ಬೆಂಗಳೂರು: ಸಚಿವ ಮುನಿರತ್ನ ಅವರು ದೊಡ್ಡ ಇತಿಹಾಸ, ಹಿನ್ನೆಲೆ ಹೊಂದಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಗೂಂಡಾಗಳು ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂಬ ಸಚಿವ ಮುನಿರತ್ನ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.
ಸಚಿವರ ದೊಡ್ಡ ಇತಿಹಾಸ, ಹಿನ್ನೆಲೆ ಇರುವವರು. ಆರ್.ಆರ್.ನಗರದಲ್ಲಿ ಎಲ್ಲಾ ಪೊಲೀಸ್ ಸ್ಟೇಷನ್ ಗಳು ಅವರು ಹೇಳಿದಂಗೆ ಕೇಳುತ್ತಿವೆ. ಯಾವ ಯಾವ ಪ್ರಕರಣ, ಯಾರ ಯಾರ ಮೇಲೆ ಹಾಕಿಸಿದ್ದಾರೆ ಎಂಬುದು ಗೊತ್ತಿದೆ. ಸಚಿವರು ಕೇಸ್ ಹಾಕಿಸುವುದರಲ್ಲಿ ಎಕ್ಸ್ ಪರ್ಟ್ ಎಂದು ಟೀಕಿಸಿದರು.
ಸಚಿವರು ಕೇಸ್ ಹಾಕಿಸಿದರೆ ತೊಂದರೆಯಿಲ್ಲ. ನಾವು ಎದುರಿಸಲು ಸಿದ್ಧವಾಗಿದ್ದೇವೆ. ಜೈಲಿಗೆ ಹೋಗಲು ಸಿದ್ಧವಾಗಿದ್ದೇವೆ. ಈ ಗೊಡ್ಡು ಬೆದರಿಕೆಗೆ ಕಾಂಗ್ರೆಸ್ ಹೆದರುವುದಿಲ್ಲ. ಅಧಿಕಾರಿಗಳನ್ನು ಬಳಿಸಿಕೊಂಡು ಪ್ರಜಾಪ್ರಭುತ್ವವನ್ನು ಕೊಲ್ಲುವ ಯತ್ನ ಮಾಡುತ್ತಿದ್ದಾರೆ. ನಾವು ಮೀಸಲಾತಿ ಕೇಳುತ್ತಿದ್ದೇವೆ. ಅದಕ್ಕೆ ಕಾನೂನಿನ ಚೌಕಟ್ಟು ನಿಯಮಗಳನ್ನು ಪಾಲನೆ ಮಾಡಬೇಕು. 25 – 30 ವರ್ಷಗಳಿಂದ ಮೀಸಲಾತಿ ಪ್ರಕಟವಾಗುತ್ತಿದೆ. ಅದಕ್ಕೆ ಗೈಡ್ ಲೈನ್ಸ್ ಇದೆ. ಗೈಡ್ ಲೈನ್ಸ್ ಗಳನ್ನು ಗಾಳಿಗೆ ತೂರಿದ್ದಾರೆ. ಅಧಿಕಾರಿಗಳು ಬಿಜೆಪಿ ನಾಯಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಪ್ರತಿಭಟನೆ ಮಾಡಬೇಕು ಎಂದರು.
ಇದನ್ನೂ ಓದಿ:ಬ್ಲ್ಯಾಕ್ ಮ್ಯಾಜಿಕ್: 5 ವರ್ಷದ ಬಾಲಕಿಯನ್ನು ಥಳಿಸಿ ಹತ್ಯೆಗೈದ ಹೆತ್ತವರು
ಸಿಎಂ ಕೈಚಲ್ಲಿ ಕುಳಿತ್ತಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡೋಣ ಅಂದರೆ ಓಡಿ ಹೋಗುತ್ತಾರೆ. ನಾವು ಏನು ಮಾಡಬೇಕು? ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯಕ್ಕೆ ಹೋಗಲು ನಾವು ಸಿದ್ಧವಾಗಿದ್ದೇವೆ ಎಂದು ವಾಗ್ದಾಳಿ ನಡೆಸಿದರು.