Advertisement

ಶ್ರಮಿಕರ ಸಮಸ್ಯೆಗಳಿಗೆ ಸ್ಪ‌ಂದಿಸಲು ನಗರಸಭೆ ಬದ್ಧ: ರಮೇಶ್‌ 

12:30 AM Feb 09, 2019 | |

ಮಡಿಕೇರಿ: ಸರ್ಕಾರಿ ವ್ಯವಸ್ಥೆಯೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈಜೋಡಿಸಿ ಸಾಮಾಜಿಕ ಕಳಕಳಿಯನ್ನು ಮೆರೆದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟಿರುವ ಮಡಿಕೇರಿ ನಗರಸಭಾ ಆಯುಕ್ತ ರಮೇಶ್‌ ನಗರದ ಸ್ವಚ್ಛತೆ ಕಾಪಾಡುವ ಶ್ರಮಿಕ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಲು ನಗರಸಭೆ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರಸಭೆಯ ಸ್ವಚ್ಛತಾಸಿಮಂದಿಗೆ  ಸ್ವೆಟರ್‌ ವಿತರಿಸಯಿತು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಚ್ಛತಾ ಸಿಬಂದಿ ನಗರದ ಸ್ವಚ್ಛತೆ ಕಾಪಾಡಲು ನಿರಂತರ ಶ್ರಮವಹಿಸುತ್ತಿದ್ದು, ಇವರ ಬಗ್ಗೆ ನಗರಸಭೆಗೆ ಅನುಕಂಪವಿದೆ. ಶ್ರಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸ್ವಚ್ಛತೆಯ ಬಗ್ಗೆ ಹೆಚ್ಚು ಅರಿವು ಮಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಉಪವೈದ್ಯಾಧಿಕಾರಿ ಡಾ.ಹೆಚ್‌.ವಿ.ದೇವದಾಸ್‌, ಸ್ವಚ್ಛತಾ ಸಿಬಂದಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ.ಕೆ.ದಾಮೋದರ್‌ ಮಾತನಾಡಿ ಸ್ವಚ್ಛತಾ ಸಿಬ್ಬಂದಿಗಳ ಸ್ವಚ್ಛತಾ ಕಾರ್ಯ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯವೆಂದರು. 

ಔಷಧ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್‌ ಜೀವನ್‌ ಮಾತನಾಡಿ, ಮಡಿಕೇರಿ ನಗರ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಗಮನ ಸೆಳೆಯಲು ಸ್ವಚ್ಛತಾ ಕಾರ್ಮಿಕರ ಶ್ರಮವೂ ಮುಖ್ಯ ಕಾರಣವೆಂದರು. ಸಿಬ್ಬಂದಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದರು.

ದಾನಿಗಳಾದ ಗಾಳಿಬೀಡು ಟಿ.ಆರ್‌.ವಾಸುದೇವ್‌, ಮಡಿಕೇರಿ ಖಲೀಲ್‌, ದಸಂಸ ಸಂಚಾಲಕ ಎನ್‌.ವೀರಭದ್ರಯ್ಯ, ಸಂಘಟನಾ ಸಂಚಾಲಕ ಎ.ಪಿ.ದೀಪಕ್‌ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನಂತರ ನಗರಸಭೆಯ 56 ಸ್ಪಚ್ಛತಾ ಸಿಬಂದಿಗೆ ಸ್ವೆಟರ್‌ ವಿತರಿಸಲಾಯಿತು.

Advertisement

ಕಾರ್ಯ ಶ್ಲಾಘನೀಯ
ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ‌ .ದಿವಾಕರ್‌ ಸ್ವಚ್ಛತಾ ಸಿಬಂದಿ ಸಾರ್ವಜನಿಕರ ಹಿತ ಕಾಪಾಡುವ ದೇವರು ಎಂದ‌ರು. ಸ್ವಚ್ಛತಾ ಸಿಬಂದಿಯಿಲ್ಲದೇ ಹೋಗಿದ್ದರೆ ಆರೋಗ್ಯದಿಂದಿರಲು ಸಾಧ್ಯವಿರುತ್ತಿ ರಲಿಲ್ಲ ಎಂದು  ಹೇಳಿದರು. ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಸಿಬಂದಿಗಳ ಕಾರ್ಯ ಶ್ಲಾಘನೀಯವೆಂದರು.  ಮಳೆಗಾಲದಲ್ಲಿ ರೈನ್‌ ಕೋಟ್‌ ಮತ್ತು ಗಂಬೂಟುಗಳನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ನೀಡಲಾಗುವುದು ಎಂದರು. ಸ್ಪಚ್ಛತಾ ಸಿಬಂದಿಗಳು ತಮ್ಮ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉನ್ನತ ಹುದ್ದೆಗಳಿಗೆ ಕಳುಹಿಸುವಂತಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next