವರ ಪುತ್ರ ನಾಗರಾಜ್ ಹೋಟೆಲ್ ನೋಡಿಕೊಳ್ಳುತ್ತಿದ್ದಾರೆ.
ನಾಗರಾಜ್ ಕೂಡ ಎಲೆಕ್ಟ್ರಿಕಲ್ ಡಿಪ್ಲೋಮಾ ಮಾಡಿ ಬೆಂಗಳೂರಿನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಕೆಲಸ ಬಿಟ್ಟು, ತಂದೆ ಕಟ್ಟಿಕೊಟ್ಟಿದ್ದ ಹೋಟೆಲ್ ಅನ್ನು
ಮುಂದುವರಿಸಿಕೊಂಡು ಅದೇ ರುಚಿ, ಅದೇ ತಿಂಡಿಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಜೀವನ ರೂಪಿಸಿದ ರಾಮನಗರ ಹೋಟೆಲ್ ಮೂರ್ತಿ ಹೋಟೆಲ್ ಫೇಮಸ್ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ
ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದ ಹೋಟೆಲ್. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ ಚಿಕ್ಕನಾಯಕನಹಳ್ಳಿಯ ಜನರಿಗೂ ಇಷ್ಟವಾಯಿತು. ಇದರೊಂದಿಗೆ ಮೂರ್ತಿಯವರ ಜೀವನವೂ ಸುಧಾರಿಸಿತು. ವಿಶೇಷ ತಿಂಡಿ ಇಡ್ಲಿ, ಚಿತ್ರಾನ್ನ ಈ ಹೋಟೆಲ್‌ನ ವಿಶೇಷ ತಿಂಡಿ ಅಂದ್ರೆ ತಟ್ಟೆ ಇಡ್ಲಿ. ಇದರ ಜತೆ ಕೊಡುವ ತುಪ್ಪ, ಪಲ್ಯ, ತೆಂಗಿನಕಾಯಿ ಚಟ್ನಿ ಗ್ರಾಹಕರಿಗೆ ರುಚಿಸಿದೆ. ಇದರ ಜೊತೆ ಎರಡು ಬೋಂಡಾ ಹಾಕಿಕೊಂಡರೆ ದರ 40 ರೂ., 2 ಇಡ್ಲಿ ಆದ್ರೆ 25 ರೂ. ಮಾತ್ರ, ಇನ್ನು ಹುಣಿಸೆಹಣ್ಣು, ಮೆಂತ್ಯಾ ಹಾಕಿ ಮಾಡುವ ಚಿತ್ರಾನ್ನ, ಮನೆಯ ತಿಂಡಿಯನ್ನು ನೆನಪಿಸುತ್ತೆ. ಫಲಾವ್, ಪೂರಿ, ಬಜ್ಜಿ ಹೀಗೆ ಎರಡು ಮೂರು ಬಗೆಯ ತಿಂಡಿ ಇಲ್ಲಿ ಸಿಗುತ್ತದೆ. ಬೆಲೆ 30 ರೂ. (ಈರುಳ್ಳಿ ಬೋಂಡಾ ಸೇರಿ).
Related Articles
ಹೋಟೆಲ್ ವಿಳಾಸ: ಬನಶಂಕರಿ ದೇವಸ್ಥಾನ ರಸ್ತೆ, ಸಿವಿಲ್ ಬಸ್ ನಿಲ್ದಾಣದ ಒಳಭಾಗ. ಚಿಕ್ಕನಾಯಕನಹಳ್ಳಿ ಪಟ್ಟಣ.
Advertisement
ಭೋಗೇಶ ಆರ್.ಮೇಲುಕುಂಟ