ಚಿಕ್ಕಮಗಳೂರು: ನಗರಸಭೆ ಆಡಳಿತ ಜೀವ ಕಳೆದುಕೊಂಡಿದೆ. ಸದಸ್ಯರಿಗೆ ಆಡಳಿತಾತ್ಮಕವಾಗಿ ಯಾವುದೇ ಅನುಭವವಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಟೀಕಿಸಿದರು.
ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಆಡಳಿತ ಸಂಪೂರ್ಣ ನೆಲಕಚ್ಚಿದೆ. ನಗರಸಭೆಯನ್ನು ಎಚ್ಚರಿಸಬೇಕಾದ ವಿರೋಧ ಪಕ್ಷದ ಸದಸ್ಯರು ಕಿವಿ, ಕಣ್ಣು ಮುಚ್ಚಿಕೊಂಡಿದ್ದಾರೆ. ಅವರು ಕಿವಿ, ಕಣ್ಣು ಬಿಟ್ಟು ಕೆಲಸ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
40ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ಬ್ಲಾಕ್‌ವೆುೕಲ್ ರಾಜಕಾರಣ ಮಾಡಿಲ್ಲ. ನಗರಸಭೆ ಕಸ ಸಂಗ್ರಹಣೆ ಟೆಂಡರ್ ವಿಚಾರದಲ್ಲಿ ನಗರಸಭೆ ಅಧ್ಯಕ್ಷೆ ಹಾಗೂ ಅವರ ಪತಿ ರಾಜಶೇಖರ್ ಅವರೇ ಕಸ ತೆಗೆಯುವ ಜವಾಬ್ದಾರಿ ವಹಿಸಿಕೊಳ್ಳುವುದಾದರೆ ಅವರಿಗೆ ವಹಿಸಿಕೊಡುತ್ತೇವೆ ಎಂದು ಉದ್ದಟನದ, ಅವಿವೇಕದ ಮಾತಗಳನ್ನು ನಗರಸಭೆ ಆಡಳಿತ ಪಕ್ಷದ ಸದಸ್ಯರು ಆಡಿದ್ದಾರೆ ಎಂದು ಕಿಡಿಕಾರಿದರು.
ಮಾಹಿತಿ ಹಕ್ಕಿನಡಿಯಲ್ಲಿ ಟೆಂಡರ್ ನೀಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಸಂಸ್ಥೆ ತಿಂಗಳಿಗೆ ಮೂರು ಲಕ್ಷ ನಷ್ಟ ಮಾಡಿಕೊಂಡು ಕಸ ಸಂಗ್ರಹಣೆ ಮಾಡುತ್ತಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಮಳಿಗೆಗಳಲ್ಲಿ ದುಬಾರಿ ಹಣ ಪಡೆಯುತ್ತಿರುವುದು ಇವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ ಅವರು, ಆಡಳಿತ ಪಕ್ಷದ ಸದಸ್ಯರು ಗುತ್ತಿಗೆ ಮಾಡುವುದನ್ನು ಕಲಿತು ಜನರ ಬದುಕನ್ನು ಸರ್ವನಾಶ ಮಾಡಿದ್ದಾರೆ. ಜನರು ನಿಮ್ಮನ್ನು ಗುತ್ತಿಗೆ ಮಾಡಲಿ ಎಂದು ಆರಿಸಿ ಕಳಿಸಿಲ್ಲ ಎಂದರು. ಕಸಸಂಗ್ರಹಣೆ ಮಾಡುವುದನ್ನು ಗುತ್ತಿಗೆ ನೀಡದಿರುವುದರನ್ನು ಪ್ರಶ್ನಿಸಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗುವುದು. ನಗರಾಭಿವೃದ್ಧಿ ಸಚಿವರ ಗಮನಕ್ಕೂ ತರಲಾಗುವುದು. ಜಮೀರ್ ಅಹಮದ್ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೀರಿನ ಪೈಪ್‌ಗ್ಳನ್ನು ಮಾರಿಕೊಂಡಿದ್ದಾರೆ ಎಂದು ನಗರಸಭೆ ಅಧ್ಯಕ್ಷರು ಆರೋಪ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದರು.
ಎಂ.ಜಿ.ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಇಂದು ದೊಡ್ಡ ಗುಂಡಿ ತೆಗೆಯಲಾಗುತ್ತಿದೆ. ಅಮೃತ್ ಯೋಜನೆಯಡಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗುತ್ತಿದೆ. ನಗರದ ಎಲ್ಲಾ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ. ಇದು ನಗರಸಭೆ ಅಧ್ಯಕ್ಷರ ಗಮನದಲ್ಲಿಲ್ಲವೆ? ಅಧ್ಯಕ್ಷರು ಪರಿಶೀಲನೆ ಮಾಡಿದ್ದಾರಾ ಎಂದ ಅವರು, ನಗರಸಭೆ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದರು.