ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಎಲ್ಲೆಡೆ ಮತದಾನದ ಉತ್ಸಾಹ ಕಂಡು ಬರುತ್ತಿದೆ.
ಮಹಾನಗರ ಪಾಲಿಕೆಯ ಎಲ್ಲ 55 ವಾರ್ಡ್ ಗಳಿಗೆ ಮತದಾನ ಆರಂಭವಾಗಿದೆ. ಮತದಾನಕ್ಕಾಗಿ ಒಟ್ಟಾರೆ 533 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಗಮವಾಗಿ ಮತದಾನ ನಡೆಯುತ್ತಿದೆ.
ಇದನ್ನೂ ಓದಿ:ಬೆಳಗಾವಿ ಪಾಲಿಕೆಗೆ ಬಿರುಸಿನಿಂದ ಮತದಾನ ಆರಂಭ
ಬೆಳಗ್ಗೆಯಿಂದ ಮಹಾನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮತದಾರರು ಮನೆಗಳಿಂದ ಬೇಗ ಬಂದು ಮತದಾನ ಮಾಡುತ್ತಿರುವುದು ಕಂಡು ಬರುತ್ತಿದೆ. ಯುವ ಮತದಾರರು, ಮಹಿಳೆಯರಿಂದ ಹಿಡಿದು ವಯೋವೃದ್ಧರು ಸಹ ಮತದಾನಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ.
98 ವರ್ಷದ ವೃದ್ಧೆ ಶಾಂತಿಬಾಯಿ ಅವರನ್ನು ಮತದಾನಕ್ಕೆ ಕೇಂದ್ರಕ್ಕೆ ಕುಟುಂಬಸ್ಥರು ಆಟೋದಲ್ಲಿ ಕರೆದು ಕೊಂಡು ಬಂದರು. ಮತಗಟ್ಟೆಗೆ ಬಂದ ವೃದ್ಧರನ್ನು ಚುನಾವಣಾ ಸಿಬ್ಬಂದಿಗೆ ವ್ಹೀಲ್ ಚೇರ್ ನಲ್ಲಿ ಕರೆತಂದು ಮತದಾನಕ್ಕೆ ನೆರವಾದವರು.