Advertisement

ನ್ಯಾಯಾಲಯ ಆವರಣ ಸ್ವಚ್ಛತೆಗೆ ಪುರಸಭೆ ನಿರ್ಲಕ್ಷ್ಯ

09:12 PM Aug 21, 2019 | Team Udayavani |

ಕುಂದಾಪುರ: ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಳೆನೀರು ಸಂಗ್ರಹವಾಗಿ ಕೊಳಚೆ, ಕೊಚ್ಚೆ ರಾಶಿಯಾಗಿದ್ದು ರೋಗಭೀತಿ ಆವರಿಸಿದೆ. ಸ್ವಚ್ಛ ಭಾರತದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಪುರಸಭೆ ಇಲ್ಲಿನ ನ್ಯಾಯಾಲಯ ಆವರಣದಲ್ಲಿನ ಸ್ವಚ್ಛತೆಯೆಡೆಗೆ ನಿರ್ಲಕ್ಷ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ದಿರಿಸಿಗೆ ಕೆಸರು
ಬಸ್‌ ನಿಲ್ದಾಣ ಸಮೀಪ ಇರುವ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಆವರಣದಲ್ಲಿ ಮರಗಳ ತರಗೆಲೆ ರಾಶಿ ಅಲ್ಲಲ್ಲಿ ಇದೆ. ಇದು ನೀರು ನಿಂತು ಕೊಚ್ಚೆಯಾಗಿದೆ. ಪರಿಣಾಮ ನಡೆದಾಡಲೂ ಅಸಾಧ್ಯವಾದ ಪರಿಸರವಾಗಿ ಮಾರ್ಪಟ್ಟಿದೆ. ಕಾಲು ಹೂತು ಹೋಗುವಂತಿದೆ. ಕೆಸರಿನಲ್ಲಿ ನಡೆಯಬೇಕಾದ ಸ್ಥಿತಿಯಿದೆ. ಕಚೇರಿಗೆಂದು ಉತ್ತಮ ದಿರಿಸು ಧರಿಸಿ ಬಂದರೆ ಬಣ್ಣ ಬದಲಾಗುವ ಅಪಾಯವಿದೆ.

ವಾಹನಗಳಿಗೂ ಸಂಕಷ್ಟ
ವಾಹನಗಳ ಪ್ರವೇಶ ದ್ವಾರದ ಬಳಿಯೂ ಇದೇ ಮಾದರಿಯಲ್ಲಿ ಕೆಸರು, ಕೊಚ್ಚೆಯಿದ್ದು ವಾಹನಗಳ ಚಕ್ರ ಹೂತು ಹೋಗುತ್ತದೆ. ಈಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭವಾದರೂ ಪುರಸಭೆ ಸ್ವಚ್ಛತಾ ಕಾರ್ಯ ನಡೆಸಬಹುದು ಎಂದು ವಕೀಲರಲ್ಲಿ ನಿರೀಕ್ಷೆಯಿತ್ತು. ಆದರೆ ಅದೂ ಹುಸಿಯಾಗಿದೆ. ಪರಿಸ್ಥಿತಿ ಹಾಗೆಯೇ ಇದೆ.

ಎಲ್ಲೆಡೆಯೂ ಒಂದೇ
ನಾಯಾಲಯದ ಆವರಣ ಹಾಗೂ ಹೊರಗಿನ ಭಾಗದಲ್ಲಿ ಯೂ ಒಂದೇ ರೀತಿಯ ಪರಿಸ್ಥಿತಿಯಿದೆ. ಅಲ್ಲಲ್ಲಿ ನೀರು ನಿಲ್ಲುವ ಕಾರಣ ರೋಗಭೀತಿ ಆವರಿಸಿದೆ.

ಎಳನೀರಿನ ಖಾಲಿ ಕವಚಗಳು ಕೂಡಾ ಅಲ್ಲಲ್ಲಿ ಬಿದ್ದು ಸೊಳ್ಳೆ ಉತ್ಪತ್ತಿಗೆ ಕಾಣವಾಗುವಂತಿದೆ. ಇದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವಾದ ಕಾರಣ ಇಡೀ ಜಿಲ್ಲೆಯ ವಿವಿಧೆಡೆಯ ಪ್ರಕರಣಗಳು ಇಲ್ಲಿ ವಿಚಾರಣೆಯಾಗುತ್ತವೆ. ಆದ್ದರಿಂದ ಪ್ರತಿನಿತ್ಯ ಜನಜಂಗುಳಿ ಇದ್ದೇ ಇರುತ್ತದೆ.

Advertisement

ವಿವಿಧೆಡೆಯ ವಕೀಲರು, ಸಾರ್ವಜನಿಕರು ಆಗಮಿಸುತ್ತಾರೆ. ಕುಂದಾಪುರ ಪುರಸಭೆ ಈ ನಿಟ್ಟಿನಲ್ಲಿ ಸ್ವಚ್ಛತೆಯ ಗಮನ ಹರಿಸದಿದ್ದರೆ ಆಡಳಿತದ ಮಾನ ಮೂರಾಬಟ್ಟೆಯಾಗುವ ಅಪಾಯವಿದೆ.

ಸ್ವಚ್ಛಗೊಳಿಸಿಲ್ಲ
ನ್ಯಾಯಾಲಯದ ಆವರಣ ಸ್ವಚ್ಛಗೊಳಿಸಬೇಕಾದ ಪುರಸಭೆ ಇಲ್ಲಿ ಗಮನಹರಿಸಿಲ್ಲ. ಸ್ವಾತಂತ್ರ್ಯ ದಿನವಾದರೂ ಸ್ವಚ್ಛ ಕುಂದಾಪುರ ಅಭಿಯಾನ ಅಥವಾ ಪುರಸಭೆ ಇಲ್ಲಿ ಸ್ವಚ್ಛಗೊಳಿಸಬಹುದೆಂಬ ನಮ್ಮ ನಿರೀಕ್ಷೆ ಸುಳ್ಳಾಗಿದೆ.
-ಪ್ರಮೋದ್‌ ಹಂದೆ, ಕಾರ್ಯದರ್ಶಿ, ವಕೀಲರ ಸಂಘ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next