ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರದ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬಳಿ ಬಸವಧಾಮ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದಿನ ಈ ಎಲ್ಲಾ ಕಾರ್ಯಕ್ರಮ ಈ ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿ.ಇಂದು ಅತ್ಯಂತ ಪುಣ್ಯದ ದಿನ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಸವಣ್ಣ ಮೂರ್ತಿ ಅನಾವರಣ, ಶಿವಕುಮಾರ ಸ್ವಾಮೀಜಿ ಪೂರ್ತಿ ಅನಾವರಣ ಮಾಡಲಾಗಿದೆ. ಮೇರು ನಟ ನನ್ನ ಪುನೀತ್ ರಾಜ್‍ಕುಮಾರ್ ಹೆಸರು ವಾರ್ಡ್ ಗೆ ಇಟ್ಟು ಕಾರ್ಯಕ್ರಮ ಮಾಡಿದ್ದು, ಪುಣ್ಯದ ದಿನ. ಎಲ್ಲಾ ರಂಗದಲ್ಲಿ ಬೆಂಗಳೂರು ಬೆಳೆಯುತ್ತಿದೆ. ಜನಸಂಖ್ಯೆ ಬೆಳೆಯುತ್ತಿದ್ದಂತೆ ಸೌಲಭ್ಯ ಕೊಡಬೇಕಾಗಿದ್ದು ಮುಖ್ಯ. ಸಿಎಂ ಆದ ತಕ್ಷಣ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ಕೊಟ್ಟಿದ್ದೇನೆ. ಬೆಂಗಳೂರು ರಾಜಕಾಲುವೆ ಸ್ಥಿತಿಗೆ 1600 ಕೋಟಿ ಅನುದಾನ ನೀಡಿದ್ದೇನೆ.15 ಸಾವಿರ ಕೋಟಿ ಅನುದಾನಲ್ಲಿ ಸಬರ್ ಬನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ ಎಂದರು.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಅಭಿವೃದ್ಧಿ ಹೇಗಿದೆ ಅಂದರೆ ಅವರ ದೇಹ ಎಷ್ಟು ದೊಡ್ಡದಿದೆ, ಈ ಕ್ಷೇತ್ರದ ಜನರ ಬಗ್ಗೆಯೂ ಅಷ್ಟೇ ಕಾಳಜಿ ಇದೆ. ಕೋವಿಡ್ ವೇಳೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.ಬಡವರ ಪಾಲಿಗೆ ಆಧಾರವಾಗಿ ನಿಂತಿರುವ ಹೃದಯವಂತ ಗೋಪಾಲಯ್ಯ.ಸಣ್ಣ ಸಣ್ಣ ವಿಚಾರಕ್ಕೆ ಗೋಪಾಲಯ್ಯ ಗಮನಿಸುತ್ತಾರೆ. ದೋಭಿಘಾಟ್ ಸ್ಥಾಪನೆ ಆಗಿದೆ.ಬಡವರ ಬಗ್ಗೆಯೂ ಬಹಳ ಕಾಳಜಿ ಇದೆ. ಮುನಿರತ್ನ ಕೂಡ ಗೋಪಾಲಯ್ಯಗೆ ಸಾಥ್ ಕೊಡುತ್ತಾರೆ ಎಂದರು.
ಮುನಿರತ್ನ ಬಹಳ ಕಿಲಾಡಿ, ಗೋಪಾಲಯ್ಯ ನ್ಯಾಷನಲ್ ಹೈವೇ ಇದ್ದಂಗೆ : ಸಿಎಂ ಬೊಮ್ಮಾಯಿ
ಮುನಿರತ್ನ ಬಹಳ ಕಿಲಾಡಿ, ಗೋಪಾಲಯ್ಯ ನ್ಯಾಷನಲ್ ಹೈವೇ ಇದ್ದಂಗೆ. ಈ ಹೈವೇಗೆ ಯಾವೇಲ್ಲಾ ರೋಡ್ ಸಂಪರ್ಕ ಆಗುತ್ತದೋ, ಅದೆಲ್ಲಾ ಮುನಿರತ್ನ ರಸ್ತೆಗಳು. ಬೆಂಗಳೂರು ಅಭಿವೃದ್ಧಿಯಲ್ಲಿ ಶಿಕ್ಷಣ, ಆರೋಗ್ಯ ಅಷ್ಟೇ ಅಲ್ಲ, ಕೆರೆ ಅಭಿವೃದ್ಧಿಗೂ ಹಣ ನೀಡಿದ್ದೇವೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತಿದ್ದೇವೆ.ಬೆಂಗಳೂರು ಪ್ರತಿ ವಾರ್ಡ್ ನಿಮ್ಮ ಪ್ರತಿನಿಧಿ ಇರಬೇಕು. ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಸಿಎಂ ಹೇಳಿದರು.
ಸಮಾರಂಭದಲ್ಲಿ ತುಮಕೂರಿನ ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು.