Advertisement

ಒಳಚರಂಡಿ ಸಮಸ್ಯೆ ನಿವಾರಣೆಗೆ ಪುರಸಭೆ ವಿಫ‌ಲ: ಆರೋಪ

02:05 PM Sep 11, 2021 | Team Udayavani |

ಹೊಳೆನರಸೀಪುರ: ಪಟ್ಟಣದ ಒಳಚರಂಡಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇನ್ನು ಪರಿಹರಿಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ
ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಅಪ್ಟಿಕಲ್‌ ಕೇಬಲ್‌: ಪಟ್ಟಣದ ಮೈಸೂರು ರಸ್ತೆ ಹೆದ್ದಾರಿ ಕರ್ನಾಟಕ ಬ್ಯಾಂಕ್‌ ಎದುರುಗಡೆ ರಸ್ತೆಯಲ್ಲಿ ಒಳಚರಂಡಿ ಪಿಟ್‌ ತುಂಬಿ ಕೊಳಚೆ
ನೀರು ಬರುತ್ತಿದೆ ಎಂಬ ಸಾರ್ವಜನಿಕ ದೂರು ಆಲಿಸಿದ ಪುರಸಭೆ, ಈ ಪಿಟ್‌ ದುರಸ್ಥಿಗೆ ಮುಂದಾಗಿದೆ. ಆದರೆ, ದುರಸ್ಥಿ ವೇಳೆ ಪಿಟ್‌
ಸಂಪೂರ್ಣ ಕಸಕಡ್ಡಿಗಳಿಂದ ತುಂಬಿಕೊಂಡಿರುವ ಜತೆಯಲ್ಲಿ ಪಿಟ್‌ನಲ್ಲಿ ಭಾರತ್‌ ಸಂಚಾರ ನಿಗಮದ ಅಪ್ಟಿಕಲ್‌ ಕೇಬಲ್‌ಗ‌ಳು ದೊರೆತಿರುವುದು
ಒಳಚರಂಡಿ ಪೂರ್ಣ ಹದಗೆಡಲು ಕಾರಣವಾಗಿದೆ. ದುರಸ್ಥಿ ವೇಳೆ ಇಟಾಚಿಯಲ್ಲಿ ಪಿಟ್‌ನಲ್ಲಿ ಕಸ ಕಡ್ಡಿ ಹೊರ ತೆಗೆಯುವ ವೇಳೆ ಅಪ್ಟಿಕಲ್‌ ಕೇಬಲ್‌ ಹೊರತೆಗೆದು ಪಿಟ್‌ ದುರಸ್ಥಿಗೊಳಿಸಲಾಯಿತು.

ಆದರೆ, ಸಮಸ್ಯೆ ಇರುವುದು ಪಿಟ್‌ನಲ್ಲಿ ಕಸ ಕಡ್ಡಿ ತುಂಬಿರುವುದಲ್ಲ ಎಂಬುದಕ್ಕೆ ಪಿಟ್‌ ನಲ್ಲಿನ ಕೇಬಲ್‌ಗ‌ಳು ಕಾರಣ ಎಂಬುದು ಇದೀಗ ದೃಢ
ಪಟ್ಟಿದೆ. ಪಿಟ್‌ ನಿರ್ಮಿಸುವಾಗ ಈ ಕೇಬಲ್‌ಗಳನ್ನು ಸೇರಿಸಿ ಪಿಟ್‌ ನಿರ್ಮಿಸಿರುವುದು ಸಮಸ್ಯೆಗಳ ಆಗರಕ್ಕೆ ಕಾರಣವಾಗಿದೆ ಎಂದುಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ಕಾಯ್ದಿರಿಸಿರುವ ಹುಲ್ಲುಗಾವಲು ಭೂಮಿ ಮಂಜೂರು ಬೇಡ

ಪ್ರಸ್ತುತ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಒಳಚರಂಡಿ ಪಿಟ್‌ ತುಂಬಿ ರಸ್ತೆ ತುಂಬೆಲ್ಲ ಹರಿದಾಡುವುದರ ಜತೆಗೆ ಕೆಲವು ಮನೆಗಳಲ್ಲಿ
ಟಾಯ್ಲೆಟ್‌ಗಳು ತುಂಬಿ ಮನೆ ತುಂಬೆಲ್ಲ ಹರಡಿ ವಾಸಿಸಲು ಆಗದೆ ಹಲವರು ಮನೆ ಬಿಟ್ಟು ದೂರದ ನೆಂಟರ ಮನೆಯಲ್ಲಿ ವಾಸ ಮಾಡಿರುವ
ಘಟನೆ ಪಟ್ಟಣದ ಪೇಟೆ ಕೊರಮರ ಬೀದಿ ಹೊರತಾಗಿ ಉಳಿದಿಲ್ಲ.

Advertisement

ಈ ಬಗ್ಗೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಶಾಂತಲಾ ಮಾತನಾಡಿ, ಪಟ್ಟಣದಲ್ಲಿ ಹಲವು ಭಾಗಗಳಲ್ಲಿ ಪಿಟ್‌ಗಳು ತುಂಬಿದ ಸಾರ್ವಜನಿಕ
ಜೀವನಕ್ಕೆ ಮಾರಕವಾಗಿರುವುದು ನಿಜ. ತಮ್ಮ ಮನೆಗಳಲ್ಲಿನ ಒಳಚರಂಡಿ ಪಿಟ್‌ಗೆ ಬೇಡದ ವಸ್ತು ಹಾಕಿರುವುದು ಸಮಸ್ಯೆಗಳ ಉಲ್ಬಣಕ್ಕೆ ಕಾರಣ. ದಯಮಾಡಿ ಮನೆ ಮಾಲಿಕರು ನಿಮ್ಮ ಮನೆಯಲ್ಲಿನ ಕಸ ಕಡ್ಡಿ ಇತ್ಯಾದಿಗಳನ್ನು ಪುರಸಭೆಯ ತ್ಯಾಜ್ಯವಸ್ತುಗಳ ಸಾಗಾಟಮಾಡುವ
ವಾಹನಗಳಲ್ಲಿ ಹಾಕಿ ಉಪಕರಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next