Advertisement

ಪುರಸಭೆ: ಗರಿಗೆದರಿದ ರಾಜಕೀಯ ಚಟುವಟಿಕೆ

11:56 AM May 04, 2019 | Team Udayavani |

ಶ್ರೀರಂಗಪಟ್ಟಣ; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪಟ್ಟಣ, ಪುರಸಭೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಬೆನ್ನಲ್ಲೇ ಮತ್ತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ.

Advertisement

ಶ್ರೀರಂಗಪಟ್ಟಣ ಪುರಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 29ಕ್ಕೆ ಚುನಾವಣೆ ನಿಗದಿಯಾಗಿದೆ. ವಿವಿಧ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿತರು ಈಗಾಗಲೇ ನಾಯಕರ ಬೆನ್ನು ಹತ್ತಿ ಪೈಪೋಟಿ ನಡೆಸಲಾರಂಭಿಸಿದ್ದಾರೆ.

ಶ್ರೀರಂಗಪಟ್ಟಣ ಪುರಸಭೆಗೆ ಕಳೆದ 5 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್‌-7, ಜೆಡಿಎಸ್‌-6, ಬಿಜೆಪಿ-3, ಪಕ್ಷೇತರ-6 ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌-1 ಸ್ಥಾನವನ್ನು ಪಡೆದುಕೊಂಡಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್‌ ಬಂಡಿಸಿದ್ದೇಗೌಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಬಿಎಸ್‌ಆರ್‌ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರೊಬ್ಬರು ಇವರೊಂದಿಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ 7 ಸದಸ್ಯರು ಇಬ್ಬರು ಶಾಸಕ ರವೀಂದ್ರ ಪರ ನಿಂತಿದ್ದಾರೆ. ಜೊತೆಗೆ ಬಿಜೆಪಿ ಸದಸ್ಯರೊಬ್ಬರು ಶಾಸಕರ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಮೀಸಲಾತಿ ವಿವಾದ: ಕಳೆದ ಅವಧಿ ಯಲ್ಲಿ ಎರಡೂವರೆ ವರ್ಷ ಮಾತ್ರ ಆಡಳಿತ ನಡೆಸಲಾಗಿದ್ದು, ಇನ್ನು ಉಳಿದ ಅವಧಿ ಅಧ್ಯಕ್ಷ ಹುದ್ದೆಯ ಮೀಸಲಾತಿ ವಿಚಾರ ವಿವಾದದ ಸ್ವರೂಪ ಪಡೆದು ನ್ಯಾಯಾಲಯದ ಮೆಟ್ಟಿಲೇರಿದ್ದು, ಪುರಸಭೆಗೆ ಆಡಳಿತಾಧಿಕಾರಿ ನೇಮಕ ಗೊಂಡಿದ್ದರು. ಆಡಳಿತಾಧಿಕಾರಿ ನೇಮಕ ಗೊಂಡ ನಂತರ ಪುರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಎಲ್ಲವೂ ಕುಂಠಿತಗೊಂಡಿದೆ.

Advertisement

ಪರಿಶಿಷ್ಟರಿಗೆ ಮೀಸಲು: ಕಳೆದ ಆಡಳಿತ ಮಂಡಳಿಯಲ್ಲಿ ಮೊದಲು ಅಧ್ಯಕ್ಷಗಾದಿಗೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಎರಡೂವರೆ ವರ್ಷ ಆಡಳಿತ ಸುಗಮವಾಗಿ ನಡೆದಿತ್ತು. ಇನ್ನುಳಿದ ಎರಡು ವರ್ಷಕ್ಕೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಯನ್ನು ಸರ್ಕಾರ ನಿಗದಿ ಪಡಿಸಿತ್ತು. ಅದರೆ ಮೀಸಲಾತಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಪುರಸಭಾ ಸದಸ್ಯರೊಬ್ಬರು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಅದು ಎರಡೂವರೆ ವರ್ಷ ಕಳೆದರೂ ಮೀಸಲಾತಿಯ ತೀರ್ಮಾನವಾಗದೆ ನನೆಗುದಿಗೆ ಬಿದ್ದಿತ್ತು.

ಮೀಸಲಾತಿ: ಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಅದರ ಮೀಸಲಾತಿಯನ್ನು ಎರಡು ತಿಂಗಳ ಹಿಂದೆಯೇ ಸರ್ಕಾರ ಪ್ರಕಟ ಗೊಳಿಸಲಾಗಿತ್ತು. ಒಂದನೇ ವಾರ್ಡ್‌ (ಪರಿಶಿಷ್ಟ ಪಂಗಡ), 2ನೇ ವಾರ್ಡ್‌ (ಹಿಂದು ಳಿದ ವರ್ಗ), 3ನೇ ವಾರ್ಡ್‌ (ಸಾಮಾನ್ಯ), 4ನೇ ವಾರ್ಡ್‌ (ಸಾಮಾನ್ಯ ಮಹಿಳೆ), 5ನೇ ವಾರ್ಡ್‌ (ಸಾಮಾನ್ಯ), 6ನೇ ವಾರ್ಡ್‌ (ಸಾಮಾನ್ಯ), 7ನೇ ವಾರ್ಡ್‌ (ಸಾಮಾನ್ಯ ಮಹಿಳೆ), 8ನೇವಾರ್ಡ್‌ (ಸಾಮಾನ್ಯ ಮಹಿಳೆ), 9ನೇ ವಾರ್ಡ್‌ (ಹಿಂದುಳಿದ ವರ್ಗ ಮಹಿಳೆ), 10ನೇ ವಾರ್ಡ್‌ (ಸಾಮಾನ್ಯ), 11ನೇ ವಾರ್ಡ್‌ (ಸಾಮಾನ್ಯ), 12ನೇ ವಾರ್ಡ್‌ (ಹಿಂದುಳಿದ ವರ್ಗ), 13ನೇ ವಾರ್ಡ್‌ (ಹಿಂದುಳಿದ ವರ್ಗ ಮಹಿಳೆ), 14ನೇ ವಾರ್ಡ್‌(ಹಿಂದುಳಿದ ವರ್ಗ ಮಹಿಳೆ), 15ನೇ ವಾರ್ಡ್‌ (ಹಿಂದುಳಿದ ವರ್ಗ), 16ನೇ ವಾರ್ಡ್‌(ಹಿಂದುಳಿದ ವರ್ಗ ಬ. ಮಹಿಳೆ), 18ನೇ ವಾರ್ಡ್‌(ಪರಿಶಿಷ್ಟ ಜಾತಿ ಮಹಿಳೆ), 19ನೇ ವಾರ್ಡ್‌ (ಸಾಮಾನ್ಯ ಮಹಿಳೆ), 20ನೇ ವಾರ್ಡ್‌ (ಹಿಂದುಳಿದ ವರ್ಗ),21ನೇ ವಾರ್ಡ್‌(ಪರಿಶಿಷ್ಟ ಜಾತಿ), 22ನೇ ವಾರ್ಡ್‌ (ಸಾಮಾನ್ಯ ಮಹಿಳೆ), 23ನೇ ವಾರ್ಡ್‌ (ಸಾಮಾನ್ಯ ಮಹಿಳೆ)ಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.

ಮತದಾರರು: ಪುರಸಭೆಯ ವ್ಯಾಪ್ತಿ ಯಲ್ಲಿ ಒಟ್ಟು 19,295 ಮತದಾರರಿ ದ್ದಾರೆ. ಇದರಲ್ಲಿ ಇನ್ನು ಹೊಸ ಮತ ದಾರರ ಸೇರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next