Advertisement

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರಳಿ ವಿಜಯ್

04:59 PM Jan 30, 2023 | Team Udayavani |

ಚೆನ್ನೈ: ಒಂದು ಕಾಲದಲ್ಲಿ ಟೀಮ್‌ ಇಂಡಿಯಾದಲ್ಲಿ ಆರಂಭಿಕನಾಗಿ ಬ್ಯಾಟ್‌ ಬೀಸಿದ್ದ ಮುರಳಿ ವಿಜಯ್‌ ಎಲ್ಲಾ ಮಾದರಿಯ ಕ್ರಿಕೆಟಿಗೆ ಸೋಮವಾರ (ಜ.30 ರಂದು) ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವಟರ್‌ ನಲ್ಲಿ ಮಾಹಿತಿ ಕೊಟ್ಟಿದ್ದಾರೆ.

Advertisement

ಭಾರತದ ಪರವಾಗಿ ಒಟ್ಟು 87 ಪಂದ್ಯಗಳನ್ನು ಆಡಿರುವ ಅವರು, 61 ಟೆಸ್ಟ್‌ ಪಂದ್ಯದಲ್ಲಿ 38.29 ಸರಾಸರಿಯಲ್ಲಿ 12 ಶತಕದೊಂದಿಗೆ 3982 ರನ್‌ ಗಳನ್ನು ಗಳಿಸಿದ್ದಾರೆ. 17 ಏಕದಿನ ಪಂದ್ಯ ಹಾಗೂ 9 ಟಿ-20 ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್‌ ನಲ್ಲೂ ವಿಜಯ್‌ ಬ್ಯಾಟಿಂಗ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿಸಿದ್ದು, ಒಟ್ಟು 106 ಪಂದ್ಯದಲ್ಲಿ 2 ಶತಕದೊಂದಿಗೆ 2619 ರನ್‌ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ಪರವಾಗಿ ಆಡಿದ್ದರು.

2008 ರ ನವೆಂಬರ್‌ 6 ರಂದು ಆಸ್ಟೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯದ ಮೂಲಕ ತಂಡಕ್ಕೆ ಪಾದರ್ಪಣೆ ಮಾಡಿದ್ದರು. 2018ರ ಡಿ.14 ರಂದು ಆಸ್ಟೇಲಿಯಾ ವಿರುದ್ಧ ಪರ್ತ್‌ ನಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು.

ತನ್ನ ನಿವೃತ್ತಿ ಬಗ್ಗೆ ಟ್ವೀಟ್‌ ನಲ್ಲಿ ಮಾಹಿತಿ ಕೊಟ್ಟಿರುವ ಮುರಳಿ ವಿಜಯ್,  ಬಿಸಿಸಿಐ, ಟಿಎನ್‌ಸಿಎ, ಸಿಎಸ್‌ಕೆ ಮತ್ತು ಚೆಂಪ್ಲಾಸ್ಟ್ ಸನ್ಮಾರ್ ನನಗೆ ನೀಡಿದ ಅವಕಾಶಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ವಿಜಯ್ ಬರೆದಿದ್ದಾರೆ.

Advertisement

ನನ್ನ ಎಲ್ಲಾ ತಂಡದ ಸಹ ಆಟಗಾರರಿಗೆ, ತರಬೇತುದಾರರಿಗೆ, ಮಾರ್ಗದರ್ಶಕರಿಗೆ ಮತ್ತು ಸಹಾಯಕ ಸಿಬ್ಬಂದಿಗಳಿಗೆ ಧನ್ಯವಾದಗಳು. ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ಎಂದು ವಿಜಯ್ ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next