Advertisement

ನಗರಸಭೆ ಸಭೆ : ಕಾರ್ಯವೈಖರಿಗೆ ಬಿಜೆಪಿ ಪ್ರತಿಭಟನೆ

07:38 PM Jul 17, 2019 | Team Udayavani |

ಕಾಸರಗೋಡು: ಹಲವು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದರೂ ಕಾಸರಗೋಡು ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗದ ಆಡಳಿತ ಸಮಿತಿಯ ಕಾರ್ಯ ವೈಖರಿಯನ್ನು ಬಿಜೆಪಿ ಸದಸ್ಯರು ನಗರಸಭಾ ಸಭೆಯಲ್ಲಿ ಪ್ರತಿಭಟಿಸಿದರು.

Advertisement

ನಗರದ ಪರಿಸ್ಥಿತಿ ತೀರ ಹದಗೆಟ್ಟಿದೆ. ಅಭಿವೃದ್ಧಿ ಕುಂಠಿತವಾಗಿದೆ. ಮಲಿನ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಮಾಲಿನ್ಯ ಸಂಸ್ಕರಣೆಗೆ ಶಾಸ್ತ್ರೀಯವಾದ ವ್ಯವಸ್ಥೆಯಿಲ್ಲ. ಹದಗೆಟ್ಟ ರಸ್ತೆಗಳು. ಇಡೀ ನಗರ ದಾರಿ ದೀಪಗಳಿಲ್ಲದೆ ಕತ್ತಲಲ್ಲಿ ಮುಳುಗಿ ಹೋಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಗೊಳಿಸಲು ನಗರಸಭಾ ಅಧಿಕೃತರು ತಯಾರಾಗುವುದಿಲ್ಲ.

ಪಳ್ಳಂ ಮತ್ತು ಚೆನ್ನಿ ಕೆರೆಯಲ್ಲಿರುವ ಹಿಂದೂ ರುದ್ರಭೂಮಿಯ ಆಧುನೀಕರಣಕ್ಕೆ ಯೋಜನೆಗಳಿಲ್ಲ. ಒಟ್ಟಾರೆ ಕಾಸರಗೋಡು ನಗರ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ ಎಂದು ಆರೋಪಿಸಿದರು.

ಇದಕ್ಕೆ ಕಾರಣಕರ್ತರು ಬಹಳ ವರ್ಷಗಳಿಂದ ನಗರಸಭೆಯನ್ನು ಆಳುತ್ತಿರುವ ಮುಸ್ಲಿಂ ಲೀಗ್‌ ನೇತೃತ್ವದ ಆಡಳಿತ ಸಮಿತಿ. ಇನ್ನು ಮುಂದೆ ಇವರಿಗೆ ಈ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಕೂಡಲೇ ನಗರಸಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.


Advertisement

Udayavani is now on Telegram. Click here to join our channel and stay updated with the latest news.

Next