Advertisement

ಮೇಸ್ತ ಹತ್ಯೆ: ಉನ್ನತ ತನಿಖೆ ಆಗ್ರಹ; ಗಂಗೊಳ್ಳಿ ಬಂದ್‌

02:57 PM Dec 20, 2017 | Team Udayavani |

ಕುಂದಾಪುರ: ಹೊನ್ನಾವರದ ಪರೇಶ್‌ ಮೇಸ್ತ ನಿಗೂಢ ಸಾವಿನ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ನೀಡ ಬೇಕು ಎಂದು ಆಗ್ರಹಿಸಿ ಗಂಗೊಳ್ಳಿಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಮಂಗಳ ವಾರ ಗಂಗೊಳ್ಳಿಯಲ್ಲಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಘೋಷಿತ ಬಂದ್‌ ನಡೆಸ ಲಾಯಿತು. ಬಳಿಕ ನಡೆದ ಬೃಹತ್‌ ಕಾಲ್ನಡಿಗೆ ಮೆರವಣಿಗೆ ಹಾಗೂ ಪ್ರತಿ ಭಟನ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವುದರೊಂದಿಗೆ ಬಂದ್‌ ಯಶಸ್ವಿಯಾಯಿತು. ಗಂಗೊಳ್ಳಿ ಬಂದರಿನಿಂದ  ಆರಂಭ ಗೊಂಡ ಪ್ರತಿಭಟನ ಜಾಥಾವು ಪ್ರಮುಖ ಬೀದಿಗಳಲ್ಲಿ ಸಾಗಿ ನಾಯಕವಾಡಿ, ಗುಜ್ಜಾಡಿಯಾಗಿ ತ್ರಾಸಿ ಸರ್ಕಲ್‌ ವರೆಗೆ ತೆರಳಿ ಕೊಡಪ್ಪಾಡಿ ಮೈದಾನದಲ್ಲಿ ಸಭೆ ಸೇರಿತು. 

Advertisement

ಗಂಗೊಳ್ಳಿ  ಸ್ತಬ್ಧ
ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ತಾ|ನ ಪ್ರಮುಖ ಬಂದರು ಗಂಗೊಳ್ಳಿ ಇಡೀ ಸ್ತಬ್ಧ ಗೊಂಡಿತು. ಮೀನು ಗಾರರಿಗೆ ರಜೆ ಸಾರಿದ್ದರಿಂದ ಮೀನು ಗಾರಿಕೆ ವಹಿವಾಟು ಸಂಪೂರ್ಣ ಸ್ಥಗಿತ ಗೊಂಡಿತ್ತು. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಖಾಸಗಿ, ಸರಕಾರಿ ಬಸ್‌ ಸಂಚಾರ ಇರಲಿಲ್ಲ. ಗಂಗೊಳ್ಳಿಯಿಂದ ತ್ರಾಸಿಯವರೆಗೆ ವರ್ತಕರು ಎಲ್ಲ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದ್ದರು.

ಹತ್ಯೆಗೆ ಕಾಂಗ್ರೆಸ್‌ ಕುಮ್ಮಕ್ಕು
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್‌ ಸಭೆಯನ್ನುದ್ದೇ ಶಿಸಿ ಮಾತನಾಡಿ, ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಅನಂತರ ಹಿಂದೂಗಳ ಮೇಲೆ ನಿರಂತರ ದಬ್ಟಾಳಿಕೆ ನಡೆಯುತ್ತಿದೆ. ರಾಜ್ಯದಲ್ಲಿ ನಡೆ ಯು ತ್ತಿರುವ ಹಿಂದೂಗಳ ಹತ್ಯೆಗೆ ಕಾಂಗ್ರೆಸ್‌ ಸರಕಾರವೇ ಕುಮ್ಮಕ್ಕು ನೀಡುತ್ತಿದೆ. ಪರೇಶ್‌ ಮೇಸ್ತನ ಪ್ರಕರಣ ಹತ್ಯೆ ಎಂಬುದು ತಿಳಿದಿದ್ದರೂ ಅದೊಂದು ಸಹಜ ಸಾವೆಂದು ಬಿಂಬಿಸಲು ಉ. ಕನ್ನಡ ಜಿಲ್ಲಾಡಳಿತ ಪ್ರಯತ್ನಿ ಸಿರು ವುದು ನಾಚಿಕೆಗೇಡಿನ ಸಂಗತಿ. ಅಲ್ಪ ಸಂಖ್ಯಾಕರನ್ನು ಓಲೈಸಲು ಹಿಂದೂಗಳನ್ನು ಕಡೆಗಣಿಸಿದರೆ ಮುಂಬರುವ ಚುನಾವಣೆಯಲ್ಲಿ ಜನತೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಪರೇಶ್‌ ಪ್ರಕರಣದಲ್ಲಿ ಸರಕಾರಕ್ಕೆ ನೈಜ ಆರೋಪಿಗಳನ್ನು ಬಂಧಿಸುವ ಧೈರ್ಯವಿಲ್ಲ. ಪೊಲೀಸ್‌ ಸಿಬಂದಿಯೇ ವಾಹನಗಳನ್ನು ಪುಡಿ ಮಾಡಿ, ಅದು ಕೋಮುಗಲಭೆಯ ಪರಿಣಾಮ ಎಂದು ಬಿಂಬಿಸಲು ಹೊರಟಿರುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ರವಿರಾಜ್‌ ಕಡಬ ಆರೋಪಿಸಿದರು. ವಾಸುದೇವ ಗಂಗೊಳ್ಳಿ ಪ್ರಸ್ತಾವನೆಗೈ ದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂದು ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

10 ಸಾವಿರ ಮಂದಿ ಭಾಗಿ
ಗಂಗೊಳ್ಳಿಯಿಂದ ತ್ರಾಸಿ ಸರ್ಕಲ್‌ವರೆಗಿನ 6 ಕಿ.ಮೀ. ಸಾಗಿದ ಪ್ರತಿಭಟನ ರ್ಯಾಲಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಖಾರ್ವಿ ಸಮುದಾಯದವರು, ಗಂಗೊಳ್ಳಿ ಸುತ್ತಮುತ್ತಲಿನ ಸುಮಾರು 10 ಸಾವಿರ ಮಂದಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಮೆರವಣಿಗೆಯುದ್ದಕ್ಕೂ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪರೇಶ್‌ ಮೇಸ್ತ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಕೂಗು ಕೇಳಿ ಬಂತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

Advertisement

ಭಾರೀ ಭದ್ರತೆ
ಗಂಗೊಳ್ಳಿ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ, ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಯಾಗಿ ಭಾರೀ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನೆ ಸಾಗಿ ಬರುವ ಹಾದಿಯುದ್ದಕ್ಕೂ ಒಟ್ಟು ಸುಮಾರು 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲವು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು. ಉಡುಪಿ ಜಿಲ್ಲಾ ಎಸ್‌ಪಿ ಸಂಜೀವ ಎಂ. ಪಾಟೀಲ್‌ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಡ್ರೋನ್‌ ಮತ್ತು ಕೆಮರಾ ಅಳವಡಿಸಿ ನಿಗಾ ವಹಿಸಲಾಗಿತ್ತು. ನಾಯಕವಾಡಿ ಚೆಕ್‌ಪೋಸ್ಟ್‌ನಲ್ಲಿ ಗಂಗೊಳ್ಳಿಗೆ ಹೋಗುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿತ್ತು.

ನಿಧಿ ಸಂಗ್ರಹ
ಬೃಹತ್‌ ಪ್ರತಿಭಟನೆ, ಮೆರವಣಿಗೆ ವೇಳೆ ಪರೇಶ್‌ ಮೇಸ್ತ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ  ನಿಧಿ ಸಂಗ್ರಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next